ಉಡುಪಿ, ಸೆ.20: ಗಂಡನ ಅಕ್ರಮ ಸಂಬಂಧದ ಬಗ್ಗೆ ಹೆಂಡತಿಗೆ ಅನುಮಾನ ವ್ಯಕ್ತವಾಗಿದ್ದು, ಈ ಹಿನ್ನಲೆ ಪತ್ನಿ ಆತನಿಗೆ ಮೆಣಸಿನ ಹುಡಿ ಮಿಶ್ರಿತ ಬಿಸಿನೀರು ಎರೆಚಿದ ಘಟನೆ ಉಡುಪಿ (Udupi) ಜಿಲ್ಲೆಯ ಕಾಪು ತಾಲೂಕಿನ ಮಣಿಪುರದಲ್ಲಿ ನಡೆದಿದೆ. ಮೊಹಮ್ಮದ್ ಆಸೀಫ್(22) ಗಂಭೀರ ಸುಟ್ಟ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೌದು, ಪತಿ ಬಾತ್ ರೂಮ್‌ನಲ್ಲಿರುವಾಗ ಪತ್ನಿ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಎರಚಿದ್ದಾರೆ. ಬಿಸಿ ನೀರಿನ ಪರಿಣಾಮ ಆಸೀಫ್ ದೇಹದ ಎಡಭಾಗ ಸಂಪೂರ್ಣ ಸುಟ್ಟ ಗಾಯಗಳಾಗಿವೆ. ಇನ್ನು ಗಾಯಗೊಂಡಿದ್ದ ಆಸೀಫ್ನನ್ನು ಹೆಂಡತಿ ಮನೆಯವರು ಕೂಡಿ ಹಾಕಿ ಕ್ರೌರ್ಯ ಮೆರೆದಿದ್ದಾರೆ.
ಇನ್ನು ಗಂಡನ ಅಕ್ರಮ ಸಂಬಂಧದ ಬಗ್ಗೆ ಶಂಕೆ ವ್ಯಕ್ತಪಡಿಸಿ, ಪತ್ನಿ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಎರಚಿದ್ದಾರೆ. ಪತಿ ಆಸೀಫ್ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಾ ಜೋರಾಗಿ ಕಿರುಚಿಕೊಂಡಿದ್ದಾನೆ. ಈ ವೇಳೆ ಕೂಗಿಕೊಂಡಿದ್ದ ಆಸೀಫ್ನನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಆತನ ಮುಖ, ಎಡಗೈ, ಎದೆ, ಹೊಟ್ಟೆ ಸುಟ್ಟು ಗುಳ್ಳೆ ಎದ್ದಿವೆ. ಈ ಕುರಿತು ಆಸೀಫ್ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಹಾವೇರಿ: ರೈಲಿಗೆ ಸಿಲುಕಿ ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಬಲಿಯಾದ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಸವಣೂರು ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಬೆಂಗಳೂರಿನಿಂದ ಹುಬ್ಬಳ್ಳಿಯತ್ತ ಈ ರೈಲು ಸಾಗುತ್ತಿತ್ತು. ಈ ವೇಳೆ ದುರ್ಘಟನೆ ನಡೆದಿದೆ. ಕುರಿ ಕಳೆದುಕೊಂಡ ಕುರಿಗಾಹಿ ರಮೇಶ್ ಮಗ್ಲಪ್ಪ ಲಮಾಣಿ ಹಾಗೂ ಆತನ ಹತ್ತಿಮತ್ತೂರು ತಾಂಡದವರು ಲಕ್ಷಾಂತರ ರೂ.ಮೌಲ್ಯದ ಕುರಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಈ ಘಟನೆ ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Wed, 20 September 23