ಸಮವಸ್ತ್ರ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಸರಿಯಲ್ಲ; ಕುಂದಾಪುರದ ಮುಸ್ಲಿಂ ಮುಖಂಡ ಮನ್ಸೂರ್ ಗರಂ
ಹಿಜಾಬ್ ಎಂಬ ಶಬ್ದಬಳಕೆ ಸರಿಯಲ್ಲ. ಹಿಜಾಬ್ ಎಂದರೆ ಬುರ್ಖಾ ಎಂದು ಅರ್ಥ. ವಿದ್ಯಾರ್ಥಿಗಳು ಹೆಡ್ ಸ್ಕಾರ್ಫ್ ಗಾಗಿ ಒತ್ತಾಯ ಮಾಡುತ್ತಿದ್ದಾರೆ. ಸಂಬಂಧಿಸಿ ಸಮವಸ್ತ್ರ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಸರಿಯಲ್ಲ.
ಉಡುಪಿ: ಉಡುಪಿಯಲ್ಲಿ ಹೊತ್ತಿಕೊಂಡ ಸಮವಸ್ತ್ರದ ಸಮರ ಈಗ ರಾಜ್ಯಾದ್ಯಂತ ವ್ಯಾಪಿಸಿದೆ. ಓದಿನಲ್ಲಿ ಇದ್ದ ಕಾಂಪಿಟೇಶನ್ ಈಗ ಕೇಸರಿ ಶಾಲು ಮತ್ತು ಹಿಜಾಬ್ ನಡುವೆ ನಡೆಯುತ್ತಿದೆ. ಕೇಸರಿ ಶಾಲು-ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಶಾಲೆಯ ಒಳಗೆ ಪ್ರವೇಶ ನೀಡಲಾಗುತ್ತಿಲ್ಲ. ಸದ್ಯ ಹಿಜಾಬ್, ಕೇಸರಿ ಶಾಲು ಎರಡಕ್ಕೂ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ. ಹಿಜಾಬ್, ಕೇಸರಿ ಶಾಲು ಧರಿಸಿ ಬರಲು ಅವಕಾಶ ನೀಡಲಾಗುತ್ತಿಲ್ಲ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿದೆ. ಸದ್ಯ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಆದೇಶ ವಿಚಾರಕ್ಕೆ ಸಂಬಂಧಿಸಿ ಸಮವಸ್ತ್ರ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಸರಿಯಲ್ಲ ಎಂದು ಕುಂದಾಪುರದ ಮುಸ್ಲಿಂ ಮುಖಂಡ ಮನ್ಸೂರ್ ತಿಳಿಸಿದ್ದಾರೆ.
ಹಿಜಾಬ್ ಎಂಬ ಶಬ್ದಬಳಕೆ ಸರಿಯಲ್ಲ. ಹಿಜಾಬ್ ಎಂದರೆ ಬುರ್ಖಾ ಎಂದು ಅರ್ಥ. ವಿದ್ಯಾರ್ಥಿಗಳು ಹೆಡ್ ಸ್ಕಾರ್ಫ್ ಗಾಗಿ ಒತ್ತಾಯ ಮಾಡುತ್ತಿದ್ದಾರೆ. ಸಂಬಂಧಿಸಿ ಸಮವಸ್ತ್ರ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಸರಿಯಲ್ಲ. ಪ್ರಕರಣ ಕೋರ್ಟ್‌ನಲ್ಲಿರುವಾಗ ಕಾಲೇಜಲ್ಲಿ ಸಮವಸ್ತ್ರ ಕಡ್ಡಾಯದ ಆದೇಶ ಮಾಡಿದ್ದು ಸರಿಯಲ್ಲ. ಫೆಬ್ರವರಿ 8 ಹೈಕೋರ್ಟ್ ಆದೇಶದವರೆಗೆ ನಾವು ಕಾಯುತ್ತೇವೆ. ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಬಾರದು. ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಸಮಸ್ಯೆ ಆಗಬಾರದು. ಹಿಜಾಬ್ ಬಹಳ ಹಿಂದಿನಿಂದಲೂ ಬಂದಿರುವ ಸಂಪ್ರದಾಯ ಎಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಮನ್ಸೂರ್ ತಿಳಿಸಿದ್ದಾರೆ.
