ಉಡುಪಿಯ ಪಾರಂಪರಿಕ ಕಟ್ಟಡ ನೆಲಸಮವಾಗಲು ಕ್ಷಣಗಣನೆ, ಕಟ್ಟಡ ಉಳಿಸಲು ಸ್ಥಳೀಯರಿಂದ ಹರಸಾಹಸ, ಹೋರಾಟ

ಉಡುಪಿಯ ಹಳೆ ತಾಲೂಕು ಕಚೇರಿ ಕಟ್ಟಡವನ್ನು 12 ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಪ್ರಾರಂಭದಲ್ಲಿ ಜಿಲ್ಲಾ ಕಾರ್ಯಾಗಾರವಾಗಿದ್ದ ಸ್ಥಳ ಸದ್ಯ ಜನ ಸಂಚಾರವಿಲ್ಲದೆ ಹಾಳು ಬಿದ್ದಿದೆ. ಈ ಸ್ಥಳವನ್ನು ಕೆಡವಿ ನಗರ ಸಭೆಯ ಹೊಸ ಕಟ್ಟಡ ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ಉಡುಪಿಯ ಪಾರಂಪರಿಕ ಕಟ್ಟಡ ನೆಲಸಮವಾಗಲು ಕ್ಷಣಗಣನೆ, ಕಟ್ಟಡ ಉಳಿಸಲು ಸ್ಥಳೀಯರಿಂದ ಹರಸಾಹಸ, ಹೋರಾಟ
ಉಡುಪಿಯ ಪಾರಂಪರಿಕ ಕಟ್ಟಡ ನೆಲಸಮವಾಗಲು ಕ್ಷಣಗಣನೆ
Follow us
| Updated By: ಸಾಧು ಶ್ರೀನಾಥ್​

Updated on:Jul 05, 2023 | 1:35 PM

ಉಡುಪಿ ಜಿಲ್ಲೆಗೆ ಸ್ವಾತಂತ್ರ್ಯ ಹೋರಾಟದ ಕೊಂಡಿಯಾಗಿರುವ ಐತಿಹಾಸಿಕ ಕಟ್ಟಡವನ್ನು ನೆಲಸಮವಾಗಿಸಲು ಸಿದ್ಧತೆ ನಡೆಸಿದೆ. ಜಿಲ್ಲಾಡಳಿತ ನೂತನ ನಗರಸಭೆ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಸ್ಮಾರಕವಾಗಬೇಕಿದ್ದ ಕಟ್ಟಡವನ್ನ ನೆಲಸಮ ಮಾಡಲು ಹೊರಟಿದೆ (Demolition). ಸದ್ಯ ಜಿಲ್ಲಾಡಳಿತದ (Udupi district administration) ಈ ನಿರ್ಧಾರಕ್ಕೆ 12 ಜನ ಆರ್ಕಿಟೆಕ್ಟ್ ಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದು ಆದೇಶವನ್ನ ಪುನರ್ ಪರಿಶಿಲೀಸುವಂತೆ ಬೇಡಿಕೆ ಇಟ್ಟಿದ್ದಾರೆ. ಹೌದು, ಉಡುಪಿ ಜಿಲ್ಲೆಯಲ್ಲಿ ಐತಿಹಾಸಿಕ ವಿಚಾರಕ್ಕೆ ಸಂಬಂಧಪಟ್ಟ ಸಾಕಷ್ಟು ಸ್ಥಳಗಳಿವೆ. ಕುಂದಾಪುರ ತಾಲೂಕಿನ ಬಸ್ರೂರು, ಬ್ರಹ್ಮಾವರ ತಾಲೂಕಿನ ಬಾರ್ಕೂರು ಇಂದಿಗೂ ಸಾಕಷ್ಟು ಐತಿಹಾಸಿಕ ಪುರಾವೆಗಳನ್ನು ಮುಂದಿನ ಪೀಳಿಗೆಗೆ ತೋರಿಸುತ್ತಿರುವ ಸ್ಥಳಗಳಾಗಿವೆ. ಇನ್ನು ಸ್ವಾತಂತ್ರ್ಯ ಹೋರಾಟಕ್ಕೆ ಬಂದರೆ ಉಡುಪಿಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸ್ಮಾರಕಗಳು ಇಲ್ಲ. ಆದರೆ ಉಡುಪಿಯ ಹಳೆಯ ತಾಲೂಕು ಕಚೇರಿಯ ಹಿಂಭಾಗದಲ್ಲಿರುವ ಜಿಲ್ಲಾ ಸಬ್​ ಜೈಲ್​ (historical sub jail building) ಸುಮಾರು 117 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಸ್ವಾತಂತ್ರ ಪೂರ್ವದ ನೆನಪುಗಳನ್ನು ಹೊತ್ತಿದೆ.

ಪ್ರಾರಂಭದಲ್ಲಿ ಜಿಲ್ಲಾ ಕಾರ್ಯಾಗಾರವಾಗಿದ್ದ ಸ್ಥಳ ಸದ್ಯ ಜನ ಸಂಚಾರವಿಲ್ಲದೆ ಹಾಳು ಬಿದ್ದಿದೆ. ಈ ಸ್ಥಳವನ್ನು ಕೆಡವಿ ನಗರ ಸಭೆಯ ಹೊಸ ಕಟ್ಟಡ ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸಿರುವುದು ಸದ್ಯ ವಿರೋಧಕ್ಕೆ ಕಾರಣವಾಗಿದೆ. ಚಾರಿತ್ರಿಕ ಮಹತ್ವ ಹೊಂದಿರುವ ಉಡುಪಿಯ ಹಳೆ ತಾಲೂಕು ಕಚೇರಿ ಕಟ್ಟಡವನ್ನು ಸುಮಾರು 12 ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು.

ಅದಕ್ಕೂ ಮೊದಲು ಅಂದರೆ 1890 ರವರೆಗೆ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಕೋರ್ಟ್ ಕಲಾಪಗಳು ಮತ್ತು ಜೈಲು ಕಾರ್ಯಾಚರಿಸುತ್ತಿದ್ದರೆ, ಆನಂತರದಲ್ಲಿ ಇಲ್ಲಿಗೆ ಸ್ಥಳಾಂತರಗೊಂಡಿತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಮುಖ ಹೋರಾಟಗಾರರನ್ನು ಉಡುಪಿಯ ಹೊರಗಿನ ಜೈಲುಗಳಿಗೆ ಸ್ಥಳಾಂತರಿಸಿದರೆ, ಸಣ್ಣಪುಟ್ಟ ಕೈದಿಗಳನ್ನು ಇದೇ ಜೈಲಿನಲ್ಲಿ ಇರಿಸಲಾಗುತ್ತಿತ್ತು.

ಉಡುಪಿಯಲ್ಲಿ 10 ವರ್ಷಗಳ ಹಿಂದೆ ಹೊಸ ಜೈಲು ನಿರ್ಮಾಣವಾಗುವವರೆಗೂ ಈ ಸಬ್ ಜೈಲಿನಲ್ಲಿ ವಿಚಾರಣಾ ಕೈದಿಗಳನ್ನು ಇರಿಸಲಾಗುತ್ತಿತ್ತು. ಇಂತಹ ಅಪರೂಪದ ಕಟ್ಟಡವನ್ನು ನೂತನ ನಗರ ಸಭಾ ಕಚೇರಿ ನಿರ್ಮಾಣದ ನೆಪದಲ್ಲಿ ಕೆಡವಲು ಮುಂದಾಗಿದೆ. ಅಂದಾಜು 10,000 ಚದುರ ಅಡಿ ವಿಸ್ತೀರ್ಣ ಇರಬಹುದಾದ ಈ ಕಟ್ಟಡವನ್ನು ಕೆಡವಲು 12 ಲಕ್ಷ ರೂಪಾಯಿಗೆ ಟೆಂಡರ್ ಆಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಈ ಅಪರೂಪದ ಕಟ್ಟಡ ಮಣ್ಣು ಪಾಲಾಗಲಿದೆ.

ಇನ್ನು ಇದೊಂದು ಅಪರೂಪದ ರಚನೆ, ಕೊಲೋನಿಯಲ್ ಅಥವಾ ವಸಾಹತುಶಾಹಿ ವಾಸ್ತು ರಚನೆಯಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಮೇಲಂತಸ್ತಿನಲ್ಲಿ 12, ಕೆಳ ಅಂತಸ್ತಿನಲ್ಲಿ 12 ಜೈಲು ಸೆಲ್ ಗಳಿವೆ. ಸಣ್ಣ ಕೆಂಪು ಇಟ್ಟಿಗೆಗಳನ್ನು ಬಳಸಿ ಮದ್ರಾಸ್ ರೂಫಿಂಗ್ ಮಾದರಿಯಲ್ಲಿ ನಿರ್ಮಿಸಿರುವ ಸದ್ಯ ಉಡುಪಿಯಲ್ಲಿ ಕಾಣಸಿಗುವ ಏಕೈಕ ಕಟ್ಟಡ ಇದಾಗಿದೆ.

