ಭ್ರಷ್ಟಾಚಾರದ ದಾಖಲೆಗಳಿವೆ, ಮುಂದಿನ ದಿನದಲ್ಲಿ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ: ಸುನಿಲ್​ ಕುಮಾ​ರ್​ಗೆ ಮುತಾಲಿಕ್​ ಎಚ್ಚರಿಕೆ

ಕಾರ್ಕಳ ಭ್ರಷ್ಟಾಚಾರದ ದಾಖಲೆಗಳಿದ್ದು, ಒಂದೊಂದಾಗಿ ಬಿಚ್ಚಿಡುತ್ತೇನೆ ಹಾಕುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಭ್ರಷ್ಟಾಚಾರದ ದಾಖಲೆಗಳಿವೆ, ಮುಂದಿನ ದಿನದಲ್ಲಿ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ: ಸುನಿಲ್​ ಕುಮಾ​ರ್​ಗೆ ಮುತಾಲಿಕ್​ ಎಚ್ಚರಿಕೆ
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 17, 2022 | 7:24 PM

ಉಡುಪಿ: ಕಾರ್ಕಳದ (Karkal) ಭ್ರಷ್ಟಾಚಾರದ ದಾಖಲೆಗಳಿದ್ದು, ಒಂದೊಂದಾಗಿ ಬಿಚ್ಚಿಡುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ. ಸೋಲು ಒಪ್ಪಿ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಚಿವ ಸುನೀಲ್​ ಕುಮಾರ್ (Sunil Kumar) ವಿರುದ್ಧ ಪರೋಕ್ಷವಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ (Pramod Mutalik) ವಾಗ್ದಾಳಿ ಮಾಡಿದ್ದಾರೆ. ಕಾರ್ಯಕರ್ತರಿಗೆ ಭಯಪಡಿಸುವ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಉಡುಪಿಯಲ್ಲಿ ಇಂದು (ಡಿ.17) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾರ್ಕಳದಲ್ಲಿ ಕೇಸ್​ ಹಾಕೋದು, ಹೆದರಿಸುವ ಕೆಲಸ ಮಾಡುತ್ತಿದ್ದಾರೆ ನಮ್ಮ ಸಚಿವ ಸುನೀಲ್​ ಕುಮಾರ್​ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 3 ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಕೇಸ್​ ಇದೆ. ಇಡೀ ರಾಜ್ಯದಲ್ಲಿ 18 ಹಿಂದೂ ಒಕ್ಕೂಟ ಬಿಜೆಪಿ ವಿರುದ್ಧ ನಿಲ್ಲಲಿದೆ. ಲವ್ ಜಿಹಾದ್, ಗೋವು ಕಳ್ಳತನ ಕಾರ್ಕಳ ಕ್ಷೇತ್ರದಲ್ಲಿ ಹೆಚ್ಚುತ್ತಿದೆ. ಹಿಂದೂ ವಿಚಾರಧಾರೆ ಕಡೆಗಣಿಸಿದ್ದೀರಿ. ಕಾಂಗ್ರೆಸ್ ಕೂಡ ಇದನ್ನೇ ಅಂದು ಮಾಡಿತು ನೀವೂ ಅದೇ ಮಾಡುತ್ತಿದ್ದೀರಾ? ಮುಂದಿನ ದಿನಗಳಲ್ಲಿ ನಿಮಗೆ ಸೋಲು ಗ್ಯಾರೆಂಟಿ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಕಾರ್ಕಳ ಕ್ಷೇತ್ರ ಬಿಟ್ಟು ಹೋಗುವಂತೆ ಸಚಿವ ಸುನಿಲ್ ಕುಮಾರ್​ಗೆ ಮನವಿಯೊಂದಿಗೆ ಸವಾಲ್ ಹಾಕಿದ ಮುತಾಲಿಕ್

ಹಿಂದುತ್ವಕ್ಕಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ

ಹಿಂದುತ್ವಕ್ಕಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕಾರ್ಯಕರ್ತರಿಗೆ ಶಕ್ತಿ ತುಂಬಲು ಈ ಸ್ಪರ್ಧೆ ಮಾಡುತ್ತಿದ್ದೇನೆ. ಈ ಸಂಬಂಧ 7-8 ಕ್ಷೇತ್ರಗಳನ್ನು ಅಧ್ಯಯನ ಮಾಡಿದ್ದು, ಇದರಲ್ಲಿ ಕಾರ್ಕಳ ಕೂಡ ಒಂದು. ಈ ತಿಂಗಳ ಅಂತ್ಯದಲ್ಲಿ ಕ್ಷೇತ್ರ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತೇನೆ. ಕಾರ್ಕಳದಲ್ಲಿ ಬೂತ್ ವೈಸ್ ಸಂಘಟನೆ ಮಾಡುತ್ತೇವೆ. ಭ್ರಷ್ಟಾಚಾರ ಡೋಂಗಿ ಹಿಂದುತ್ವದ ವಿರುದ್ಧ ಈ ಸ್ಪರ್ಧೆ ಎಂದರು.