ಜಾತಿಗೊಂದು ಸಮವಸ್ತ್ರ ಇರಬೇಕಾ? ಇನ್ನು ಮತ್ತೊಂದೆಡೆ ಶಾಲೆ-ಕಾಲೇಜುಗಳಲ್ಲಿ ಜಾತಿಗೊಂದು ಸಮವಸ್ತ್ರ ಇರಬೇಕಾ? ಎಂದು ಗೋವಾದಲ್ಲಿ ಹಿಜಾಬ್ ವಿವಾದದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಲಾಯರ್ಗೆ, ಸೈನಿಕನಿಗೆ ಒಂದು ಡ್ರಸ್ ಕೋಡ್ ಇದೆ. ಮಕ್ಕಳಲ್ಲಿ ಮತೀಯತೆ ವಿಷಬೀಜ ಬಿತ್ತುವುದು ಅಪಾಯ. ಹಿಜಾಬ್ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಧಾರ್ಮಿಕ ಹಕ್ಕು ಅಂದ್ರೆ ಸ್ವೇಚ್ಛಾಚಾರದ ಅಧಿಕಾರ ಅಲ್ಲ. ಸಮಾನತೆಗಾಗಿಯೇ ಶಾಲೆಗೊಂದು ಯೂನಿಫಾರ್ಮ್ ನೀಡಿರುವುದು. ಸಿದ್ದರಾಮಯ್ಯ ಮೇಲೆ ಯಾವಾಗ ಜಿನ್ನಾ ಭೂತ ಆವರಿಸಿತು. ಸೌದಿ, ಪಾಕಿಸ್ತಾನದಲ್ಲಿಯೇ ಹಿಜಾಬ್ ಕಡ್ಡಾಯ ಮಾಡಿಲ್ಲ. ಜಿನ್ನಾ ಭಾರತ ದೇಶವನ್ನು ಬಿಟ್ಟು ಹೋಗಿಯಾಯ್ತು. ಜಿನ್ನಾ ಭೂತ ಕಾಂಗ್ರೆಸ್ನವರ ಮೈಮೇಲೆ ಹೊಕ್ಕಿದೆ ಎಂದರು.
ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗ್ತಿದೆ. ಹಿಜಾಬ್ ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕು. ಆದ್ರೆ ಕಾಲೇಜುಗಳಲ್ಲಿ ಹಿಜಾಬ್ ಧರಿಸದಂತೆ ಆದೇಶಿಸಲಾಗಿದೆ ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸರ್ ಅಹ್ಮದ್ ಹೇಳಿದ್ದಾರೆ. ನ್ಯಾಯಾಲಯದಲ್ಲಿ ಪರಿಹಾರ ಕೇಳಿದಿದ್ರೆ ಕಾಲೇಜಿನಿಂದ ವಿದ್ಯಾರ್ಥಿನಿಯರು ಹೊರಗುಳಿಯುವ ಸ್ಥಿತಿ ಬರುತ್ತಿರಲಿಲ್ಲ. ಹಿಜಾಬ್ ವಿರುದ್ಧ ಕೇಸರಿ ಶಾಲು ಹೋರಾಟ ಸಂಘಪರಿವಾರದ ಷಡ್ಯಂತ್ರ. ಬಿಜೆಪಿ ಹಾಗೂ ಎಸ್ಡಿಪಿಐ ಎರಡೂ ಕೂಡ ಈ ಗಲಭೆಗೆ ಕಾರಣ. ಪ್ರಜ್ಞಾವಂತ ನಾಗರಿಕರು ಇದಕ್ಕೆ ಆಸ್ಪದ ಕೊಡಬಾರದು. ನ್ಯಾಯಾಲಯದ ತೀರ್ಪು ಬರೋ ಮೊದಲೇ ಸರ್ಕಾರ ಸಮವಸ್ತ್ರ ಕಡ್ಡಾಯ ಆದೇಶ ಸರಿಯಲ್ಲ. ಸರ್ಕಾರ ದುಡುಕಿ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ದಿನದಲ್ಲಿ ಕೋಮುಗಲಭೆ ಹೆಚ್ಚಾದರೆ ಹಿಜಾಬ್ ಹಾಗೂ ಕೇಸರಿ ಹಿಂದಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ರು.
