AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಮಂದಿರ ಆಂದೋಲನದಲ್ಲಿ ಉಡುಪಿ ಪಾತ್ರ ಸ್ಮರಿಸಿದ ಮೋದಿ, ಕೃಷ್ಣ ನಗರಿಯಲ್ಲಿ ನಮೋ ಭಾಷಣದ ಮುಖ್ಯಾಂಶಗಳು

ಉಡುಪಿಯ ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಲಕ್ಷ ಕಂಠ ಭಗವದ್ಗೀತೆ ಪಠಣ ನಡೆಯಿತು. ಸಾವಿರಾರು ಭಕ್ತರು ಭಗವದೀತೆಯ ಶ್ಲೋಕ ಪಠಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ಸೇರಿದಂತೆ ನೆರೆದಿದ್ದವರು ಧ್ವನಿಗೂಡಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ಉಡುಪಿ ಪಾತ್ರವನ್ನು ಮೆಲುಕು ಹಾಕಿದರು. ಹಾಗೇ ಇದೇ ವೇಳೆ ಒಂಭತ್ತು ಸಂಕಲ್ಪ ಮಾಡುವಂತೆ ಕರೆ ನೀಡಿದರು.

ರಾಮ ಮಂದಿರ ಆಂದೋಲನದಲ್ಲಿ ಉಡುಪಿ ಪಾತ್ರ ಸ್ಮರಿಸಿದ ಮೋದಿ, ಕೃಷ್ಣ ನಗರಿಯಲ್ಲಿ ನಮೋ ಭಾಷಣದ ಮುಖ್ಯಾಂಶಗಳು
ಪ್ರಧಾನಿ ನರೇಂದ್ರ ಮೋದಿ
ರಮೇಶ್ ಬಿ. ಜವಳಗೇರಾ
|

Updated on:Nov 28, 2025 | 3:10 PM

Share

ಉಡುಪಿ (ನವೆಂಬರ್ 28): ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರಾವಳಿಯ ಪುಣ್ಯಭೂಮಿ ಉಡುಪಿಗೆ (Udupi) ಆಗಮಿಸಿ ಕೃಷ್ಣದರ್ಶನ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ‘ಭಾರತ ಭಾಗ್ಯವಿದಾತ’ ಬಿರುದು ನೀಡಿ ಸನ್ಮಾನ ಮಾಡಿದ್ದಾರೆ. ಲಕ್ಷಕಂಠ ಪಾರಾಣದಲ್ಲಿ ಭಾಗವಹಿಸಿ 7 ನಿಮಿಷಗಳ ಕಾಲ ಶ್ಲೋಕ ಪಠಣ ಮಾಡಿದ ನರೇಂದ್ರ ಮೋದಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಜೈ ಶ್ರೀಕೃಷ್ಣ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ಉಡುಪಿ ಪಾತ್ರವನ್ನು ಪ್ರಸ್ತಾಪಿಸಿದ್ದು, ವಿಶ್ವೇಶ ತೀರ್ಥ ಸ್ವಾಮೀಜಿ ರಾಮ ಮಂದಿರ ಆಂದೋಲನ ನಡೆಸಿದ್ದು ವಿಶ್ವ ಅರಿತಿದೆ.ಅಯೋಧ್ಯೆಯಿಂದ ಉಡುಪಿಯವರೆಗೆ ಅಸಂಖ್ಯ ಸಂಖ್ಯೆಯಲ್ಲಿ ರಾಮ ಭಕ್ತರು ಇದ್ದಾರೆ ಎಂದರು.

ಉಡುಪಿಯನ್ನು ಕೊಂಡಾಡಿದ ಮೋದಿ

ನನ್ನ ಜನನ ಗುಜರಾತ್ ನಲ್ಲಿ ಆಗಿದ್ದರೂ ಉಡುಪಿ ಜೊತೆ ಅವಿನಾಭಾವ ಸಂಬಂಧ ಇದೆ. ಉಡುಪಿಗೆ ಇಂದು ಭೇಟಿ ನೀಡಿದ್ದು ವಿಶಿಷ್ಟ ಅನುಭೂತಿ. ನಾನು ದ್ವಾರಕೆಯಲ್ಲಿ ಹೋಗಿ ಶ್ರೀಕೃಷ್ಣನ ದರ್ಶನ ಪಡೆದಿದ್ದೆ. ಉಡುಪಿಗೆ ಬರುವುದು ಅಂದ್ರೆ ನನಗೆ ಬಹಳ ವಿಶೇಷ. ಹಿಂದೆ ಸ್ವಚ್ಛತಾ ಅಭಿಯಾನದಲ್ಲಿ ಉಡುಪಿ ಮೊದಲ ಸ್ಥಾನ ಬಂದಿತ್ತು ಉಡುಪಿ ಭಾರತೀಯ ಜನತಾ ಪಕ್ಷದ ಕರ್ಮಭೂಮಿಯಾಗಿದೆ. ಬಿಜೆಪಿಗೆ ದಿವಂಗತ ವಿ.ಎಸ್​.ಆಚಾರ್ಯರ ಕೊಡುಗೆಸಾಕಷ್ಟಿದೆ. ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಯಿಂದ ಮೋಕ್ಷ ಸಾಧ್ಯ. ಲಕ್ಷ ಕಂಠ ಗೀತಾ ಪಾರಾಯಣ ನಮಗೆ ಹೊಸ ಶಕ್ತಿ ನೀಡುತ್ತಿದೆ. ಇಂದು ವಿಶೇಷವಾಗಿ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ನಮಿಸುತ್ತೇನೆ. ಲಕ್ಷ ಕಠ ಗೀತಾ ಪಾರಾಯಣವನ್ನು ಇಂದು ಸಾಕಾರಗೊಳಿಸಿದ್ದಾರೆ ಎಂದು ಉಡುಪಿಯನ್ನು ಕೊಂಡಾಡಿದರು.

