Udupi News: ರೈಲು ಹಳಿಯ ವಿದ್ಯುತ್ ಕಂಬದ ಮೇಲೆ ಕುಸಿದ ಮರ; ಹಲವು ರೈಲುಗಳ ಸಂಚಾರ ವ್ಯತ್ಯಯ
ರೈಲು ಹಳಿಯ ವಿದ್ಯುತ್ ಕಂಬದ ಮೇಲೆ ಮರ ಕುಸಿದು ಬಿದ್ದ ಘಟನೆ ಉಡುಪಿಯ ಬಾರ್ಕೂರು ಬಳಿ ನಡೆದಿದೆ. ಪರಿಣಾಮವಾಗಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಉಡುಪಿ: ರೈಲು ಹಳಿಯ ವಿದ್ಯುತ್ ಕಂಬದ ಮೇಲೆ ಮರ ಕುಸಿದು ಬಿದ್ದ ಘಟನೆ ಉಡುಪಿಯ (Udupi) ಬಾರ್ಕೂರು ಬಳಿ ನಡೆದಿದೆ. ಪರಿಣಾಮವಾಗಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಎರಡು ಗಂಟೆಯಿಂದ ರೈಲು ಸಂಚಾರ ಸ್ಥಗಿತಗೊಂಡಿದೆ. ನಿಜಾಮುದ್ದೀನ್ – ತಿರುವನಂತಪುರ ಎಕ್ಸ್ಪ್ರೆಸ್ (Nizamuddin Thiruvananthapuram express) ರೈಲು ಸಂಚಾರ ಸ್ಥಗಿತವಾಗಿದೆ. ಅದೇ ರೀತಿ, ದೆಹಲಿ – ಕೇರಳ ನಡುವೆ ಸಂಚರಿಸುವ ರೈಲು ಪ್ರಯಾಣವೂ ಸ್ಥಗಿತಗೊಂಡಿದೆ.
ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಎರಡು ಗಂಟೆಯಿಂದ ಸ್ಥಗಿತವಾಗಿದೆ. ಮರ ತೆರವು, ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡುವ ಅಧಿಕಾರ ತಹಶೀಲ್ದಾರ್ಗೆ ನೀಡಲಾಗಿದೆ. ಪರಿಸ್ಥಿತಿ ನೋಡಿಕೊಂಡು ರಜೆ ನೀಡುವಂತೆ ತಹಶೀಲ್ದಾರ್ಗಳಿಗೆ ಸೂಚನೆ ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ರಜೆ ನೀಡುವ ಅಧಿಕಾರ ನೀಡಿ ಜಿಲ್ಲಾಧಿಕಾರಿ ಡಾ. ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಕರಾವಳಿ ಕರ್ನಾಟಕದಲ್ಲಿ ಮುಂದುವರಿದ ಮಳೆ, ರೆಡ್ ಅಲರ್ಟ್ ಘೋಷಣೆ, ಮಣಿಪಾಲದಲ್ಲಿ ರಸ್ತೆ ಬದಿ ಗುಡ್ಡ ಕುಸಿತ
ಮಣಿಪಾಲ ನಗರದ ಮುಖ್ಯ ರಸ್ತೆಗೆ ಗುಡ್ಡ ಕುಸಿದಿದ್ದು, ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗುಡ್ಡದ ಮೇಲ್ಭಾಗದಲ್ಲಿ ಕಟ್ಟಡಗಳಿದ್ದುದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