ಎಫ್‌ಡಿ ಇಟ್ಟಿದ್ದ ಐದೂವರೆ ಲಕ್ಷ ಮಂಗಮಾಯ, ಕೋರ್ಟ್ ತೀರ್ಪಿಗೂ ತಲೆ ಕೆಡಿಸಿಕೊಳ್ಳದೆ ಹಣ ಹಿಂತಿರುಗಿಸಲು ಸತಾಯಿಸುತ್ತಿರುವ ಬ್ಯಾಂಕ್

ಆತ ಕಷ್ಟ ಪಟ್ಟು ದುಡಿದು, ಬ್ಯಾಂಕ್ನಲ್ಲಿ ಹಣ ಕೂಡಿಟ್ಟಿದ್ದ, ಇದೇ ಹಣದಲ್ಲಿ ಸಣ್ಣದೊಂದು ಸೂರು ಕಟ್ಟುವ ಕನಸು ಕಂಡಿದ್ದ, ಆದ್ರೀಗ ಆತನ ಫಿಕ್ಸ್ಡ್ ಡೆಪಾಸಿಟ್ ಅನಾಮತ್ತಾಗಿ ಲಪಟಾಯಿಸಲಾಗಿದೆ. ನ್ಯಾಯಾಲಯ ಪೂರ್ತಿ ಹಣ ವಾಪಾಸು ನೀಡುವಂತೆ, ತೀರ್ಪು ನೀಡಿದರೂ, ಬ್ಯಾಂಕ್ ಬಳಕೆದಾರರ ಹಣ ನೀಡದೆ ಸತಾಯಿಸುತ್ತಿದೆ.

ಎಫ್‌ಡಿ ಇಟ್ಟಿದ್ದ ಐದೂವರೆ ಲಕ್ಷ ಮಂಗಮಾಯ, ಕೋರ್ಟ್ ತೀರ್ಪಿಗೂ ತಲೆ ಕೆಡಿಸಿಕೊಳ್ಳದೆ ಹಣ ಹಿಂತಿರುಗಿಸಲು ಸತಾಯಿಸುತ್ತಿರುವ ಬ್ಯಾಂಕ್
ಹಣ ಕಳೆದುಕೊಂಡವರು
TV9kannada Web Team

| Edited By: Ayesha Banu

Aug 29, 2021 | 2:01 PM

ಉಡುಪಿ ಜಿಲ್ಲೆಯ ಉಪ್ಪೂರಿನ ನಿವಾಸಿ ಹರೀಶ್ ಗುಡಿಗಾರ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಬೆಂಗಳೂರು ತೊರೆಯುತ್ತಿದ್ದಂತೆ ತಮ್ಮ ಖಾತೆಯನ್ನ ಉಡುಪಿಯ ಸಂತೆಕಟ್ಟೆಯ ಎಸ್ಬಿಐ ಬ್ರಾಂಚ್‌ಗೆ ವರ್ಗಾಯಿಸಿ ಕೊಂಡಿದ್ರು. ಆದ್ರೆ ಖಾತೆ ವರ್ಗಾವಣೆಯಾಗ್ತಿದ್ದಂತೆ ಇವರ ಬ್ಯಾಡ್ ಟೈಮ್ ಶುರುವಾಗಿದೆ.

