AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ ಪೈಪ್, ಲಾರಿ ಚಸ್ಸಿಯಲ್ಲೇ ಸಿದ್ದವಾಯ್ತು ಸೇತುವೆ; ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪರಿಕಲ್ಪನೆಗೆ ಜನರು ಫಿದಾ

ಸೇತುವೆ ಎಂದ ಕ್ಷಣ ನೆನಪಿಗೆ ಬರುವುದು ಮರದ ಸೇತುವೆ, ಕಬ್ಬಿಣದ ಸೇತುವೆ, ಕಾಂಕ್ರೀಟ್ ಸೇತುವೆಗಳು. ಆದರೆ, ಸರಕಾರದ ಅನುದಾನ ಬಾರದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹೊಸ ಕಾನ್ಸೆಪ್ಟ್​ನಲ್ಲಿ ಸೇತುವೆ ಸಿದ್ಧವಾಗಿದೆ. ಬಳಸಿ ಎಸೆದ ಕಬ್ಬಿಣದ ವಸ್ತುಗಳು, ಹಳೆಯ ಬೋರ್ವೆಲ್ ಪೈಪ್, ಲಾರಿ ಚಸ್ಸಿ, ಇದೇ ಮೊದಲಾದ ವಸ್ತುಗಳನ್ನ ಬಳಸಿ ಅದ್ಭುತ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಹಳೆಯ ಪೈಪ್, ಲಾರಿ ಚಸ್ಸಿಯಲ್ಲೇ ಸಿದ್ದವಾಯ್ತು ಸೇತುವೆ; ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪರಿಕಲ್ಪನೆಗೆ ಜನರು ಫಿದಾ
ಹಳೆಯ ಪೈಪ್, ಲಾರಿ ಚಸ್ಸಿಯಲ್ಲೇ ಸಿದ್ದವಾಯ್ತು ಸೇತುವೆ
ಪ್ರಜ್ವಲ್ ಅಮೀನ್​, ಉಡುಪಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 23, 2024 | 6:53 PM

Share

ಉಡುಪಿ, ಜು.23:  ಉಡುಪಿ ಜಿಲ್ಲೆಯ ಬೈಂದೂರು(Byndoor) ಕ್ಷೇತ್ರದಲ್ಲಿ ರಸ್ತೆಗಳಿಗಿಂತ ಹೆಚ್ಚಾಗಿ ಕಾಲು ಸಂಕ(ಕಿರು ಸೇತುವೆ)ಗಳ ಅವಶ್ಯಕತೆ ಇದೆ ಎಂದರೆ ನೀವು ನಂಬಲೇಬೇಕು. ಪ್ರತಿ 10 ಮನೆಗೆ ಒಂದು ಕಾಲು ಸಂಕ ಎನ್ನುವಂತೆ ಕ್ಷೇತ್ರದಾದ್ಯಂತ ಒಟ್ಟು 400 ಕ್ಕೂ ಅಧಿಕ ಕಾಲು ಸಂಕಗಳ ಅಗತ್ಯತೆ ಇದೆ. ಸದ್ಯ ರಾಜ್ಯ ಸರ್ಕಾರ ಕಿರು ಸೇತುವೆ(Bridge)ಗಳ ನಿರ್ಮಾಣಕ್ಕೆ ಅನುದಾನಗಳನ್ನ ಬಿಡುಗಡೆ ಮಾಡುತ್ತಿಲ್ಲ. ಹಿಂದೆ ನರೇಗಾ ಯೋಜನೆಯ ಮೂಲಕ ಕಿರು ಸೇತುವೆಗಳನ್ನ ಮಾಡುವ ಅವಕಾಶ ಇತ್ತು. ಸಧ್ಯ ಅದಕ್ಕೂ ಬ್ರೇಕ್ ಬಿದ್ದಿದೆ. ಪರಿಣಾಮ ಮಳೆಗಾಲದಲ್ಲಿ ಬೈಂದೂರು ಕ್ಷೇತ್ರದ ಯಡಮೊಗೆ ಎನ್ನುವ ಪ್ರದೇಶದಲ್ಲಿ ಸುಮಾರು 50 ವರ್ಷಗಳಿಂದ 30 ಮನೆಯವರು ಮಳೆಗಾಲದಲ್ಲಿ ಜಲದಿಗ್ಬಂದನಕ್ಕೆ ಒಳಗಾಗುತ್ತಿದ್ದಾರೆ.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರ ಪರಿಕಲ್ಪನೆಯಲ್ಲಿ ಸೇತುವೆ ಸಿದ್ದ

