ಆಲೂಗಡ್ಡೆ ದರ ತೀವ್ರ ಕುಸಿತ: ಚಿಕ್ಕಬಳ್ಳಾಪುರದಲ್ಲಿ ಕೋಲ್ಡ್ ಸ್ಟೋರೇಜ್ಗೆ ಭಾರಿ ಡಿಮ್ಯಾಂಡ್
ಚಿಕ್ಕಬಳ್ಳಾಪುರದ ರೈತರು ಈ ಬಾರಿ ಭರ್ಜರಿ ಆಲೂಗಡ್ಡೆ ಬೆಳೆದಿದ್ದಾರೆ. ಆದರೆ ಬೆಲೆ ಕುಸಿತದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಆಲೂಗಡ್ಡೆ ಶೇಖರಿಸಿಡಲು ರೈತರು ಮುಂದಾಗಿದ್ದಾರೆ. ಕಡಿಮೆ ಬೆಲೆ ಮತ್ತು ಶೇಖರಣಾ ಸಮಸ್ಯೆಯಿಂದ ರೈತರನ್ನು ತತ್ತರಿಸಿದೆ. ಟೊಮೆಟೋ ಬೆಲೆ ಕೂಡ ಕುಸಿದಿದೆ.

ಚಿಕ್ಕಬಳ್ಳಾಪುರ, ಮಾರ್ಚ್ 27: ಒಂದು ಕಾಲದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್ಡಿ ದೇವೇಗೌಡರು ಚಿಕ್ಕಬಳ್ಳಾಪುರದಿಂದ ಬಿತ್ತನೆ ಆಲೂಗಡ್ಡೆ (potato) ಖರೀದಿ ಮಾಡಿ ಹಾಸನದಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದರು. ಅಂತಹ ಐತಿಹ್ಯವಿರುವ ಜಿಲ್ಲೆಯಲ್ಲಿ ಈ ಬಾರಿಯೂ ರೈತರು ಭರ್ಜರಿ ಆಲೂಗಡ್ಡೆ ಬೆಳೆದಿದ್ದಾರೆ. ಆದರೆ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ. ಇದರಿಂದ ಒಂದೆರೆಡು ತಿಂಗಳು ದರ ಬರುವವರೆಗೂ ಕೋಲ್ಡ್ ಸ್ಟೋರೇಜ್ನಲ್ಲಿ (cold storage) ಆಲೂಗಡ್ಡೆ ದಾಸ್ತಾನು ಮಾಡಲು ರೈತರು ಮುಗಿಬಿದ್ದಿದ್ದು, ವಾರಗಟ್ಟಲೇ ಬಿರು ಬಿಸಲಿನಲ್ಲೇ ಕಾಯುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಚಿಕ್ಕಬಳ್ಳಾಪುರ ನಗರ ಹೊರವಲಯದ ಖಾಸಗಿ ನಂದಿ ಕೋಲ್ಡ್ ಸ್ಟೋರೇಜ್ ಕೇಂದ್ರದ ಬಳಿ ಟ್ರ್ಯಾಕ್ಟರ್, ಲಾರಿ ಸೇರಿದಂತೆ ಟೆಂಪೋಗಳಲ್ಲಿ ಮೂಟೆಗಟ್ಟಲೇ ಆಲೂಗಡ್ಡೆಗಳನ್ನ ಹೊತ್ತು ರೈತರು ಬಂದಿರುತ್ತಾರೆ. ಚಿಕ್ಕಬಳ್ಳಾಪುರದ ರೈತರು ನವೆಂಬರ್ನಿಂದ ಫೆಬ್ರವರಿ ಚಳಿಗಾಲದಲ್ಲಿ ವಾಡಿಕೆಯಂತೆ ಯಥೇಚ್ಛವಾಗಿ ಆಲೂಗಡ್ಡ ಬೆಳೆಯುತ್ತಾರೆ. ಈ ಬಾರಿಯೂ ನೀರಿಕ್ಷೆಗೂ ಮೀರಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಇಳುವರಿಯೂ ಬಂದಿದೆ. ಆದರೆ ಮಾರುಕಟ್ಟೆಯಲ್ಲೇ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 500 ಕ್ಷಿಂಟಾಲ್ ಅನ್ನಭಾಗ್ಯ ಅಕ್ಕಿ ಜಪ್ತಿ, ಇಬ್ಬರ ಕಾರ್ಡ್ ರದ್ದು