ಎಫ್‌ಡಿ ಇಟ್ಟಿದ್ದ ಐದೂವರೆ ಲಕ್ಷ ಮಂಗಮಾಯ ಪುಟ್ಟ ಮನೆ ಕಟ್ಕೊಬೇಕು ಅಂತಾ ಕನಸು ಕಂಡಿದ್ದ ಹರೀಶ್ ಐದೂವರೆ ಲಕ್ಷ ರೂಪಾಯಿಯನ್ನ ಡೆಪಾಸಿಟ್ ಮಾಡಿಟ್ಟಿದ್ದರು. ಆದ್ರೆ 2019 ಆಗಸ್ಟ್ 23ರಂದು ಹರೀಶ್ ಮೊಬೈಲ್‌ಗೆ ಹಣ ಕಟ್ ಆಗಿರುವ ಬಗ್ಗೆ ಮೂರ್ನಾಲ್ಕು ಮೆಸೇಜ್ ಬಂದಿವೆ. ಕೂಡಲೇ ಬ್ಯಾಂಕ್‌ಗೆ ದೌಡಾಯಿಸಿದ ಹರೀಶ್ ದೂರು ದಾಖಲಿಸಿದ್ದಾರೆ. ಆದ್ರೆ ಬ್ಯಾಂಕ್‌ನವರಿಂದ ಯಾವ ನ್ಯಾಯ ಸಿಕ್ಕಿಲ್ಲ. ಕೊನೆಗೆ ನ್ಯಾಯಾಲಯದ ಕದ ತಟ್ಟಿದ್ದಾರೆ. ಆಗ ಕೋರ್ಟ್ ಐದೂವರೆ ಲಕ್ಷಕ್ಕೆ ಶೇಕಡಾ 10ರಂತೆ ಬಡ್ಡಿ ನೀಡಬೇಕು, ಜೊತೆಗೆ 50 ಸಾವಿರ ಪರಿಹಾರ, ಕೋರ್ಟ್ ವೆಚ್ಚ ಅಂತ 10 ಸಾವಿರವನ್ನು ಮೂವತ್ತು ದಿನಗಳ ಒಳಗೆ ನೀಡಬೇಕು ಅಂತ ತೀರ್ಪು ನೀಡಿದೆ. ತೀರ್ಪು ಬಂದು 40ದಿನವಾದ್ರೂ ಬ್ಯಾಂಕ್‌ನವ್ರು ಇದುವರೆಗೂ ಹಣ ನೀಡಿಲ್ಲ.

ಸದ್ಯ ಹರೀಶ್ ಅವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ಚಿಕ್ಕ ಮಗಳಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಹಾಗಾಗಿ ಬ್ಯಾಂಕ್‌ನವ್ರು ಕೂಡಲೇ ಹಣ ನೀಡ್ಬೇಕು ಇಲ್ಲವಾದ್ರೆ ಮತ್ತೆ ಕೋರ್ಟ್ ಮೊರೆ ಹೋಗುವುದಾಗಿ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ಆನ್ ಲೈನ್ ವ್ಯವಹಾರದಲ್ಲಿ ಮೋಸ ಆಗೋದನ್ನ ಕೇಳಿದ್ದೇವೆ. ಸೇವಿಂಗ್ಸ್ ಅಕೌಂಟ್ ನಲ್ಲಿರೋ ದುಡ್ಡು ಖಾಲಿಯಾಗಿರೋದನ್ನ ಕೇಳಿದ್ದೀವಿ ಆದರೆ ಎಫ್‌ಡಿ ಇಟ್ಟ ಹಣ ಕೂಡ ಮಂಗಮಾಯವಾಗಿದೆ ಅಂದ್ರೆ.. ನಿಜಕ್ಕೂ ಆಶ್ಚರ್ಯ. ಆದಷ್ಟು ಬೇಗ ಬ್ಯಾಂಕ್‌ನವ್ರು ಹರೀಶ್ ನೆರವಿಗೆ ಬರಲೇಬೇಕು. ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳಲೇಬೇಕು.

ಇದನ್ನೂ ಓದಿ: ಫೈಜರ್​ ಬಯೋಎನ್​ಟೆಕ್​​ ಲಸಿಕೆಗೆ ಸಂಪೂರ್ಣ ಅನುಮೋದನೆ ನೀಡಿದ ಎಫ್​ಡಿಎ; ಸುರಕ್ಷಿತ ಲಸಿಕೆ ಎಂಬ ಹೆಗ್ಗಳಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada