AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಪ್ರಿಯಕರ ಶವವಾಗಿ ಪತ್ತೆ, ಹುಟ್ಟುಹಬ್ಬದಂದೇ ಯುವತಿ ದುರಂತ ಅಂತ್ಯ

ಇವರಿಬ್ಬರು ಅಕ್ಕಪಕ್ಕದ ನಿವಾಸಿಗಳು. ಯುವಕನಿಗೆ ಪಕ್ಕದ ಮನೆ ಯುವತಿ ಮೇಲೆ ಲವ್ ಆಗಿದ್ದು, ಆಕೆಯ ಹುಟ್ಟು ಹಬ್ಬ ದಿನವೇ ಪ್ರೇಯಸಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹುಟ್ಟುಹಬ್ಬದಂದು ಕೇಕ್ ಕತ್ತರಿಸಿ ಸಂಭ್ರಮಿಸಬೇಕಾಗಿದ್ದವಳು ಹೆಣವಾಗಿದ್ದಾಳೆ. ಇನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಸ್ವಲ್ಪ ಹೊತ್ತಿನಲ್ಲೇ ಶವವಾಗಿ ಪತ್ತೆಯಾಗಿದ್ದಾನೆ.

ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಪ್ರಿಯಕರ ಶವವಾಗಿ ಪತ್ತೆ, ಹುಟ್ಟುಹಬ್ಬದಂದೇ ಯುವತಿ ದುರಂತ ಅಂತ್ಯ
Rakshita And Karthik
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on:Sep 12, 2025 | 9:03 PM

Share

ಉಡುಪಿ, (ಸೆಪ್ಟೆಂಬರ್ 12): ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಕೋಪಗೊಂಡ ಪಾಗಲ್ ಪ್ರೇಮಿ ಯುವತಿಯ ಕತ್ತು ಮತ್ತು ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆಕೆಯ ಹುಟ್ಟುಹಬ್ಬ ದಿನವೇ ಡೆತ್​ ಡೇ ಮಾಡಿದ್ದಾನೆ. ಇನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಸ್ವಲ್ಪ ಹೊತ್ತಿನಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಹೌದು..ಈ ಘಟನೆ ಉಡುಪಿ (Udupi) ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮ ನಡೆದಿದೆ. ಪ್ರಿಯಕರ ಕಾರ್ತಿಕ್ ಇಂದು (ಸೆ.12) ಬೆಳಗ್ಗೆ ರಕ್ಷಿತಾ ಪೂಜಾರಿ ಹುಟ್ಟುಹಬ್ಬ ದಿನವೇ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಸಹ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾರ್ತಿಕ್ ಹಾಗೂ ರಕ್ಷಿತಾ ಪೂಜಾರಿ ಅಕ್ಕಪಕ್ಕದ ನಿವಾಸಿಗಳಾಗಿದ್ದು, ಕಾರ್ತಿಕ್ ರಕ್ಷಿತಾಳನ್ನು ಪ್ರೀತಿಸುತ್ತಿದ್ದ. ಆದ್ರೆ, ಇಬ್ಬರ ಮದುವೆಗೆ ರಕ್ಷಿತಾಳ ಮನೆಯವರು ಒಪ್ಪಿಕೊಂಡಿಲ್ಲ. ಇದರಿಂದ ರಕ್ಷಿತಾ, ಕಾರ್ತಿಕ್​ ಮೊಬೈಲ್ ನಂಬರ್ ಬ್ಲಾಕ್ ಲಿಸ್ಟ್​ ಗೆ ಹಾಕಿದ್ದಳು. ಇದರಿಂದ ಕೆರಳಿದ ಕಾರ್ತಿಕ್, ಇಂದು ಆಕೆ ಹುಟ್ಟುಹಬ್ಬ ದಿನೇ ಚಾಕುವಿನಿಂದ ಇರಿದು ಪರಾರಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಕ್ಷಿತಾ ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ,

ಇದನ್ನೂ ಓದಿ: ಪತ್ನಿಯನ್ನು ತವರಿಗೆ ಕರೆತಂದಿದ್ದಕ್ಕೆ ಅತ್ತೆಯನ್ನೇ ಹತ್ಯೆಗೈದ: ಅಳಿಯನ ಕ್ರೌರ್ಯ ಸಿಸಿ ಟಿವಿಯಲ್ಲಿ ಸೆರೆ

ಇನ್ನು ಪ್ರೇಯಸಿಗೆ ಚಾಕುವಿನಿಂದ ಚುಚ್ಚಿ ಬಳಿಕ ಕಾರ್ತಿಕ್ ಅಲ್ಲೇ ಇದ್ದ ಒಂದು ಬಾವಿಗೆ ಹಾರಿದ್ದಾನೆ. ಆದ್ರೆ, ಇತ್ತ ಪೊಲೀಸರು ಎಲ್ಲೋ ಪರಾರಿಯಾಗಿದ್ದಾನೆಂದು ಹುಡುಕಾಟ ನಡೆಸಿದ್ದರು. ಆದ್ರೆ, ಘಟನಾ ಸ್ಥಳದಲ್ಲಿ ಬಾವಿಯಲ್ಲೇ ಕಾರ್ತಿಕನ ಶವ ಪತ್ತೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:55 pm, Fri, 12 September 25

Follow Us
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!