ಹಿರಿಯ ಶ್ರೀಗಳ ಜೊತೆ ವಿಶೇಷ ಒಡನಾಟವಿದ್ದ ಅಡ್ವಾಣಿಗೆ ಭಾರತ ರತ್ನ ಅತ್ಯಂತ ಸಂತಸ ತಂದಿದೆ: ಅಯೋಧ್ಯೆಯಿಂದ ಪೇಜಾವರ ಶ್ರೀ ಸಂದೇಶ

ಎಲ್​.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಈ ಸಂಬಂಧ ಅಯೋಧ್ಯೆಯಿಂದ ಉಡುಪಿಯ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಭಾಶಯ ತಿಳಿಸಿದ್ದಾರೆ. ಅಡ್ವಾಣಿ ಓರ್ವ ವಿನಯವಂತ ರಾಜಕಾರಣಿ. ರಾಮ ಮತ್ತು ಕೃಷ್ಣದೇವರ ಅನುಗ್ರಹ ಅಡ್ವಾಣಿಯವರಿಗೆ ಸದಾ ಕಾಲ ಇರಲಿ ಎಂದು ಹಾರೈಸಿದ್ದಾರೆ.

ಹಿರಿಯ ಶ್ರೀಗಳ ಜೊತೆ ವಿಶೇಷ ಒಡನಾಟವಿದ್ದ ಅಡ್ವಾಣಿಗೆ ಭಾರತ ರತ್ನ ಅತ್ಯಂತ ಸಂತಸ ತಂದಿದೆ: ಅಯೋಧ್ಯೆಯಿಂದ ಪೇಜಾವರ ಶ್ರೀ ಸಂದೇಶ
ರಾಮಜನ್ಮಭೂಮಿ ಜನಾದೇಶ ಸಭೆಯಲ್ಲಿ ಅಡ್ವಾಣಿ, ಪೇಜಾವರ ಶ್ರೀ
Follow us
| Updated By: ಆಯೇಷಾ ಬಾನು

Updated on:Feb 03, 2024 | 1:20 PM

ಉಡುಪಿ, ಫೆ.03: ಬಿಜೆಪಿಯ ಭೀಷ್ಮ, ರಾಮ ಮಂದಿರದ ರುವಾರಿ, ಕಮಲ ಪಾಳೆಯದ ಫೈರ್ ಬ್ರ್ಯಾಂಡ್ ನಾಯಕ ಅಂತಾ ಗುರುತಿಸಿಕೊಂಡಿದ್ದ ಮಾಜಿ ಉಪ ಪ್ರಧಾನಿ ಎಲ್​.ಕೆ.ಅಡ್ವಾಣಿ (LK Advani) ಅವರಿಗೆ ದೇಶದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಈ ಸಂಬಂಧ ಅಯೋಧ್ಯೆಯಿಂದ ಉಡುಪಿಯ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Udupi Pejavara Sri) ಶುಭಾಶಯ ತಿಳಿಸಿದ್ದಾರೆ. ಹಿರಿಯ ಶ್ರೀಗಳ ಜೊತೆ ವಿಶೇಷ ಒಡನಾಟವಿದ್ದ ಅಡ್ವಾಣಿಗೆ ಭಾರತ ರತ್ನ ಅತ್ಯಂತ ಸಂತಸ ತಂದಿದೆ ಎಂದು ಸಂದೇಶ ಕಳಿಸಿದ್ದಾರೆ.

