AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಳುನಾಡಿನ ಆಚರಣೆಗೆ ಕೊರೊನಾ ಕಂಟಕ, ಸೇವೆ ತಪ್ಪಿಸಿದ್ರೆ ತೊಂದರೆಯಾಗುತ್ತಾ?

ಉಡುಪಿ: ಕರಾವಳಿಯ ತುಳುನಾಡು ಭಾಗದ ಜನರ ಆಚರಣೆ ವಿಶಿಷ್ಟ ವಿಭಿನ್ನವಾಗಿರುತ್ತದೆ. ಕೂಡು ಕುಟುಂಬಗಳಲ್ಲಿ ನಡೆಯುತ್ತಿದ್ದ ಬೋಗ ತಂಬಿಲ ಈ ಬಾರಿಯ ಲಾಕ್​ಡೌನ್​ನಿಂದಾಗಿ ನಡೆಯುತ್ತಿಲ್ಲ. ಆದರೆ ಇದರಿಂದ ಏನಾದರೂ ತೊಂದರೆ ಉಂಟಾಗಬಹುದು ಎಂಬುದು ಕರಾವಳಿ ಜನತೆಗೆ ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಇಲ್ಲಿದೆ. ಹಳ್ಳಿಗಳಲ್ಲಿ ಜನಸಾಮಾನ್ಯರು ಅವರ ನಂಬಿಕೆ, ಆಚರಣೆ ಬಗ್ಗೆ ಒಂದು ರೀತಿ ಮಾತನಾಡಿದರೆ, ಜಾನಪದ ವಿದ್ವಾಂಸರು ಇನ್ನೊಂದು ಬಗೆಯಾಗಿ ಮಾತನಾಡುತ್ತಾರೆ. ಆದರೆ ಸರಿಯಾದ ಪರಿಹಾರ ಸಿಗದೇ ಸಾಕಷ್ಟು ತುಳುನಾಡ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಾಡಿನಾದ್ಯಂತ ವಕ್ಕರಿಸಿದ […]

ತುಳುನಾಡಿನ ಆಚರಣೆಗೆ ಕೊರೊನಾ ಕಂಟಕ, ಸೇವೆ ತಪ್ಪಿಸಿದ್ರೆ ತೊಂದರೆಯಾಗುತ್ತಾ?
Follow us
ಆಯೇಷಾ ಬಾನು
| Updated By:

Updated on: May 27, 2020 | 3:16 PM

ಉಡುಪಿ: ಕರಾವಳಿಯ ತುಳುನಾಡು ಭಾಗದ ಜನರ ಆಚರಣೆ ವಿಶಿಷ್ಟ ವಿಭಿನ್ನವಾಗಿರುತ್ತದೆ. ಕೂಡು ಕುಟುಂಬಗಳಲ್ಲಿ ನಡೆಯುತ್ತಿದ್ದ ಬೋಗ ತಂಬಿಲ ಈ ಬಾರಿಯ ಲಾಕ್​ಡೌನ್​ನಿಂದಾಗಿ ನಡೆಯುತ್ತಿಲ್ಲ. ಆದರೆ ಇದರಿಂದ ಏನಾದರೂ ತೊಂದರೆ ಉಂಟಾಗಬಹುದು ಎಂಬುದು ಕರಾವಳಿ ಜನತೆಗೆ ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಇಲ್ಲಿದೆ.