ಇದನ್ನೂ ನೋಡಿ: PM Modi in Udupi: ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಪ್ರಧಾನಿ ಮೋದಿ

ಉಡುಪಿ ಪಾತ್ರ ದೇಶಕ್ಕೆ ಗೊತ್ತಿದೆ

ಮೂರು ದಿನಗಳ ಹಿಂದೆ ನಾನು ಅಯೋಧ್ಯೆಯಲ್ಲಿದ್ದೆ, ಅಲ್ಲಿ ಧರ್ಮ ಧ್ವಜದ ಸ್ಥಾಪನೆಯಾಗಿದೆ. ಶ್ರೀರಾಮಮಂದಿರ ಆಂದೋಲನದಲ್ಲಿ ಉಡುಪಿಯ ಜನರ ಪಾತ್ರ ಇಡೀ ದೇಶಕ್ಕೆ ಗೊತ್ತಿದೆ. ಸ್ವರ್ಗೀಯಾಗಿರುವ ದಿ. ಪೇಜಾವರ ಶ್ರೀಗಳನ್ನ ನಾವು ಸ್ಮರಿಸಲೇಬೇಕು. ಅಲ್ಲದೇ ರಾಮಮಂದಿರ ನಿರ್ಮಾಣ ಉಡುಪಿಗೆ ಮತ್ತೊಂದು ಕಾರಣಕ್ಕೆ ವಿಶೇಷವಾಗಿದೆ. ಹೊಸ ಮಂದಿರದಲ್ಲಿ ಮಧ್ವಾಚಾರ್ಯರ (Madhvacharya) ಹೆಸರಿನ ಒಂದು ದ್ವಾರ ನಿರ್ಮಾಣ ಮಾಡಲಾಗಿದೆ. ರಾಮ ಮಂದಿರ ಪರಿಷತ್‌ನ ಒಂದು ದ್ವಾರ ಮಧ್ವರ ಹೆಸರಿನಲ್ಲಿ ಆಗಿರೋದು ಉಡುಪಿಗೆ ಮತ್ತೊಂದು ಹೆಮ್ಮೆ. ಜಗದ್ಗುರು ಮಧ್ವಾಚಾರ್ಯರ ಪರಂಪರೆ ಹರಿದಾಸ ಪರಂಪರೆಗಳಲ್ಲಿ ಒಂದು. ಶ್ರೀಕೃಷ್ಣನ ಉಪದೇಶ ಎಲ್ಲಾ ಯುಗಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದರು

ಭಗವದ್ಗೀತೆಯೊಂದಿಗೆ ಮುಂದಿನ ಪೀಳಿಗೆಯನ್ನು ಜೋಡಿಸುವ ಪ್ರಯತ್ನ ಆಗಿದೆ. ಅಯೋಧ್ಯೆಯಲ್ಲಿ ರಾಮಮಂದಿರಲ್ಲಿ ಧರ್ಮ ಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿಯವರೆಗೆ ಅಸಂಖ್ಯ ಸಂಖ್ಯೆಯಲ್ಲಿ ರಾಮ ಭಕ್ತರು ಇದರೊಂದಿಗೆ ಸೇರಿದ್ದಾರೆ. ವಿಶ್ವೇಶ ತೀರ್ಥ ಸ್ವಾಮೀಜಿ ರಾಮ ಮಂದಿರ ಆಂದೋಲನ ನಡೆಸಿದ್ದು ವಿಶ್ವ ಅರಿತಿದೆ. ರಾಮ ಮಂದಿರದ ಒಂದು ದ್ವಾರಕ್ಕೆ ಮಧ್ವಾಚಾರ್ಯರ ಹೆಸರು ಉಡುಪಿ ಮತ್ತು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಪುರಂದರ ದಾಸರು, ಕನಕದಾಸರು ದಾಸ ಪರಂಪರೆಯನ್ನು ಕನ್ನಡ ಭಾಷೆಯಲ್ಲಿ ಜನರ ಬಳಿಗೆ ಕೊಂಡೊಯ್ದರು. ಇಂದು ಉಡುಪಿಯಲ್ಲಿ ಕಿಂಡಿಯ ಮೂಲಕ ಭಗವಾನ್ ಶ್ರೀಕೃಷ್ಣನ ದರ್ಶನ ಆಯಿತು. ಕನಕದಾಸರಿಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿತು.

