ಕೊಲ್ಲೂರು: ತನ್ನ ಜಮೀನಿನೊಳಕ್ಕೆ ಬಂದ ಹತ್ತಾರು ಹಸುಗಳಿಗೆ ಗುಂಡಿಕ್ಕಿದ ನಿರ್ದಯಿ ಮನುಷ್ಯ, ಅಸು ನೀಗಿದ ನಾಲ್ಕು ಹಸುಗಳು

ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಕುಕೃತ್ಯ! ಮನುಷ್ಯ ಇಷ್ಟೊಂದು ಕ್ರೂರಿಯಾಗುವುದು ಸಾಧ್ಯವಾ? ಒಂದು ಹಸು, ಎರಡು ಹಸುವಿಗೆ ಗುಂಡಿಕ್ಕಿದಾಗ ಏನೋ ಮತಿಗೆಟ್ಟಿದೆ ಅನ್ನಬಹುದು... ಆದರೆ ಹತ್ತಾರು ಹಸುಗಳಿಗೆ ಗುಂಡಿಕ್ಕುವಾಗ ಆ ಮನುಷ್ಯನ ಮನಃಸ್ಥಿತಿ ಇನ್ನೆಂತಿರಬಹುದಾಗಿತ್ತು!?

ಕೊಲ್ಲೂರು: ತನ್ನ ಜಮೀನಿನೊಳಕ್ಕೆ ಬಂದ ಹತ್ತಾರು ಹಸುಗಳಿಗೆ ಗುಂಡಿಕ್ಕಿದ ನಿರ್ದಯಿ ಮನುಷ್ಯ, ಅಸು ನೀಗಿದ ನಾಲ್ಕು ಹಸುಗಳು
ಜಮೀನಿನೊಳಕ್ಕೆ ಬಂದ ಹತ್ತಾರು ಹಸುಗಳಿಗೆ ಗುಂಡಿಕ್ಕಿದ ನಿರ್ದಯಿ ಮನುಷ್ಯ
Edited By: ಸಾಧು ಶ್ರೀನಾಥ್​

Updated on: Sep 30, 2023 | 10:52 AM

ಉಡುಪಿ: ಮನುಷ್ಯ ಇಷ್ಟೊಂದು ಕ್ರೂರಿಯಾಗುವುದು ಸಾಧ್ಯವಾ? ಒಂದು ಹಸು, ಎರಡು ಹಸುವಿಗೆ ಗುಂಡಿಕ್ಕಿದಾಗ ಏನೋ ಮತಿಗೆಟ್ಟಿದೆ ಅನ್ನಬಹುದು… ಆದರೆ ಹತ್ತಾರು ಹಸುಗಳಿಗೆ ಗುಂಡಿಕ್ಕುವಾಗ ಆ ಮನುಷ್ಯನ ಮನಃಸ್ಥಿತಿ ಇನ್ನೆಂತಿರಬಹುದಾಗಿತ್ತು!?

ತನ್ನ ಜಮೀನಿನೊಳಕ್ಕೆ ನುಗ್ಗಿ ಬಂದಿವೆ ಎಂಬ ಏಕೈಕ ಕಾರಣಕ್ಕೆ ಅಮಾಯಕ ಹತ್ತಾರು ಹಸುಗಳಿಗೆ ನಾಡಕೋವಿಯಿಂದ ಗುಂಡಿಕ್ಕಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದ (Baindur, Udupi) ಸಮೀಪವಿರುವ ಅಂಗಡಿಜಡ್ಡುವಿನಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಅವು ಅಮಾಯಕ-ಮೂಕ ಪ್ರಾಣಿಗಳು ಎಂಬುದನ್ನೂ ಲೆಕ್ಕಿಸದೆ ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಹಸುಗಳಿಗೆ (cows) ನಾಡಕೋವಿನಿಂದ ಶೂಟ್ ಮಾಡಲಾಗಿದೆ. ತತ್ಪರಿಣಾಮ ನಾಲ್ಕು ಹಸುಗಳು ಅಸುನೀಗಿವೆ. ಗುಲಾಬಿ ಎಂಬ ಮಹಿಳೆಗೆ ಸೇರಿದ ಒಟ್ಟು ನಾಲ್ಕು ಹಸುಗಳು ಸಾವನ್ನಪ್ಪಿವೆ. ಇನ್ನೂ ಆರು ಹಸುಗಳಿಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: ನೋಡಿದವರ ಕರುಳು ಹಿಂಡಿದ ಕರುಳಿನ ಕೂಗು, ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ಬೊಲೆರೋ ವಾಹನ ಬೆನ್ನಟ್ಟಿದ ತಾಯಿ ಹಸು

ಘಟನೆಯ ಬಳಿಕ ಕೊಲ್ಲೂರು (Kollur) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನರಸಿಂಹ ನಾಪತ್ತೆಯಾಗಿದ್ದಾನೆ. ಈ ಮಧ್ಯೆ ದುರುಳು ನರಸಿಂಹ ಹಸುಗಳ ಮಾಲೀಕರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ತನ್ನ ಜಮೀನಿಗೆ ಈ ಹಸುಗಳು ಆಗಾಗ ಬರುತ್ತಿವೆ ಎಂಬ ಕಾರಣಕ್ಕೆ ಕೋಪಗೊಂಡು ಕೋವಿಯಿಂದ ಶೂಟ್ ಮಾಡಿದ್ದಾನೆ ನರಸಿಂಹ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ 

 

Prajwal Amin

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Follow Us