AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿಯಲ್ಲಿ ಮತ್ತೆ ಮೀನುಗಾರಿಕೆ ಆರಂಭ: ಸಮುದ್ರ ರಾಜನಿಗೆ ಹಾಲೆರೆದು ಕಡಲ ಮಕ್ಕಳಿಂದ ಪೂಜೆ

ಉಡುಪಿಯಲ್ಲಿ ಎರಡು ತಿಂಗಳ ಮೀನುಗಾರಿಕೆ ನಿಷೇಧದ ನಂತರ ಮೀನುಗಾರರು ಮತ್ತೆ ಸಮುದ್ರಕ್ಕೆ ಇಳಿದಿದ್ದಾರೆ. ಸುರಕ್ಷಿತ ಮೀನುಗಾರಿಕೆಗಾಗಿ ಸಮುದ್ರ ರಾಜನಿಗೆ ಪೂಜೆ ಸಲ್ಲಿಸಲಾಗಿದೆ. ಸಾವಿರಾರು ಬೋಟ್‌ಗಳು ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳಲಿವೆ. ಹೇರಳವಾದ ಮೀನು ಸಿಗಲೆಂದು ಮೀನುಗಾರರು ಪ್ರಾರ್ಥಿಸಿದ್ದಾರೆ. ಪ್ರತಿಕ್ಷಣ ಅಪಾಯದಲ್ಲಿರುವ ಈ ಕಡಲ ಮಕ್ಕಳು ತಮ್ಮ ಧೈರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿದ್ದಾರೆ.

ಕರಾವಳಿಯಲ್ಲಿ ಮತ್ತೆ ಮೀನುಗಾರಿಕೆ ಆರಂಭ: ಸಮುದ್ರ ರಾಜನಿಗೆ ಹಾಲೆರೆದು ಕಡಲ ಮಕ್ಕಳಿಂದ ಪೂಜೆ
ಮೀನುಗಾರರ ಪೂಜೆ
ಪ್ರಜ್ವಲ್ ಅಮೀನ್​, ಉಡುಪಿ
| Edited By: ವಿವೇಕ ಬಿರಾದಾರ|

Updated on:Aug 09, 2025 | 4:14 PM

Share

ಉಡುಪಿ, ಆಗಸ್ಟ್​ 09: ಎರಡು ತಿಂಗಳ ಮೀನುಗಾರಿಕೆ (Fishing) ನಿಷೇಧದ ಬಳಿಕ ಮತ್ತೆ ಸಮುದ್ರಕ್ಕೆ (Sea) ಇಳಿಯಲು ಕಡಲ ಮಕ್ಕಳು ಸನ್ನದ್ಧರಾಗಿದ್ದಾರೆ. ಪ್ರತಿಕ್ಷಣವು ಕಡಲಿನ ಅಲೆಯ ನಡುವೆ ಗುದ್ದಾಡಿ ಮೀನುಗಾರಿಕೆ ನಡೆಸುವ ಮೀನುಗಾರರು ಯಾವುದೇ ಅಪಾಯ ಎದುರಾಗದಿರಲಿ ಎಂದು ಸಮುದ್ರ ರಾಜನಿಗೆ ಶನಿವಾರ (ಆ.09) ಪೂಜೆ ಸಲ್ಲಿಸಿದರು. ಕಡಲ ಮಕ್ಕಳು ಅಪ್ರತಿಮ ಸಾಹಸಿಗಳು, ಬೋಟ್​ಗಳಲ್ಲಿ ಬಲೆಗಳನ್ನು ತುಂಬಿಕೊಂಡು ಕಡಲಿಗೆ ಇಳಿದರೆ 15 ದಿನ ಸಮುದ್ರ ಬಿಟ್ಟು ದಡಕ್ಕೆ ಬರುವುದಿಲ್ಲ.