ಪೇಜಾವರ ಶ್ರೀಗಳ ಸಂದೇಶ ಹೀಗಿದೆ

ಈ ವಿಚಾರ ಕೇಳಿ ತುಂಬಾ ಸಂತೋಷವಾಗಿದೆ. ಶ್ರೀರಾಮಚಂದ್ರನ ಭಕ್ತಿಯನ್ನು ದೇಶದಲ್ಲಿ ಜಾಗೃತ ಇಟ್ಟವರು ಅಡ್ವಾಣಿ. ರಥಯಾತ್ರೆಯ ಮೂಲಕ ಸುಪ್ತವಾಗಿದ್ದ ರಾಮಮಂದಿರ ಹೋರಾಟಕ್ಕೆ ಬಲ ತುಂಬಿದವರು ಇವರು. ಶ್ರೀ ವಿಶ್ವೇಶ ತೀರ್ಥರ ಜೊತೆ ವಿಶೇಷ ಒಡನಾಟ ಇತ್ತು. ಈ ವಯಸ್ಸಿನಲ್ಲೂ ಅಡ್ವಾಣಿ ಅವರ ಶ್ರದ್ಧೆ ಮೆಚ್ಚುವಂಥದ್ದು. ಅಡ್ವಾಣಿ ದೇಶದ ರಾಜಕಾರಣಕ್ಕೆ ಉತ್ತಮ ಮಾರ್ಗದರ್ಶಿ. ಸಾಮಾನ್ಯ ಕಾರ್ಯಕರ್ತನಾಗಿ ಹುಟ್ಟಿ ದೊಡ್ಡ ರಾಜಕಾರಣಿಯಾಗಿ ಬೆಳೆದವರು. ಉಪ ಪ್ರಧಾನಿ, ಗೃಹ ಇಲಾಖೆ, ಹಾಗೂ ವಾರ್ತಾ ಸಚಿವರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಕೇವಲ ರಾಜಕೀಯ ಮಾತ್ರವಲ್ಲ ಧಾರ್ಮಿಕ ಪ್ರಜ್ಞೆ ಇರುವ ವ್ಯಕ್ತಿ. ನಾನು ಅಯೋಧ್ಯ ರಾಮ, ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಾಸ್ಥನಾದಾಗ ಅಡ್ವಾಣಿಯವರನ್ನು ಭೇಟಿಯಾಗಿದ್ದೆ. ಅವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿ ಬಂದಿದ್ದೆ. ಅಡ್ವಾಣಿ ಓರ್ವ ವಿನಯವಂತ ರಾಜಕಾರಣಿ. ಇಳಿ ವಯಸ್ಸಿನಲ್ಲೂ ಬಾಗಿಲವರೆಗೆ ಬಂದು ನನ್ನನ್ನು ಬಿಳ್ಕೊಟ್ಟು ಹೋಗಿದ್ದರು. ರಾಮ ಮತ್ತು ಕೃಷ್ಣದೇವರ ಅನುಗ್ರಹ ಅಡ್ವಾಣಿಯವರಿಗೆ ಸದಾ ಕಾಲ ಇರಲಿ ಎಂದು ಅಯೋಧ್ಯೆಯಿಂದ ಪೇಜಾವರ ಶ್ರೀಗಳು ಸಂದೇಶ ರವಾನಿಸಿದ್ದಾರೆ.

Udupi Pejawar Vishwesha Teertha Seer close aide Vishwaprasanna Teertha swamiji hails Bharat Ratna to LK Advani

ಎಲ್​.ಕೆ.ಅಡ್ವಾಣಿ ಅವರನ್ನು ಸನ್ಮಾನಿಸುತ್ತಿರುವ ಪೇಜಾವರ ಶ್ರೀ

ಇದನ್ನೂ ಓದಿ: ಎಲ್​ಕೆ ಅಡ್ವಾಣಿಗೆ ಭಾರತ ರತ್ನ: ಬಿಜೆಪಿಯ ಭೀಷ್ಮನ ರಾಜಕೀಯ ಜೀವನ ಇಲ್ಲಿದೆ…

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿತ್ತು. ಇದೀಗ ದೇಶ ಕಂಡ ಮುತ್ಸದಿ ರಾಜಕಾರಣಿ, ಬಿಜೆಪಿಯನ್ನ ಕಟ್ಟಿ ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿದ ಅಡ್ವಾಣಿ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪ್ರಶಸ್ತಿ ಗೌರವನ್ನ ಘೋಷಿಸಲಾಗಿದೆ. ಖುದ್ದು ಪ್ರಧಾನಿ ಮೋದಿಯೇ, ಅಡ್ವಾಣಿ ಅವರಿಗೆ ಭಾರತ ರತ್ನ ಸಿಕ್ಕಿರೋದಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. ಅಡ್ವಾಣಿ ಅತ್ಯಂತ ಗೌರವಯುತವಾದ ರಾಜಕಾರಣಿ. ಭಾರತದ ಅಭಿವೃದ್ಧಿ ಅಡ್ವಾಣಿ ಕೊಡುಗೆ ಅಪಾರ ಅವರ ರಾಜಕೀಯ ಜೀವನ ನಮ್ಮಲ್ಲರಿಗೂ ಮಾರ್ಗದರ್ಶನ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

90 ರ ದಶಕದಲ್ಲಿ ರಾಮ ಮಂದಿರ ನಿರ್ಮಾಣದ ಕನಸನ್ನ ಬಿತ್ತಿದ ಅಡ್ವಾಣಿ, ದೇಶದ ಉದ್ದಗಲಕ್ಕೂ ರಾಮ ರಥಯಾತ್ರೆ ಮೂಲಕ ಸದ್ದು ಮಾಡಿದ್ರು. ಅಂದು ಅಡ್ವಾಣಿ ರಥಯಾತ್ರೆಗೆ ನರೇಂದ್ರ ಮೋದಿ ಸಾರಥಿಯಂತೆ ಕೆಲಸ ಮಾಡಿದ್ರು. ಇದೀಗ, ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲೇ ರಾಮ ಮಂದಿರ ನಿರ್ಮಾಣವಾಗಿದ್ದು, ಕೋಟ್ಯಂತರ ರಾಮ ಭಕ್ತರ ಶತಮಾನಗಳ ಕನಸು ಈಡೇರಿತ್ತು. ವಯಸ್ಸು ಮತ್ತು ಚಳಿಯ ಕಾರಣದಿಂದ ರಾಮ ಮಂದಿರ ಉದ್ಘಾಟನೆ, ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಡ್ವಾಣಿ ಗೈರಾಗಿದ್ರು. ಇದೀಗ ಇದೇ ರಥ ಪುರುಷನಿಗೆ ಭಾರತ ರತ್ನ ಒಲಿದು ಬಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:14 pm, Sat, 3 February 24

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