ಸರ್ಕಾರದ ಆದೇಶ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿದೆ ಸರಕಾರದ ಆದೇಶಕ್ಕೆ ಹಿಂದೂ ಮುಖಂಡರ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ವಿವಾದ ರಾಜ್ಯದಲ್ಲಿ ನಿರಂತರ ಗೊಂದಲಕ್ಕೆ ಕಾರಣವಾಗಿತ್ತು. ಸರ್ಕಾರದ ಆದೇಶ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿದೆ. ಇದು ತುರ್ತಾಗಿ ಬರಬೇಕಾಗಿದ್ದ ಆದೇಶ. ಈ ಆದೇಶವನ್ನು ಹಿಂದೂ ಜಾಗರಣ ವೇದಿಕೆ ಸ್ವಾಗತಿಸುತ್ತೆ. ಸರ್ಕಾರದಲ್ಲಿ ಅನೇಕ ಗೊಂದಲಗಳಿದ್ದವು. ವಸ್ತ್ರಸಂಹಿತೆ ಈ ಹಿಂದೆಯೂ ಕಾಲೇಜುಗಳಲ್ಲಿ ಇದ್ದ ನೀತಿ ಇದನ್ನು ಬೇರೆ ಬೇರೆ ರೀತಿಯಲ್ಲಿ ಬಿಂಬಿಸುವ ಪ್ರಯತ್ನಗಳನ್ನು ಮತೀಯ ಶಕ್ತಿಗಳು ನಡೆಸಿದವು. ಇದರ ನಿವಾರಣೆಗೆ ಸರಕಾರ ಆದೇಶ ಅನುಕೂಲವಾಗಲಿದೆ. ಎಲ್ಲಾ ಕಾಲೇಜುಗಳಲ್ಲೂ ಸಮಾನ ವಸ್ತ್ರ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಧಾರ್ಮಿಕ ವಾತಾವರಣವನ್ನು ಶೈಕ್ಷಣಿಕ ವಾತಾವರಣದ ಜೊತೆ ತಳುಕು ಹಾಕುವುದು ನಿಲ್ಲಬೇಕು. ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರವೀಣ ಯಕ್ಷಿಮಠ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಪಕ್ಷ ಕಾರಣ ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಪಕ್ಷ ಕಾರಣ. ಕಾಂಗ್ರೆಸ್‌ನವರ ಯಾವುದೇ ತಂತ್ರಗಳು ಫಲಿಸುವುದಿಲ್ಲ ಎಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿಯಲ್ಲಿ ಬೆಳಗಾವಿ ಜಿಲ್ಲೆಯ ರಾಯಭಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಆರೋಪಿಸಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಿಂದ ಇದೆಲ್ಲಾ ಮಾಡ್ತಿದ್ದಾರೆ. ಕಾಂಗ್ರೆಸ್‌ನವರ ಈ ಲೆಕ್ಕಾಚಾರ ಯಶಸ್ವಿಯಾಗುವುದಿಲ್ಲ. ರಾಜ್ಯದ ಜನ ಜಾಗೃತರಾಗಿದ್ದಾರೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಗಿಮಿಕ್ ವರ್ಕೌಟ್ ಆಗಲ್ಲ. ಹಿಜಾಬ್‌ನಿಂದ ಕಾಂಗ್ರೆಸ್‌ಗೆ ಹೊಡೆತ ಬೀಳಲಿದೆ ಎಂದರು.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಮವಸ್ತ್ರ ಆದೇಶ ಪಾಲಿಸಬೇಕು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಮವಸ್ತ್ರ ಆದೇಶ ಪಾಲಿಸಬೇಕು ಎಂದು ಮೈಸೂರಿನಲ್ಲಿ ಟಿವಿ9ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ. ಅಲ್ಲದೆ ಶಾಲೆಗಳಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್‌ಗೆ ಬಿ.ಸಿ.ನಾಗೇಶ್ ತಿರುಗೇಟು ಕೊಟ್ಟಿದ್ದಾರೆ. ಸಿನಿಮಾ ನಟಿಯ ಮಾತು ಕೇಳಿ ಅವರು ಟ್ವೀಟ್ ಮಾಡಿದ್ದಾರೆ. ‘ಕೈ’ ನಾಯಕ ರಾಹುಲ್ ಗಾಂಧಿಗೆ ಮಾಹಿತಿ ಕೊರತೆ ಇದೆ. ರಾಹುಲ್ ಗಾಂಧಿಯನ್ನು ನೋಡಿದರೆ ಪಾಪ ಅನಿಸುತ್ತೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಅಪರಿಚಿತ ವ್ಯಕ್ತಿ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
Published On - 9:35 am, Sun, 6 February 22