2026ಕ್ಕೆ ಪ್ರಧಾನಿ ಮೋದಿಯವರಿಂದ ರಾಯದುರ್ಗ-ತುಮಕೂರು ರೈಲ್ವೆ ಯೋಜನೆ ಲೋಕಾರ್ಪಣೆ: ವಿ ಸೋಮಣ್ಣ
ತುಮಕೂರಿನ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, 2026ಕ್ಕೆ ಪ್ರಧಾನಮಂತ್ರಿ ಮೋದಿರಿಂದ ರಾಯದುರ್ಗ-ತುಮಕೂರು ರೈಲ್ವೆ ಯೋಜನೆ ಲೋಕಾರ್ಪಣೆ ಆಗಲಿದೆ. ತ್ವರಿತವಾಗಿ ಮುಗಿಸಲು ತುಮಕೂರು ಡಿಸಿ, ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 2-3 ವರ್ಷಗಳಲ್ಲಿ ಯೋಜನೆ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದ್ದಾರೆ.
ತುಮಕೂರು, ಜೂನ್ 16: 2026ಕ್ಕೆ ಪ್ರಧಾನಮಂತ್ರಿ ಮೋದಿರಿಂದ ರಾಯದುರ್ಗ-ತುಮಕೂರು ರೈಲ್ವೆ ಯೋಜನೆ (Rayadurga-Tumkur railway) ಲೋಕಾರ್ಪಣೆ ಆಗಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ. ತುಮಕೂರಿನ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಯದುರ್ಗ-ತುಮಕೂರು ರೈಲ್ವೆ ಯೋಜನೆ ತ್ವರಿತವಾಗಿ ಮುಗಿಸಲು ತುಮಕೂರು ಡಿಸಿ, ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 2-3 ವರ್ಷಗಳಲ್ಲಿ ಯೋಜನೆ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಹಣ ಬಿಡುಗಡೆಗೆ ಹೇಳಿದ್ದೇವೆ. ಯೋಜನೆಗೆ ಹಣ ನೀಡಿಲ್ಲ ಅಂದರೆ ಅದು ರಾಜ್ಯ ಸರ್ಕಾರದ ಜವಾಬ್ದಾರಿ. 11 ಕಿಲೋ ಮೀಟರ್‌ವರೆಗೆ ಮಾತ್ರ ಒತ್ತುವರಿ ತೆರವಿಗೆ ಅಡೆತಡೆ ಇದೆ. ಕೇಂದ್ರದ ಯೋಜನೆ ಯಶಸ್ಸು ಆಗಬೇಕಾದರೆ ರಾಜ್ಯದ ಬೆಂಬಲ ಸಹ ಅಗತ್ಯ. ಚಿತ್ರದುರ್ಗ-ತುಮಕೂರು ರೈಲ್ವೆ ಯೋಜನೆ ಸಹ ಪೂರ್ಣಗೊಳಿಸಬೇಕಿದೆ. ತುಮಕೂರು ರೈಲ್ವೆ ನಿಲ್ದಾಣ ಕೂಡ ಉನ್ನತೀಕರಣ ಮಾಡಲಾಗುವುದು. ಹೇಮಾವತಿ ಲಿಂಕ್ ಕೆನಾಲ್ ವಿಚಾರವಾಗಿಯೂ ಸಚಿವರಾದ ಪರಮೇಶ್ವರ್, ರಾಜಣ್ಣ, ಡಿಸಿ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.
ಇದನ್ನೂ ಓದಿ: ಚುನಾವಣೆಗೂ ತೈಲ ದರ ಏರಿಕೆಗೂ ಸಂಬಂಧವಿಲ್ಲ: ಆರ್ ಅಶೋಕ್ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು
ಬಿಜೆಪಿ ಮತ್ತು ಜೆಡಿಎಸ್ ಒಂದಾದ್ರೆ ಏನು ಮಾಡಬಹುದೆಂದು ತೋರಿಸಿದ್ದೀರಿ. ಈ ಕೆಲಸವನ್ನು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಮಾಡಿದ್ದರೆ ಕಾಂಗ್ರೆಸ್ 2 ಸೀಟ್ ಬರುತ್ತಿತ್ತು. ಮೂರು ತಿಂಗಳ ಹಿಂದೆ ನನಗೂ, ತುಮಕೂರು ಜಿಲ್ಲೆಗೆ ಸಂಬಂಧ ಇರಲಿಲ್ಲ. ವರಿಷ್ಠರು ಕೈಗೊಂಡ ತೀರ್ಮಾನದಂತೆ ನಾನು ಬಂದೆ, ನೀವು ಗೆಲ್ಲಿಸಿದ್ದೀರಿ. ಪ್ರಧಾನಿ ಮೋದಿ ನನ್ನನ್ನು ಕೇಂದ್ರಸಚಿವರನ್ನಾಗಿ ಮಾಡಿದ್ದಾರೆ, ನಿರೀಕ್ಷಿಸಿರಲಿಲ್ಲ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಸದಿದ್ದರೆ ಕರ್ನಾಟಕ ಬಂದ್ಗೆ ಕರೆ ಕೊಡುತ್ತೇವೆ: ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ
ನಾನು ಕ್ಯೂನಲ್ಲಿ ಹೋಗ್ತಾ ಇದ್ದೆ, ಆಗ ಪ್ರಧಾನಿ ಡಬಲ್ ಕಂಗ್ರಾಟ್ಸ್ ಅಂದರು. ಪ್ರಧಾನಿಯವರು ನೋಡಿ ಸೋಮಣ್ಣ ಸೋಮಣ್ಣ ಡಬಲ್ ಕಂಗ್ರಾಟ್ಸ್ ಎಂದ್ರು. ನಾನು ಇದಕ್ಕೆ ಎರಡು ಪಕ್ಷದ ಕಾರ್ಯಕರ್ತರು ಕಾರಣ ಎಂದು ಹೇಳಿದ್ದಾರೆ.
ಇದೊಂದು ಹೇಯ ಕೃತ್ಯ
ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರಿನಿಂದ 6 ಜನರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಮಾನಸಿಕವಾಗಿ ನೋವು ನೀಡಿದೆ, ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇದೊಂದು ಹೇಯ ಕೃತ್ಯವೆಂದು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.