ಪಾಕ್​​ಗೆ ಪರೋಕ್ಷ ಎಚ್ಚರಿಕೆ

ಪೆಹಲ್ಗಾಮ್ ದುರಂತದಲ್ಲಿ ಕರ್ನಾಟಕದ ಸಹೋದರರೂ ಜೀವ ತೆತ್ತರು.ಈ ಹಿಂದಿನ ಸರ್ಕಾರಗಳು ಉಗ್ರ ಕೃತ್ಯಗಳಾದಾಗ ಸುಮ್ಮನಿದ್ದವು. ಆದ್ರೆ, ನಾವು ನಾವು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಆಪರೇಷನ್ ಸಿಂಧೂರ ಮೂಲ ತಕ್ಕ ಉತ್ತರ ಕೊಟ್ಟರು. ಈ ಮೂಲಕ ಭಯೋತ್ಪಾದನೆ ಕೃತ್ಯವನ್ನು ಸಹಿಸುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಕೃಷ್ಣನೂರು ಉಡುಪಿಯಲ್ಲಿ ಪ್ರಧಾನಿ ಮೋದಿ ಹವಾ: ರೋಡ್ ಶೋ, ಗೀತಾ ಪಾರಾಯಣ, ಕನಕನ ಕಿಂಡಿಯ ಸ್ವರ್ಣ ಕವಚ ಲೋಕಾರ್ಪಣೆ

ಒಂಭತ್ತು  ನವ ಸಂಕಲ್ಪ ಮಾಡುವಂತೆ ಮೋದಿ ಕರೆ

ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ನವ ಸಂಕಲ್ಪ ಮಾಡುವಂತೆ ಮನವಿ ಮಾಡಿದರು. ಎಲ್ಲರೂ ಈ ಒಂಭತ್ತು ಸಂಕಲ್ಪ ಮಾಡಿ ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದು ಒತ್ತಿ ಹೇಳಿದರು. ಹಾಗಾದ್ರೆ, ಮೋದಿ ಹೇಳಿದ 9 ಸಂಕಲ್ಪಗಳೇನು ಎನ್ನುವುದು ಈ ಕೆಳಗಿನಂತಿವೆ ನೋಡಿ.

  • ಮೊದಲ ಸಂಕಲ್ಪ: ಜಲಸಂರಕ್ಷಣೆ ಮಾಡುವುದು.
  • ಎರಡನೇ ಸಂಕಲ್ಪ: ಮರ ಬೆಳೆಸುವುದು, ತಾಯಿ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸಿ.
  • ಮೂರನೇ ಸಂಕಲ್ಪ: ಪ್ರತಿಯೊಬ್ಬರೂ ಕನಿಷ್ಠ ಒಬ್ಬ ಬಡವನ ಜೀವನವನ್ನು ಸುಧಾರಿಸಿ.
  • ನಾಲ್ಕನೇ ಸಂಕಲ್ಪ: ಸ್ವದೇಶಿ ಅಳವರಿಸಿಕೊಳ್ಳಿ, ವೂಕಲ್-ಲೋಕಲ್ ಮಂತ್ರ ನಮ್ಮದಾಗಲಿದೆ.
  • ಐದನೇ ಸಂಕಲ್ಪ: ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ.
  • ಆರನೇ ಸಂಕಲ್ಪ: ಆರೋಗ್ಯ ಪೂರ್ಣ ಜೀವನ ಶಥಲಿ ಅವಳವಡಿಸಿಕೊಳ್ಳೋಣ, ಊಟದಲ್ಲಿ ಎಣ್ಣೆ ಕಡಿಮೆ ಮಾಡೋಣ. ಸಿರಿಧಾನ್ಯ ಬಳಸೋಣ.
  • ಏಳನೇ ಸಂಕಲ್ಪ: ಯೋಗ ಅಳವಡಿಸಿಕೊಳ್ಳಿ, ಎಲ್ಲರೂ ಯೋಗಿಗಳಾಗಿ.
  • ಎಂಟನೇ ಸಂಕಲ್ಪ: ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡಿ.
  • ಒಂಭತ್ತನೇ ಸಂಕಲ್ಪ: ದೇಶದ ಕನಿಷ್ಠ 25 ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Fri, 28 November 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