ರಾಮಮಂದಿರ ಉದ್ಘಾಟನೆ: ಭದ್ರತೆಗಾಗಿ ಉಡುಪಿ ವಿಜ್ಞಾನಿ ಮನೋಹರ್ ಬೈನಾಕ್ಯುಲರ್ ಬಳಕೆ!

ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಭದ್ರತೆಗಾಗಿ ಉಡುಪಿ ವಿಜ್ಞಾನಿಯ ಬೈನಾಕ್ಯುಲರ್ ಬಳಕೆಯಾಗಲಿದೆ! ಸರಳ ಟೆಲಿಸ್ಕೋಪಿಗೆ ಈಗಾಗಲೇ ಪೇಟೆಂಟ್ ಪಡೆದಿರುವ ಮಣಿಪಾಲ ಎಂಐಟಿಯ ಮನೋಹರ್ ಅವರು ಈಗಾಗಲೇ ರಕ್ಷಣಾ ವಿಭಾಗಕ್ಕೆ ಟೆಲಿಸ್ಕೋಪ್ ಗಳನ್ನು ತಯಾರಿಸಿ ಕೊಟ್ಟವರು.

ರಾಮಮಂದಿರ ಉದ್ಘಾಟನೆ: ಭದ್ರತೆಗಾಗಿ ಉಡುಪಿ ವಿಜ್ಞಾನಿ ಮನೋಹರ್ ಬೈನಾಕ್ಯುಲರ್ ಬಳಕೆ!
ರಾಮಮಂದಿರ ಉದ್ಘಾಟನೆ: ಭದ್ರತೆಗಾಗಿ ಉಡುಪಿ ವಿಜ್ಞಾನಿ ಮನೋಹರ್ ಬೈನಾಕ್ಯುಲರ್ ಬಳಕೆ!
Follow us
| Updated By: ಸಾಧು ಶ್ರೀನಾಥ್​

Updated on:Jan 05, 2024 | 3:10 PM

ದೇಶಾದ್ಯಂತ ಈಗ ರಾಮಮಂದಿರ ಉದ್ಘಾಟನೆಯ ಸಂಭ್ರಮ ಮನೆ ಮಾಡಿದೆ. ಇಡೀ ದೇಶವೇ ರಾಮಮಂದಿರಕ್ಕಾಗಿ ಏನಾದರೂ ಮಾಡಬೇಕು ಎಂದು ಕಾಯುತ್ತಿದೆ. ಈ ನಡುವೆ ಉಡುಪಿಯ ವಿಜ್ಞಾನಿಯೊಬ್ಬ ನಿರ್ಮಿಸಿದ ಟೆಲಿಸ್ಕೋಪ್ ತಂತ್ರಜ್ಞಾನವನ್ನು ಅಯೋಧ್ಯೆಯ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ.

ಹೌದು, ಗುಣಮಟ್ಟದ ಶಿಕ್ಷಣ ಮತ್ತು ವೈದ್ಯಕೀಯ ಸೇವೆಯ ಜೊತೆಗೆ ತನ್ನ ವಿಭಿನ್ನ ಶೈಲಿಯ ಆಹಾರದ ಕ್ರಮದಿಂದ ದೇಶದಾದ್ಯಂತ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆ, ರಾಜ್ಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಜಿಲ್ಲೆ. ಇಲ್ಲಿ ಇತ್ತೀಚೆಗೆ ತಂತ್ರಜ್ಞಾನ ಓರುವರು ನಿರ್ಮಿಸಿದ ಟೆಲಿಸ್ಕೋಪ್ ಬಾರಿ ಸದ್ದು ಮಾಡುತ್ತಿದೆ.