ಮೂರು ಸಾವಿರ ಮತ ಸಿಗಲ್ಲ ಅಂತ ಜಿಲ್ಲಾಧ್ಯಕ್ಷರು ಅವರ ಅಭಿಪ್ರಾಯ ಹೇಳಿದ್ದಾರೆ. ಕಾರ್ಕಳದಲ್ಲಿ ಸಕಾರಾತ್ಮಕ ನಗುಮುಖದ ಸ್ವಾಗತ ಸಿಕ್ಕಿದೆ. ಅವರಿಗೆ ಅಧಿಕಾರದ ದುಡ್ಡಿನ ಅಹಂಕಾರ ಸೊಕ್ಕು ಬಂದಿದೆ. ದೌರ್ಜನ್ಯ ನಿಲ್ಲಿಸಿ, ಅತೃಪ್ತರನ್ನು ಕರೆದು ಮಾತನಾಡಿಸಿ ಸರಿಪಡಿಸಿಕೊಳ್ಳಿ. ಅವರು ದ್ರೋಹ ಮಾಡಿದ್ದಾರೆ. ಜಿಲ್ಲಾ ಸಂಚಾಲಕನಿಂದ, ರಾಜ್ಯ ಸಂಚಾಲಕ ಮಾಡಿದ್ದು ನಾನು. ನನಗೂ ಅವರಿಗೂ ಮಾತನಾಡುವುದು ಏನೂ ಉಳಿದಿಲ್ಲ. ಬಿಜೆಪಿಯನ್ನೇ ತಿದ್ದುತ್ತೇನೆ ಕಾಂಗ್ರೆಸ್ ಸೇರಲ್ಲ. ಮೋದಿಯಂತೆ ಕರ್ನಾಟಕದಲ್ಲೂ ಬಿಜೆಪಿ ಆಡಳಿತ ಕೊಡಬೇಕು. ಮನೆಮನೆಗೆ ಹೋಗಿ ಜೋಳಿಗೆ ಹಿಡಿದು ಮತ ಭಿಕ್ಷೆ ಬೇಡುತ್ತೇನೆ ಎಂದು ಹೇಳಿದ್ದಾರೆ.

ಬಾಯ್ಕಾಟ್​​ ‘ಪಠಾಣ್’​ ಅಭಿಯಾನಕ್ಕೆ ನಾವು ಕೈಜೋಡಿಸಿದ್ದೇವೆ

ಬಾಯ್ಕಾಟ್​​ ‘ಪಠಾಣ್’​ ಅಭಿಯಾನಕ್ಕೆ ನಾವು ಕೈಜೋಡಿಸಿದ್ದೇವೆ. ಕೇಸರಿ ಬಣ್ಣವನ್ನು ಬೇಷರಂ ರಂಗ್​ ಎಂದು ಹೇಳಿದ್ದಾರೆ. ಅದರ ಅರ್ಥ ಕೇಸರಿ ಬಣ್ಣ ಅಂದರೆ ನಾಚಿಕೆಗೇಡು ಎಂದಾಯ್ತು. ಎಲ್ಲರೂ ನಾಚಿಕೆ ಪಡಬೇಕಾದ ದೃಶ್ಯ ಸಿನಿಮಾದಲ್ಲಿದೆ. ಬಾಲಿವುಡ್ ಸಿನಿಮಾ ಮೇಲಿಂದ ಮೇಲೆ ಇಸ್ಲಾಮೀಕರಣ ಹೇರುತ್ತಿವೆ. ಬಾಲಿವುಡ್​​​​ಗೆ ದಾವೂದ್​ ಬೆಂಬಲವಾಗಿದ್ದಾನೆ ಎಂದು ಮಾತನಾಡಿದರು.

ವ್ಯವಸ್ಥಿತವಾಗಿ ಹಿಂದೂಗಳನ್ನೇ ಟಾರ್ಗೆಟ್​ ಮಾಡಲಾಗುತ್ತಿದೆ. ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಸಿನಿಮಾ ಮಾಡುತ್ತಾರೆ. ಹಿಂದೂಗಳಿಗೆ ಕುಂಕುಮ ಹಚ್ಚಿ ಗೂಂಡಾಗಳ ರೀತಿ ತೋರಿಸುತ್ತಾರೆ. ಮುಸ್ಲಿಂ ಪಾತ್ರಗಳನ್ನ ಸಭ್ಯವಾಗಿ ತೋರಿಸುತ್ತಾರೆ. ಪಿಕೆ ಸಿನಿಮಾದಲ್ಲೂ ಹಿಂದೂ ದೇವರುಗಳ ಅವಹೇಳನ ಮಾಡಲಾಗಿತ್ತು. ಪಾಕಿಸ್ತಾನ ಹುಡುಗನ ಜೊತೆ ಹಿಂದೂ ಹುಡುಗಿಯ ಪ್ರೀತಿ ತೋರಿಸುತ್ತಾರೆ. ಯಾಕೆ ಭಾರತದಲ್ಲಿ ಯಾರು ಹುಡುಗರು ಸಿಗಲ್ವಾ ಪಾಕಿಸ್ತಾನ ಹುಡುಗನೇ ಬೇಕಾ? ಪಾಕಿಸ್ತಾನ ತುಂಬಾ ಚೆನ್ನಾಗಿದೆ ಅನ್ನೋ ದೃಷ್ಟಿಕೋನ ಬಿತ್ತುತ್ತಿದ್ದಾರೆ. ಈ ಮೂರು ಜನ ಖಾನ್​ಗಳು ದೇಶದ್ರೋಹಿಗಳು. ಇವರು ಹಿಂದೂ ಧರ್ಮ ದ್ರೋಹಿಗಳು ಎಂದು ಆರೋಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:24 pm, Sat, 17 December 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