ಯುಗಾದಿಗೆ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗ್ತೀರಾ? ಈ ಸೂಚನೆ ಗಮನಿಸಿ

ಯುಗಾದಿ ಹಬ್ಬದ ಸಂದರ್ಭ ಮಲೆಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಯುಗಾದಿ ಸಂದರ್ಭದಲ್ಲಿ ಮೂರು ದಿನಗಳ ಕಾಲ ಜಾತ್ರೆ ಕೂಡ ಬೆಟ್ಟದಲ್ಲಿ ನಡೆಯುತ್ತಿದ್ದು, ಭಕ್ತರ ಪ್ರವಾಹವೇ ಹರಿದುಬರುವ ನಿರೀಕ್ಷೆ ಇದೆ. ಜಿಲ್ಲಾಧಿಕಾರಿ ಆದೇಶವೇನು ಎಂಬುದು ಇಲ್ಲಿದೆ.

ಯುಗಾದಿಗೆ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗ್ತೀರಾ? ಈ ಸೂಚನೆ ಗಮನಿಸಿ
ಮಲೆ ಮಹದೇಶ್ವರ ಬೆಟ್ಟ
Updated By: Ganapathi Sharma

Updated on: Mar 29, 2025 | 11:00 AM

ಚಾಮರಾಜನಗರ, ಮಾರ್ಚ್ 29: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ಯುಗಾದಿ ಜಾತ್ರೆ (Ugadi Festival)ನಡೆಯುತ್ತಿದ್ದು, ಈ ಹಿನ್ನೆಲೆ ದ್ವಿಚಕ್ರ ವಾಹನ, ಆಟೋ, ಗೂಡ್ಸ್​ ವಾಹನಗಳಿಗೆ ಪ್ರವೇಶ ನಿಷೇಧ ಹೇರಲಾಗಿದೆ. ವಾಹನದಟ್ಟಣೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಇಂದಿನಿಂದ (ಮಾರ್ಚ್ 29) ಮಾರ್ಚ್ 31ರವರೆಗೆ ಬೆಟ್ಟಕ್ಕೆ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಈ ಬಗ್ಗೆ ಚಾಮರಾಜನಗರ (Chamarajanagar) ಜಿಲ್ಲಾಧಿಕಾರಿ ಶಿಲ್ಪಾನಾಗ್​ರಿಂದ ಆದೇಶ ಹೊರಡಿಸಿದ್ದಾರೆ. ಬೆಟ್ಟಕ್ಕೆ ಜಾತ್ರೆಗೆ ಬರುವವರಿಗೆ ಹನೂರು ತಾಲೂಕಿನ ಕೌದಳ್ಳಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಇಂದು ಅಮಾವಾಸ್ಯೆ ಪೂಜೆ, ಯುಗಾದಿ ರಥೋತ್ಸವ ನಡೆಯಲಿದ್ದು ಸಾವಿರಾರು ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಸಾಮಾನ್ಯವಾಗಿ ಯುಗಾದಿ, ಶಿವರಾತ್ರಿ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವಾಹನ ದಟ್ಟಣೆಯನ್ನು ತಡೆಯುವುದು, ನಿಯಂತ್ರಿಸುವುದು ಕೂಡ ಪೊಲೀಸರಿಗೆ ಹರಸಾಹಸ ಪಡುವಂತಹ ಕೆಲಸವಾಗುತ್ತದೆ. ಹೀಗಾಗಿ ವಿಶೇಷ ಸಂದರ್ಭಗಳಲ್ಲಿ ಪ್ರತಿಬಾರಿಯೂ ಬೆಟ್ಟಕ್ಕೆ ಖಾಸಗಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗುತ್ತದೆ. ಬೆಟ್ಟದ ಕೆಳಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಅಲ್ಲಿಂದ ಬೆಟ್ಟಕ್ಕೆ ಜನರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗುತ್ತದೆ.

ಇದನ್ನೂ ಓದಿ
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ದೇವಸ್ಥಾನಗಳ ಪ್ರಸಾದ!
ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಶಾಕ್: ಸಿಬ್ಬಂದಿಗೆ ಕೊಕ್
ಬೆಂಗಳೂರು: ಫ್ಲೈಓವರ್​ಗಳಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ
ಆಲೂಗಡ್ಡೆ ದರ ತೀವ್ರ ಕುಸಿತ: ಕೋಲ್ಡ್ ಸ್ಟೋರೇಜ್​ಗೆ ಭಾರಿ ಡಿಮ್ಯಾಂಡ್

ಇತ್ತೀಚಿನ ದಿನಗಳಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆಯುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ಇದನ್ನೂ ಓದಿ: ಮತ್ತೊಮ್ಮೆ ಕೋಟ್ಯಧಿಪತಿಯಾದ ಮಲೆ ಮಹದೇಶ್ವರ: ಮಾದಪ್ಪನ ಹುಂಡಿಯಲ್ಲಿ ಸಿಕ್ತು 1.94 ಕೋಟಿ ರೂ.

ಇತ್ತೀಚೆಗಷ್ಟೇ ದೇಗುಲದಲ್ಲಿ ಹುಂಡಿಯ ಏಣಿಕೆ ಕಾರ್ಯ ನಡೆದಿತ್ತು. ಕೇವಲ 28 ದಿನಗಳಲ್ಲಿ ಮಾದಪ್ಪ ಕೋಟ್ಯಾಧಿಪತಿ ಆಗಿರೋದು ಹುಂಡಿ ಎಣಿಕೆಯಿಂದ ತಿಳಿದು ಬಂದಿತ್ತು. ದುಡ್ಡು ಮಾತ್ರವಲ್ಲದೆ 63 ಗ್ರಾಂ ಚಿನ್ನ ಹಾಗೂ ಅರ್ಧ ಕೆಜಿ ಬೆಳ್ಳಿ ಕೂಡ ಮಾದಪ್ಪನ ಹುಂಡಿಯಲ್ಲಿ ಪತ್ತೆಯಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