AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಯಲ್ಲಿ ಮೊಟ್ಟೆ ಕೊಡುವ ವಿಚಾರವಾಗಿ ಅರ್ಧ ಮಾಹಿತಿ ಮಾತ್ರ ತಿಳಿದಿತ್ತು: ಸ್ಪಷ್ಟನೆ ನೀಡಿದ ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿಗಳು

ಶಾಲೆಯಲ್ಲಿ ಸಾಮೂಹಿಕವಾಗಿ ಮೊಟ್ಟೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಶಾಲೆಯಲ್ಲಿ ಮೊಟ್ಟೆ ತಿನ್ನುವವರಿಗೆ ಮೊಟ್ಟೆ ಕೊಡುತ್ತಾರೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ನೀಡುತ್ತಾರೆ ಎನ್ನುವ ವಿಚಾರ ನಂತರ ತಿಳಿಯಿತು.

ಶಾಲೆಯಲ್ಲಿ ಮೊಟ್ಟೆ ಕೊಡುವ ವಿಚಾರವಾಗಿ ಅರ್ಧ ಮಾಹಿತಿ ಮಾತ್ರ ತಿಳಿದಿತ್ತು: ಸ್ಪಷ್ಟನೆ ನೀಡಿದ ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿಗಳು
ಪೇಜಾವರ ಶ್ರೀ
TV9 Web
| Updated By: Pavitra Bhat Jigalemane|

Updated on: Dec 17, 2021 | 4:00 PM

Share

ಉಡುಪಿ: ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರವಾಗಿ ನೀಡಿದ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡು ತಿರುಚಿವೆ. ವಾಸ್ತವವಾಗಿ ನನಗೆ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರದ ಬಗ್ಗೆ ತಪ್ಪಾದ ಮಾಹಿತಿ ದೊರಕಿತ್ತು. ಅದಕ್ಕೆ ತಕ್ಕ ಹಾಗೆ ನಾನು ಉತ್ತರಿಸಿರುವೆ. ಮಾಧ್ಯಮಗಳು ನನ್ನ ಅಭಿಪ್ರಾಯವನ್ನು ತಿರುಚಿವೆ ಎಂದು ಉಡುಪಿಯಲ್ಲಿ ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಸಾಮೂಹಿಕವಾಗಿ ಎಲ್ಲರಿಗೂ ಮೊಟ್ಟೆ ವಿತರಿಸಲಾಗುತ್ತಿದೆ. ಈ ಬಗ್ಗೆ ನಿಮ್ ಅಭಿಪ್ರಾಯವೇನು ಎಂದು ಕೇಳಲಾಗಿತ್ತು. ಇದಕ್ಕೆ ಸಹಜವಾಗಿ ಆಹಾರದ ಹಕ್ಕು, ಸ್ವಾತಂತ್ರ್ಯ ಎಲ್ಲರಿಗೂ ಇದೆ ಸಸ್ಯಹಾರಿಗಳಿಗೆ ಮೊಟ್ಟೆ ತಿನ್ನಿಸುವ ಕೆಲಸ ಅಗಬಾರದು. ಶಾಲೆಯಲ್ಲಿ ಕೆಲವರಿಗೆ ಮೊಟ್ಟೆ ವಿತರಣೆ, ಕೆಲವರಿಗೆ ನೀಡದಿರುವುದು ಮತಭೇದಕ್ಕೆ ಕಾರಣವಾಗುತ್ತದೆ. ಹೀಗಾಗಿ ಶಾಲೆಯಲ್ಲಿ ಸಾಮೂಹಿಕವಾಗಿ ಮೊಟ್ಟೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಶಾಲೆಯಲ್ಲಿ ಮೊಟ್ಟೆ ತಿನ್ನುವವರಿಗೆ ಮೊಟ್ಟೆ ಕೊಡುತ್ತಾರೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ನೀಡುತ್ತಾರೆ ಎನ್ನುವ ವಿಚಾರ ನಂತರ ತಿಳಿಯಿತು.

ಪೂರ್ತಿಯಾಗಿ ವಿಚಾರವನ್ನು ನಮಗೆ ತಿಳಿಸದೆ ಮೊಟ್ಟೆ ಹಂಚುವ ಕುರಿತು ಅಭಿಪ್ರಾಯವೇನು ಎಂದು ಅರ್ಧ ಸತ್ಯ ಕೇಳಲಾಗಿದೆ. ಅದಕ್ಕೆ ತಕ್ಕ ಹಾಗೆ ನಾನು ಉತ್ತರ ನೀಡಿದ್ದೇನೆ. ಸಮಾಜದ ಮುಂದೆ ನಮ್ಮ ಅಭಿಪ್ರಾಯ ಮುಂದಿಟ್ಟು ಶಾಲೆಯಲ್ಲಿ ಬಡ, ಆಶಕ್ತ, ದುರ್ಬಳ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ವಿರೋದಿಸುತ್ತಿದ್ದಾರೆ. ಪೂರ್ತಿ ವಿಚಾರ ತಿಳಿಸದೆ ತಮ್ಮ ಅಭಿಪ್ರಾಯ ಏನು ಎಂದು ಕೇಳುವ ಮೂಲಕ ಜನಸಮೂಹವನ್ನ ಎತ್ತಿಕಟ್ಟುವ ಕೆಲಸ ನಡೆದಿದೆ ಸಮಾಜ ಸಂಘಟಿಸುವ ಕಾರ್ಯ ನಡೆಯಬೇಕು ಹೊರತು ಸಮಾಜ ಒಡೆಯುವ ಕೆಲಸ ನಡೆಯಬಾರದು. ಒಂದು ವರ್ಗವನ್ನು ಹಿಯಾಳಿಸುವ ಕೆಲಸ ಮಾಡಬಾರದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ಬೀದರ್​ ಶಾಲೆಯಲ್ಲಿ ಮೊಟ್ಟೆ ಬೇಕು ಎನ್ನುತ್ತಿರುವ ವಿದ್ಯಾರ್ಥಿಗಳು

ಶಾಲಾ ಮಕ್ಕಳಿಗೆ ಮೊಟ್ಟೆ ಕೊಡೊದಕ್ಕೆ ಬೀದರ್ ನ ಕೆಲ ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸ್ವಾಮೀಜಿಗಳ ವಿರೋಧ ಸರಿಯಿಲ್ಲ ಎನ್ನುವ ರೀತಿಯಲ್ಲಿ ಬೀದರ್ ಜಿಲ್ಲೆಯ ಸರಕಾರಿ ಶಾಲೆ ಮಕ್ಕಳು ಮೊಟ್ಟೆಯಲ್ಲಿ ವಿಟಮಿನ್ ಹೆರಳವಾಗಿದ್ದು ನಮಗೆ ಮೊಟ್ಟೆ ಬೇಕೇ ಬೇಕು ಎನ್ನುತ್ತಿದ್ದಾರೆ. ಅಲ್ಲದೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ‌ಜಾಲತಾಣದಲ್ಲಿ ಹರಿಬಿಡುವ ಮೂಲಕ ಯಾವುದೇ ಕಾರಣಕ್ಕೂ ಮಕ್ಕಳಿಗೆ ಮೊಟ್ಟೆ ಕೊಡೊದನ್ನ ನಿಲ್ಲಿಸಬಾರದೆಂದು‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ:

ಭೂಕಬಳಿಕೆ ಪ್ರಕರಣ: ಭೈರತಿ ಬಸವರಾಜ್ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ; ಸಂಪುಟದಿಂದ ವಜಾಗೊಳಿಸಲು ಆಗ್ರಹ