ಪಾಳು ಬಿದ್ದಂತೆ ಕಂಡರು ಈ ಕಟ್ಟಡದ ದುರಸ್ತಿ ಮಾಡುವ ಮೂಲಕ ಉಳಿಸಿಕೊಳ್ಳಬಹುದಾಗಿದೆ. ಇಲ್ಲಿ ಕಾರ್ಯಾಚರಿಸುತ್ತಿದ್ದ ತಾಲೂಕು ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಸದ್ಯ ಕಾರ್ಯಾಚರಿಸುತ್ತಿರುವ ನಗರಸಭಾ ಕಟ್ಟಡದಲ್ಲಿ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಅಂದಾಜು 45 ಕೋಟಿ ವೆಚ್ಚದಲ್ಲಿ ನೂತನ ನಗರಸಭಾ ಕಚೇರಿಯನ್ನು ಈ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಹಳೆಯ ಅತ್ಯಂತ ಸುಂದರವಾದ ಈ ಕಟ್ಟಡವನ್ನು ಉಳಿಸಿಕೊಳ್ಳಲು ಆರ್ಕಿಟೆಕ್ಟ್ ಗಳು ಹಾಗೂ ಕಲಾವಿದರು ಮುಂದಾಗಿದ್ದಾರೆ. ಅದಕ್ಕಾಗಿ ವಿಶೇಷ ಅಭಿಯಾನವನ್ನು ಆರಂಭಿಸಿದ್ದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಕಳೆದ ಒಂದು ವಾರದಿಂದ ಈ ಕಟ್ಟಡದ ರಚನೆಯ ಬಗ್ಗೆ ದಾಖಲೀಕರಣ ನಡೆಯುತ್ತಿದೆ.

ಜೊತೆಗೆ ಉಡುಪಿಯ 12 ಮಂದಿ ಕಲಾವಿದರು ಸೇರಿಕೊಂಡು ಈ ಕಟ್ಟಡದ ಕಲಾಕೃತಿಗಳನ್ನು ತಮ್ಮ ಕುಂಚದಲ್ಲಿ ರಚಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ನಗರಸಭೆ ನಿರ್ಮಿಸುವುದಕ್ಕೆ ಯಾರದೇ ವಿರೋಧವಿಲ್ಲ. ಆದರೆ ಈ ಪಾರಂಪರಿಕ ಕಟ್ಟಡದ ಒಂದು ಭಾಗವನ್ನಾದರೂ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಸ್ವಾತಂತ್ರ್ಯ ಪೂರ್ವ ಕಾಲದ ನೆನಪುಗಳನ್ನು ಪರಿಚಯಿಸಬೇಕು ಅನ್ನೋದು ಕಲಾವಿದರ ಬೇಡಿಕೆಯಾಗಿದೆ. ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಸ್ವಲ್ಪ ಮುಂದೂಡಿದರೆ ಮತ್ತಷ್ಟು ದಾಖಲೀಕರಣ ಮಾಡಿ ಈ ಕಟ್ಟಡವನ್ನು ಡಿಜಿಟಲಿಕರಣ ಮಾಡಬಹುದು ಅನ್ನೋದು ಯುವ ಕಲಾವಿದರ ಅಭಿಪ್ರಾಯ.

ಒಟ್ಟಾರೆಯಾಗಿ ಅಭಿವೃದ್ಧಿಗೆ ಬೇಕಾದಷ್ಟು ಜಾಗ ಉಡುಪಿಯಲ್ಲಿದೆ. ಆದರೆ 117 ವರ್ಷದ ಈ ಕಟ್ಟಡವನ್ನು ಮತ್ತೆ ಕಟ್ಟಲು ಸಾಧ್ಯವೇ ಇಲ್ಲ. ಹಾಗಾಗಿ ಮುಂದಿನ ಪೀಳಿಗೆಗಾಗಿ ಈ ಕಟ್ಟಡವನ್ನು ಹೀಗೆ ಉಳಿಸಿಕೊಂಡು ಇದನ್ನು ಮ್ಯೂಸಿಯಂ ಆಗಿಸಬೇಕು ಎನ್ನುವ ಹೋರಾಟವನ್ನು ಆರ್ಕಿಟೆಕ್ಟ್ ಗಳು ನಡೆಸುತ್ತಿದ್ದಾರೆ. ಇವರ ಹೋರಾಟಕ್ಕೆ ಜಿಲ್ಲಾಡಳಿತ ರಾಜ್ಯ ಸರ್ಕಾರ ಹೇಗೆ ಸ್ಪಂದಿಸಲಿರುತ್ತದೆಯೋ ಕಾದು ನೋಡಬೇಕಿದೆ.

ವರದಿ: ಪ್ರಜ್ವಲ್ ಅಮಿನ್, ಟಿವಿ9, ಉಡುಪಿ

Published On - 1:33 pm, Wed, 5 July 23

ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