ಸರಳ ಟೆಲಿಸ್ಕೋಪಿಗೆ ಈಗಾಗಲೇ ಪೇಟೆಂಟ್ ಪಡೆದಿರುವ ಮಣಿಪಾಲ ಎಂಐಟಿಯ ಮನೋಹರ್ ಅವರು ಈಗಾಗಲೇ ರಕ್ಷಣಾ ವಿಭಾಗಕ್ಕೆ ಟೆಲಿಸ್ಕೋಪ್ ಗಳನ್ನು ತಯಾರಿಸಿ ಕೊಟ್ಟವರು. ಸದ್ಯ ಎಲ್ಲರ ಗಮನ ಶ್ರೀರಾಮ ಮಂದಿರದ ಲೋಕಾರ್ಪಣೆಯತ್ತ ನೆಟ್ಟಿರುವ ಸಂದರ್ಭದಲ್ಲಿ ಸಹಸ್ರಾರು ರಾಮಭಕ್ತರು ಅಯೋಧ್ಯೆಗೆ ಬರುತ್ತಿರುವ ಕಾರಣ ಭದ್ರತೆಯ ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಾರದು. ಸದ್ಯ ಉಡುಪಿಯ ಈ ತಂತ್ರಜ್ಞರು ನಿರ್ಮಿಸಿದ ಟೆಲಿಸ್ಕೋಪ್ ಅಯೋಧ್ಯೆಯ ಶ್ರೀರಾಮ ಮಂದಿರನ ಭದ್ರತೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಉಡುಪಿಯ ಆರ್ ಮನೋಹರ್ ಸಂಶೋಧಿಸಿರುವ ಟೆಲಿಸ್ಕೋಪ್ ಈಗಾಗಲೇ ದೇಶದ ರಕ್ಷಣಾ ಇಲಾಖೆ ಬಳಸಿಕೊಳ್ಳುತ್ತಿದೆ. ಅತ್ಯಂತ ಸರಳ ಮತ್ತು ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 50 ಟೆಲಿಸ್ಕೋಪ್ ಗಾಗಿ ರಕ್ಷಣೆ ಇಲಾಖೆ ಈಗಾಗಲೆ ಬೇಡಿಕೆ ಇಟ್ಟಿದೆ. ಈ ಹಿಂದೆ ರಕ್ಷಣಾ ವಿಭಾಗಕ್ಕೆ ಬೈನಾಕುಲರ್ ಸರಬರಾಜು ಮಾಡಿದ ಮನೋಹರ್ ಮಣಿಪಾಲದ ಎಂಐಟಿ ಕಾಲೇಜಿನಲ್ಲಿ ಲ್ಯಾಬ್ ಇಂಚಾರ್ಜ್ ಆಗಿದ್ದಾರೆ.

Also Read: ವಿಜಯಪುರ ಮೂಲದ ನವೀನ್ ಹಾವಣ್ಣನವರ ಅಮೆರಿಕಾದಲ್ಲಿ ಕೌನ್ಸಿಲರ್ ಆಗಿ ಆಯ್ಕೆ

ಸದ್ಯ ರಕ್ಷಣಾ ಇಲಾಖೆಯವರು ಜರ್ಮನ್ ನಿರ್ಮಿತ ದುಬಾರಿ ಬೆಲೆಯ ಟೆಲಿಸ್ಕೋಪ್ ಗಳನ್ನ ಬಳಸುತ್ತಿದ್ದಾರೆ. ಇದು 30,000ಕ್ಕೂ ಅಧಿಕ ಬೆಲೆಯದಾಗಿದೆ, ಆದರೆ ಮನೋಹರ್ ಅವರು ನಿರ್ಮಿಸುವ ಟೆಲಿಸ್ಕೋಪ್ ಉತ್ತಮ ಕ್ಲಾರಿಟಿ ಯೊಂದಿಗೆ 15 ಸಾವಿರ ಬೆಲೆಯದ್ದಾಗಿದೆ. ಭಾರತ ಮತ್ತು ಅಮೆರಿಕದ ಪೇಟೆಂಟ್ ಹೊಂದಿರುವ ಮನೋಹರ್ ಅವರ ಟೆಲಿಸ್ಕೋಪ್, ಅಯೋಧ್ಯ ಯ ಶ್ರೀರಾಮ ಮಂದಿರ ಲೋಕಾರ್ಪಣೆಯ ಸಂದರ್ಭ ಭದ್ರತೆಯ ಉದ್ದೇಶಕ್ಕಾಗಿ ಸುಮಾರು 25 ಟೆಲಿಸ್ಕೋಪ್ ಗಳನ್ನ ಬಳಸಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ದೇಸಿ ನಿರ್ಮಿತ ಸರಳ ಉತ್ತಮ ಗುಣಮಟ್ಟದ ಸಾಕಷ್ಟು ವಿಶೇಷತೆಗಳನ್ನ ಹೊಂದಿರುವ ಟೆಲಿಸ್ಕೋಪ್ ಶ್ರೀ ರಾಮನ ಭದ್ರತೆಗೆ ಬಳಸಿಕೊಳ್ಳುತ್ತಿರುವುದು ಉಡುಪಿಯ ನಾಗರಿಕರಿಗೆ ಸಂತಸ ತಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:06 pm, Fri, 5 January 24

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್