AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಹೆಸರಿನಲ್ಲಿ ಇಸ್ಲಾಂಗೆ ಮತಾಂತರ: ಎಂಬಿಬಿಎಸ್ ಮುಗಿಸಿದ ಯುವತಿ-ಯುವಕನ ಪ್ರೇಮ್​ ಕಹಾನಿ

ಅವರಿಬ್ಬರು ಎಂಬಿಬಿಎಸ್ ಮುಗಿಸಿದ ವಿದ್ಯಾರ್ಥಿಗಳು. ವರ್ಷದ ಹಿಂದೆ ಪರಿಚಯವಾಗಿ ಪರಿಚಯ ಸ್ನೇಹವಾಗಿ, ಬಳಿಕ ಪ್ರೇಮವಾಗಿ ಬದಲಾಗಿದೆ. ಇಬ್ಬರ ನಡುವೆ ಮದುವೆಯ ಮಾತುಕತೆ ಕೂಡ ನಡೆದಿತ್ತು. ಇದ್ದಕ್ಕಿದ್ದಂತೆ ಯುವಕ ಅರೆಸ್ಟ್ ಆಗಿದ್ದಾನೆ. ಬಂಧನದ ಹಿಂದೆ ಮತಾಂತರ, ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಪ್ರೀತಿ ಹೆಸರಿನಲ್ಲಿ ಇಸ್ಲಾಂಗೆ ಮತಾಂತರ: ಎಂಬಿಬಿಎಸ್ ಮುಗಿಸಿದ ಯುವತಿ-ಯುವಕನ ಪ್ರೇಮ್​ ಕಹಾನಿ
ಮಹಮ್ಮದ್ ಡ್ಯಾನಿಷ್ ಖಾನ್
ಪ್ರಜ್ವಲ್ ಅಮೀನ್​, ಉಡುಪಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Sep 03, 2024 | 9:34 PM

Share

ಉಡುಪಿ, ಸೆ.03: ಮಣಿಪಾಲದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್(MBBS) ಮುಗಿಸಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಯುವಕ ಯುವತಿಯ ನಡುವೆ ಗೆಳೆತನವಾಗಿದೆ. ಡೆಲ್ಲಿ ಮೂಲದ ಮುಸಲ್ಮಾನ ಸಮುದಾಯಕ್ಕೆ ಸೇರಿದ ಯುವಕ ಡ್ಯಾನಿಶ್ ಖಾನ್ ಹಾಗೂ ರಾಜಸ್ಥಾನಿ ಹಿಂದೂ ಸಮುದಾಯಕ್ಕೆ ಸೇರಿದ ಯುವತಿಯೊಡನೆ ಸ್ನೇಹ ಪ್ರೇಮವಾಗಿ ಬದಲಾಗಿ, ಮದುವೆಯ ಮಾತುಕತೆಯ ಹಂತಕ್ಕೆ ತಲುಪಿತ್ತು. ಡ್ಯಾನಿಶ್ ಖಾನ್ ದಿನ ಕಳೆದಂತೆ ನೀನು ಇಸ್ಲಾಂಗೆ ಮತಾಂತರ ಆಗಬೇಕು, ಕುರಾನ್ ಓದಬೇಕು ಎಂದು ತಾಕೀತು ಮಾಡುತ್ತಿದ್ದ. ಹಿಂದೂ ಧರ್ಮದ ಯಾವುದೇ ಆಚರಣೆಗಳನ್ನು ಮಾಡಬಾರದು, ದೇವರ ಆರಾಧನೆ ನಡೆಸಬಾರದು ಎಂಬಂತಹ ನಿಬಂಧನೆಗಳನ್ನು ಹಾಕಿದ್ದಾನೆ. ಅಷ್ಟೇ ಅಲ್ಲ, ದೈಹಿಕ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡಿದ್ದಾಗಿ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

ನಂತರ ಯುವತಿ ಶಾಸಕರನ್ನು ಭೇಟಿಯಾಗಿ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್, ಹಿಂದೂ ಧರ್ಮ ಹಾಗೂ ಅಯೋಧ್ಯೆ ರಾಮ ಮಂದಿರದ ಬಗ್ಗೆ ಯುವತಿಯ ಮನಸ್ಸಿಗೆ ಒಪ್ಪದಂತಹ ಆರೋಪಗಳನ್ನ ಮಾಡುತ್ತಿದ್ದ. ಇದೇ ವಿಚಾರವಾಗಿ ಸಾಕಷ್ಟು ಬಾರಿ ಇಬ್ಬರ ನಡುವೆ ತಕರಾರುಗಳಾಗಿದೆ. ಕಳೆದ ಒಂದೆರಡು ತಿಂಗಳಿಂದ ಡ್ಯಾನಿಷ್ ಖಾನ್ ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದು, ತಡೆಯಲಾಗದೆ ಸಂತ್ರಸ್ಥೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಇದನ್ನೂ ಓದಿ:ಯಾದಗಿರಿಯಲ್ಲಿ ಎಗ್ಗಿಲ್ಲದೇ ನಡೀತಿದೆ ಮತಾಂತರ; ಬಡ ಹಿಂದೂ ಕುಟುಂಬಗಳೇ ಇವರ ಟಾರ್ಗೆಟ್

ಪ್ರಕರಣದಲ್ಲಿ ಮತ್ತೆ ಡ್ರಗ್ ಜಾಲದ ಹೆಸರು ಕೇಳಿ ಬಂದಿದೆ. ಇದೊಂದು ವ್ಯವಸ್ಥಿತ ಮತಾಂತರಕ್ಕೆ ಯತ್ನ, ಲವ್ ಜಿಹಾದ್​ನ ಒಂದು ಭಾಗ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆರೋಪಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೂ ಹಾಜರುಪಡಿಸಿದ್ದಾರೆ. ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