ಹಳ್ಳಿಗಳಲ್ಲಿ ಜನಸಾಮಾನ್ಯರು ಅವರ ನಂಬಿಕೆ, ಆಚರಣೆ ಬಗ್ಗೆ ಒಂದು ರೀತಿ ಮಾತನಾಡಿದರೆ, ಜಾನಪದ ವಿದ್ವಾಂಸರು ಇನ್ನೊಂದು ಬಗೆಯಾಗಿ ಮಾತನಾಡುತ್ತಾರೆ. ಆದರೆ ಸರಿಯಾದ ಪರಿಹಾರ ಸಿಗದೇ ಸಾಕಷ್ಟು ತುಳುನಾಡ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಾಡಿನಾದ್ಯಂತ ವಕ್ಕರಿಸಿದ ಮಹಾಮಾರಿ ಕೊರೊನಾದಿಂದಾಗಿ ಕರಾವಳಿಯಲ್ಲಿ ನಡೆಯಬೇಕಿದ್ದ ನೇಮೋತ್ಸವ, ಇನ್ನಿತರ ದೇವತಾ ಕಾರ್ಯಕ್ರಮಗಳು ನಡೆದಿಲ್ಲ. ಇದರಿಂದ ಏನಾದರು ಜನರಿಗೆ ತೊಂದರೆ ಆಗಬಹುದೇ ಎಂಬುದು ಉಡುಪಿ ಜಿಲ್ಲೆಯ ಜನರ ಪ್ರಶ್ನೆ.

ದೇವರಿಗೆ ಸೇವೆ ಸಲ್ಲಿಸದಿದ್ದರೆ ಏನಾಗುತ್ತೆ? ಮುಖ್ಯವಾಗಿ ಕೂಡು ಕುಟುಂಬಗಳಲ್ಲಿ ನಡೆಯುತ್ತಿದ್ದಂತಹ ಬೋಗ ತಂಬಿಲ, ಗುಡ್ಡದ ಭೂತ, ಸೇವೆಗಳು ನಡೆಸಲು ಅಸಾಧ್ಯವಾಗಿದೆ. ಕೆಲವೊಂದು ಕುಟುಂಬ ತಮಗೆ ಅನುಕೂಲಕರವಾಗಿ ಬೆಳಗ್ಗೆ ಹೊತ್ತು ಈ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಆದರೆ ಇದರಿಂದ ದೈವ-ದೇವರುಗಳ ಸಂತೃಪ್ತಿ ಆಗುವರೇ ಎಂಬ ಒಂದು ಪ್ರಶ್ನೆ ಜನರಲ್ಲಿ ಮೂಡಿದೆ. ಹೌದು ವರ್ಷಕ್ಕೊಮ್ಮೆ ಕೂಡು ಕುಟುಂಬದಲ್ಲಿ ನಡೆಯುತ್ತಿದ್ದ ಈ ಸೇವೆಯಲ್ಲಿ ಹೊಟ್ಟೆಪಾಡಿಗಾಗಿ ದುಡಿಯಲು ಹೊರರಾಜ್ಯಕ್ಕೆ ತೆರಳಿದ ಎಲ್ಲಾ ಕುಟುಂಬಸ್ಥರು ಸೇರುತ್ತಿದ್ದರು.

ತಮ್ಮ ಮನೆದೇವರ ಆರಾಧನೆ ಮಾಡುವ ಒಂದು ಕುಟುಂಬದ ಮನೆಯಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತಿದ್ದವು. ದೈವ-ದೇವರುಗಳ ಪೂಜೆ ಪುನಸ್ಕಾರ ಮುಗಿಸಿ ರಾತ್ರಿ ದೇವರ ಪ್ರಸಾದ ಸ್ವೀಕರಿಸಿ ಮನೆಗೆ ತೆರಳುವಾಗ ಬಹಳಹೊತ್ತು ಆಗುತ್ತಿತ್ತು. ಆದರೆ ಈ ಬಾರಿ ಲಾಕ್​ಡೌನ್ ಹಿನ್ನೆಲೆಯಲ್ಲಿ 7 ಗಂಟೆಯ ನಂತರ ತಿರುಗಾಟಕ್ಕೆ ಅವಕಾಶ ಇಲ್ಲದ ಕಾರಣ ಈ ಸೇವೆಯನ್ನು ಬೆಳಗ್ಗೆ ಮಾಡಿ ಮುಗಿಸುತ್ತಿದ್ದಾರೆ.

