ತುಮಕೂರಿನಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ

350 ಕೋಟಿ ರೂ. ವೆಚ್ಚದಲ್ಲಿ ತುಮಕೂರಿನಲ್ಲಿ 5 ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಸಚಿವಾಲಯದಿಂದ ಅನುಮೋದನೆ ನೀಡಲಾಗಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ. ಆ ಮೂಲಕ ನೆನೆಗುದಿಗೆ ಬಿದಿದ್ದ ರೈಲ್ವೆ ಕೆಳಸೇತುವೆಗಳು ಹಾಗೂ ಮೇಲ್ಸೇತುವೆ ಕಾಮಗಾರಿಗೆ ಕ್ರಮಕೈಗೊಳ್ಳಲಾಗುತ್ತಿದೆ.

ತುಮಕೂರಿನಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ
ತುಮಕೂರಿನಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 15, 2024 | 10:20 PM

ತುಮಕೂರು, ಜುಲೈ 15: ತುಮಕೂರಿನಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆ ನಿರ್ಮಾಣಕ್ಕೆ ರೇಲ್ವೆ ಸಚಿವಾಲಯದಿಂದ ಅನುಮೋದನೆ ನೀಡಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ (V. Somanna) ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾತ್ಸಂದ್ರ ರೈಲ್ವೆ ಸ್ಟೇಷನ್ ಮೈದಾಳ ಗೇಟ್, ಬಡ್ಡಿಹಳ್ಳಿ ಗೇಟ್, ಬಟ್ಟವಾಡಿ, ಹಿರಿಯೂರು, ತುಮಕೂರು-ಮೈಸೂರು ಗೇಟ್​​ ಫ್ಲೈಓವರ್​​ ನಿರ್ಮಾಣದ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದಿದ್ದಾರೆ.

2026ಕ್ಕೆ ತುಮಕೂರು-ರಾಯದುರ್ಗ ಉದ್ಘಾಟನೆ

ತುಮಕೂರು-ರಾಯದುರ್ಗ ಮತ್ತು ತುಮಕೂರು-ದಾವಣಗೆರೆ ರೈಲು ಯೋಜನೆ 2026ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು ಶೀಘ್ರವಾಗಿ ಉದ್ಘಾಟಿಸಲಾಗುವುದು ಎಂದು ಇತ್ತೀಚೆಗೆ ವಿ. ಸೋಮಣ್ಣ ಹೇಳಿದ್ದರು. ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದಿದ್ದರು.

ಇದನ್ನೂ ಓದಿ: 2026ಕ್ಕೆ ಪ್ರಧಾನಿ ಮೋದಿಯವರಿಂದ ರಾಯದುರ್ಗ-ತುಮಕೂರು ರೈಲ್ವೆ ಯೋಜನೆ ಲೋಕಾರ್ಪಣೆ: ವಿ ಸೋಮಣ್ಣ

ಮಧುಗಿರಿ ಮತ್ತು ಕೊರಟಗೇರಿಗಳಲ್ಲಿ ಕೇವಲ 65 ಎಕರೆ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಬೇಕಿದೆ. ಇದಲ್ಲದೆ, ದಾವಣಗೆರೆಯಲ್ಲಿ 15 ಎಕರೆ ಭೂಮಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು.

ತುಮಕೂರು-ರಾಯದುರ್ಗ ಮತ್ತು ತುಮಕೂರು-ದಾವಣಗೆರೆ ರೈಲು ಯೋಜನೆ ಸುಮಾರು 600 ಕೋಟಿ ರೂ. ವೆಚ್ಚದ ಯೋಜನೆ ಆಗಿದ್ದು, ಪ್ರಗತಿಯಲ್ಲಿದೆ. ಇನ್ನು ನೆನೆಗುದಿಗೆ ಬಿದ್ದ ರೈಲ್ವೆ ಕೆಳಸೇತುವೆಗಳು ಹಾಗೂ ಮೇಲ್ಸೇತುವೆ ಕಾಮಗಾರಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಬಜೆಟ್​ನಲ್ಲಿ ಪ್ರಸ್ತಾಪ ಮಾಡಲು ಈ ಹಿಂದೆ ಚರ್ಚಿಸಲಾಗಿತ್ತು. ಇದೀಗ 5 ಮೇಲ್ಸೇತುವೆ ನಿರ್ಮಾಣಕ್ಕೆ ರೇಲ್ವೆ ಸಚಿವಾಲಯದಿಂದ ಅನುಮೋದನೆ ನೀಡಿದೆ.

ಇದನ್ನೂ ಓದಿ: ಹೇಮಾವತಿ‌ ಲಿಂಕ್‌ ಕೆನಾಲ್ ವಿರೋಧಿಸಿ ಜೂ 25ರಂದು ತುಮಕೂರು ಜಿಲ್ಲೆ ಬಂದ್​ಗೆ ಕರೆ

ಇನ್ನು ಇತ್ತೀಚೆಗೆ ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲುಗಳ ಟಿಕೆಟ್ ದರ ಪರಿಷ್ಕರಣೆ ಮಾಡಲಾಗುವುದು. ಆ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರು ಕೂಡ ವಂದೇ ಭಾರತ್ ರೈಲಿನಲ್ಲಿ ಓಡಾಡುವಂತೆ ಟಿಕೆಟ್‌ ದರ ಪರಿಷ್ಕರಣೆ ಮಾಡುತ್ತೇವೆ. ಈ ರೈಲು ಟಿಕೆಟ್ ದರ ಪರಿಷ್ಕರಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜೊತೆ ಕೂಡ ಚರ್ಚೆ ಮಾಡಿರುವುದಾಗಿ ವಿ.ಸೋಮಣ್ಣ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:17 pm, Mon, 15 July 24