ದೈನಂದಿನ ಬಳಕೆಗೆ ಸೂಕ್ತವಾದ ಸೇತುವೆ ಇಲ್ಲದೆ ಕೆಲಸಗಳಿಗೆ ತೆರಳುವವರು ಮತ್ತು ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ದೊಡ್ಡ ತಲೆ ನೋವಾಗಿತ್ತು. ಸದ್ಯ ಇಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರ ಪರಿಕಲ್ಪನೆಯಲ್ಲಿ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಸಾಮಾನ್ಯ ಸೇತುವೆಯಲ್ಲ ಲಾರಿ ಚಾಸ್ಸಿ ಮತ್ತು ಇನ್ನಿತರ ಉಪಯೋಗಿಸಿ ಬಳಸಿ ಎಸೆದ ಗುಜರಿ ಕಬ್ಬಿಣದ ವಸ್ತುಗಳನ್ನು ಬಳಸಿ ಸೇತುವೆಯನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ:ಬಾಗಲಕೋಟೆ: ಸರ್ಕಾರಕ್ಕೆ ಸೆಡ್ಡು ಹೊಡೆದು ಕಂಕನವಾಡಿ ರೈತರಿಂದ ಬ್ಯಾರಲ್ ತೇಲುಸೇತುವೆ ನಿರ್ಮಾಣ

ಯಡಮೊಗೆ ಸುಮಾರು ಐವತ್ತು ವರ್ಷಗಳಿಂದ ಮಳೆಗಾಲ ಬಂತೆಂದರೆ ಸಾಕು, ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ. ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವಾಗ ತೊರೆಯನ್ನ ದಾಟುವುದೆ ದೊಡ್ಡ ಹರ ಸಾಹಸ ಎನ್ನುವಂತಿತ್ತು. ಸದ್ಯ ಐವತ್ತು ವರ್ಷಗಳ ಬಳಿಕ ಗ್ರಾಮಸ್ಥರು ಕಂಡ ಕನಸು ನನಸಾಗಿದೆ. ಭೋರ್ಗರೆಯುತ್ತ ಹರಿಯುವ ತೊರೆಯನ್ನು ದಾಟಲು ಸೇತುವೆ ನಿರ್ಮಾಣವಾಗಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ. ಸಮೃದ್ಧ ಬೈಂದೂರು ಮತ್ತು ಬೆಂಗಳೂರಿನ ಅರುಣಾಚಲ ಟ್ರಸ್ಟ್ ಸಹಭಾಗಿತ್ವದಲ್ಲಿ ಇಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಎನ್ನುವಂತೆ ಮೂರು ಲಾರಿ ಚಾಸ್ಸಿ ಬಳಸಿ ಸೇತುವೆ ನಿರ್ಮಿಸಲಾಗಿದೆ.

2 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ

ಅನುದಾನ ಕೊರತೆಯಿಂದ ಕ್ರೌಡ್ ಫಂಡಿಂಗ್ ಮೂಲಕ ಸೇತುವೆ ನಿರ್ಮಾಣ ಕಾರ್ಯಕ್ಕೆ ಶಾಸಕರು ಕೈ ಹಾಕಿದ್ದು, ಪ್ರಾಯೋಗಿಕವಾಗಿ ಯಡಮೊಗೆ ಪ್ರದೇಶದಲ್ಲಿ ಸುಮಾರು 2 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. 72 ಫೀಟ್ ಉದ್ದ, ಆರು ಫೀಟ್ ಅಗಲ ಇರುವ ಈ ಕಬ್ಬಿಣದ ಸೇತುವೆ ಸದ್ಯ ಇಲ್ಲಿನ ಗ್ರಾಮಸ್ಥರ ಮುಖ್ಯ ಸಂಚಾರಿ ಸಾಧನವಾಗಿದೆ. ಒಟ್ಟಾರೆಯಾಗಿ ತಮ್ಮ ವಿಭಿನ್ನ ಶೈಲಿಯಿಂದಲೇ ರಾಜ್ಯದಲ್ಲಿಯೇ ಗುರುತಿಸಿಕೊಂಡಿರುವ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆಯವರು, ಕ್ಷೇತ್ರದಲ್ಲೂ ಕೂಡ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತಿದ್ದಾರೆ. ಸರಕಾರ ನೆರವು ನೀಡದಿದ್ದರೂ, ಇನ್ನೇನಾದರೂ ಮಾಡಬೇಕು ಎನ್ನುವ ಇವರ ಆಲೋಚನೆ ರಾಜ್ಯದ ಉಳಿದ ಶಾಸಕರಿಗೂ ಮಾದರಿ ಎಂದರೆ ತಪ್ಪಾಗಲಾರದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
ಐದು ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ
ಐದು ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ
ಮೇಘಸ್ಫೋಟ, ಪ್ರವಾಹದ ಬಳಿಕ ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ ನೋಡಿ
ಮೇಘಸ್ಫೋಟ, ಪ್ರವಾಹದ ಬಳಿಕ ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ ನೋಡಿ
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!