ಇದರಿಂದ ಏನಾದರೂ ನಮಗೆ ತೊಂದರೆ ಆಗಬಹುದೇ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಉಡುಪಿ ಜಿಲ್ಲೆಯ ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಈ ಬಗ್ಗೆ ಮಾತನಾಡಿದ್ದಾರೆ. ತುಳುನಾಡಿನಲ್ಲಿ ದೇವರುಗಳಿಗಿಂತ ದೈವ ದೇವರುಗಳನ್ನು ಹೆಚ್ಚಾಗಿ ನಂಬುತ್ತಾರೆ. ಕುಟುಂಬದ ಸದಸ್ಯರು ಒಟ್ಟಾಗಿ ಶ್ರದ್ಧಾ ಭಕ್ತಿಯಿಂದ ಕೈಮುಗಿದು ಬೇಡಿಕೊಂಡರೆ ತಮ್ಮ ಎಲ್ಲ ತಪ್ಪುಗಳನ್ನು ಮನ್ನಿಸುತ್ತಾರೆ ಎಂಬುದು ತುಳುನಾಡ ಜನರ ನಂಬಿಕೆ.

ಪ್ರತಿ ವರ್ಷ ನಡೆಯುವ ಈ ಸೇವೆಯಲ್ಲಿ ದೂರದೂರದಿಂದ ವಾಸವಾಗಿರುವ ಕುಟುಂಬದ ಸದಸ್ಯರನ್ನು ಒಂದುಗೂಡಿಸಲು ಈ ಸೇವೆಗಳು ನಡೆಯುತ್ತಿದ್ದವು. ದೇವರ ಬಳಿ ಕುಟುಂಬಸ್ಥರು ಒಂದಾಗಿ ತಮ್ಮ ಕಷ್ಟಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಮುಂಬೈ ರಾಜ್ಯದಲ್ಲಿ ನೆಲೆಸಿರುವ ತುಳುವರು ಹೆಚ್ಚಾಗಿ ಭಾಗವಹಿಸಿದ್ದರು. ಈ ಬಾರಿ ಜನರು ಈ ಸೇವೆಯನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ನಾವು ಈ ಸೇವೆಯನ್ನು ನೀಡದಿದ್ದರೆ ನಮಗೆ ಏನಾದರೂ ತೊಂದರೆ ಆಗಬಹುದೇ ಎಂಬುದು ಒಂದು ಕಡೆ ಆದರೆ ಇಂತಹ ದೇವತಾ ಕಾರ್ಯಕ್ರಮಗಳು ರಾತ್ರಿಹೊತ್ತು ನಡೆಯುವುದರಿಂದ ಈ ಕಾರ್ಯಕ್ರಮಕ್ಕೆ ಹೋಗಲು ಪೊಲೀಸರ ಲಾಠಿ ಏಟಿಗೆ ಹಿಂಜರಿಯುತ್ತಿದ್ದಾರೆ.

ತುಳುನಾಡಲ್ಲಿ ನಡೆಯುತ್ತಿದ್ದ ಆಚರಣೆಯಲ್ಲಿ ಹಿಂದೆ ನಂಬಿಕೆ ಭಕ್ತಿ ಎಲ್ಲವೂ ಕೂಡಿದೆ. ಆದರೆ ಈ ಬಾರಿ ನಾಡಿನಾದ್ಯಂತ ಬಂದಿರುವ ಮಹಾಮಾರಿ ಕೊರೊನಾದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಏನೇ ಆಗಲಿ ತಾವು ನಂಬಿಕೊಂಡು ಬಂದಂತಹ ದೈವ-ದೇವರುಗಳ ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬ ನಂಬಿಕೆಯಲ್ಲಿ ಬದುಕ್ತಿರೂ ಈ ಜನರ ನಂಬಿಕೆ ಸುಳ್ಳಾಗದಿರಲಿ.

ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