ಮೀನುಗಾರಿಕೆ ಎಂಬ ಅದೃಷ್ಟದ ಆಟ ಇಂದಿನಿಂದ ಸಾಂಪ್ರದಾಯಿಕವಾಗಿ ಆರಂಭವಾಗಿದೆ. ಆಳಸಮುದ್ರದಲ್ಲಿ ಪರ್ಸಿನ್ ಬೋಟ್ ಸೇರಿದಂತೆ ಸಾವಿರಾರು ಬೋಟ್​ಗಳು ಇಂದಿನಿಂದ ಬೃಹತ್ ಪ್ರಮಾಣದ ಮೀನುಗಾರಿಕೆಯಲ್ಲಿ ತೊಡಗಲಿವೆ. ಹೇರಳವಾಗಿ ಮೀನು ಲಭ್ಯವಾಗಲಿ ಎಂದು ಪ್ರಾರ್ಥಿಸುವ ಸಲುವಾಗಿ ಇಂದು ಕಡಲ ಮಕ್ಕಳು ಸಮುದ್ರಕ್ಕೆ ಪೂಜೆಯನ್ನು ಮಾಡಿದರು. ಸಮುದ್ರಕ್ಕೆ ಹಾಲೆರೆದು ಸಮುದ್ರ ರಾಜನ ಆರಾಧನೆ ಮಾಡಿದರು.

ಮಲ್ಪೆ ಕಡಲ ತೀರದಲ್ಲಿರುವ ವಡಭಾಂಡೇಶ್ವರ ಬಲರಾಮ ಸನ್ನಿಧಾನದಲ್ಲಿ ಸೇರಿದ ಮೀನುಗಾರರು ಬಲರಾಮ, ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ಪ್ರಸಾದ ಕೈಯಲ್ಲಿ ಹಿಡಿದು ಕಡಲ ಕಿನಾರೆಗೆ ಮೆರವಣಿಗೆ ಮೂಲಕ ಆಗಮಿಸಿ, ಪೂಜೆ ನೆರವೇರಿಸಿದರು. ಬಳಿಕ ಸಾಮೂಹಿಕವಾಗಿ ಸಮುದ್ರಕ್ಕೆ ದೇವರ ಪ್ರಸಾದವನ್ನು ಅರ್ಪಿಸಲಾಯಿತು. ಈ ಸಂಧರ್ಭದಲ್ಲಿ ಅಬ್ಬರಿಸುವ ಕಡಲಿಗೆ ಹಾಲೆರುದು ಸಮುದ್ರ ರಾಜನ ಆಶಿರ್ವಾದ ಪಡೆಯುವುದು ಸಂಪ್ರದಾಯ. ಅದರಂತೆ ಸೀಯಾಳ, ಫಲಪುಷ್ಪವನ್ನು ಸಮುದ್ರ ರಾಜನಿಗೆ ಅರ್ಪಿಸಲಾಯಿತು.

ಇದನ್ನೂ ಓದಿ: ಉಕ್ಕಿ ಹರಿಯುವ ನದಿಯಲ್ಲಿ ದೋಣಿ ನಡೆಸುವ ದಿಟ್ಟ ಮಹಿಳೆ: ಶಾಲಾ ಮಕ್ಕಳಿಗೆ ಇವರೇ ನಾವಿಕೆ

ಕಡಲಿನಲ್ಲಿ ಮೀನುಗಾರಿಕೆ ವೇಳೆ ನೂರೆಂಟು ಅಪಾಯಗಳು ಎದರುಗಾತ್ತವೆ. ಯಾವುದೇ ಅನಾಹುತ ಆಗದೆ ಉತ್ತಮ ಮೀನುಗಾರಿಕೆ ಆಗಲಿ ಅಂತ ಸಮುದ್ರ ರಾಜನಲ್ಲಿ ಪ್ರಾರ್ಥಿಸಲಾಯಿತು. ಇಂದಿನಿಂದ ಕಡಲು ಮಕ್ಕಳು ಆಳಸಮುದ್ರದಲ್ಲಿ ಮತ್ಸ್ಯ ಬೇಟೆಗೆ ಇಳಿದಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:12 pm, Sat, 9 August 25

Follow Us
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