50 ಕೆಜಿಯ ಒಂದು ಮೂಟೆ ಆಲೂಗಡ್ಡೆ 600 ರೂ. ಬಿಕಾರಿಯಾಗ್ತಿದೆ. ನಷ್ಟದಿಂದ ಪಾರಾಗಲು ಕೆಲವು ರೈತರು ಬೆಳೆದಿರುವ ಆಲುಗಡ್ಡೆಯನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇಟ್ಟು ಉತ್ತಮ ಬೆಲೆ ಬಂದ ಮೇಲೆ ಮಾರಾಟ ಮಾಡೋಣ ಅಂತ ಕೋಲ್ಡ್ ಸ್ಟೋರೇಜ್ ಬಳಿ ಬಂದರೆ ಆಲೂಗಡ್ಡೆ ದಾಸ್ತಾನು ಮಾಡಲು ನೂರಾರು ರೈತರು ಸಾವಿರಾರು ಟನ್ ಆಲೂಗಡ್ಡೆ ತಂದು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಇದ್ರಿಂದ ಕೋಲ್ಡ್ ಸ್ಟೋರೇಜ್ಗೆ ಭಾರೀ ಡಿಮ್ಯಾಂಡ್ ಬಂದಿದೆ.
ಇತ್ತ ಬೆಳೆದ ಆಲೂಗಡ್ಡೆ ಬಿಸಿಲಿನ ತಾಪಕ್ಕೆ ವಾಹನಗಳಲ್ಲೇ ಕೊಳೆಯಲು ಆರಂಭಿಸುತ್ತಿವೆ. ಮತ್ತೊಂದೆಡೆ ಆಲೂಗಡ್ಡೆ ಹೊತ್ತು ವಾರಗಟ್ಟಲೇ ಬಿಸಿಲಲ್ಲಿ ನಿಂತಲ್ಲೇ ನಿಂತು ವಾಹನಗಳು ಹಾಳಾಗುವಂತಾಗಿದೆ. ಸರ್ಕಾರವಾದರೂ ಕೋಲ್ಡ್ ಸ್ಟೋರೇಜ್ ಆರಂಭಿಸುತ್ತಾ ಕಾದು ನೋಡಬೇಕಿದೆ.
ಕುಸಿದ ದರ: ಹೊಲದಲ್ಲೇ ಒಣಗಿದ ಟೊಮೆಟೋ
ದರ ಕುಸಿತದಿಂದಾಗಿ ಹೊಲದಲ್ಲಿಯೇ ಟೊಮೆಟೋ ಒಣಗಿ ಹೋಗುತ್ತಿದೆ. 25ಕೆಜಿ ತೂಕದ ಒಂದು ಕ್ರೇಟ್ಗೆ 250 ರಿಂದ 300 ಇದ್ದ ದರ ಇದೀಗ 50 ರೂಪಾಯಿಗೆ ಕುಸಿದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿ ಬಹುತೇಕ ಕಡೆ ರೈತರು ಟೊಮೆಟೋ ಜಮೀನಿನಲ್ಲಿಯೇ ಬಿಟ್ಟಿದ್ದಾರೆ.
ಇದನ್ನೂ ಓದಿ: ಪನ್ನೀರ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ
ಪ್ರತಿ ಎಕರೆ ಟೊಮೆಟೋ ಬೆಳೆಯಲು ಸಸಿ ಗೊಬ್ಬರ ಸೇರಿದಂತೆ ಕನಿಷ್ಟ ಐವತ್ತು ಸಾವಿರ ರೂ ಖರ್ಚು ಬರುತ್ತದೆ. ಮಾರುಕಟ್ಟೆಯಲ್ಲಿ ಸೂಕ್ತ ದರವಿಲ್ಲ. ಜಮೀನಿನಿಂದ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದೇ ಕಷ್ಟ ಎನ್ನುತ್ತಿದ್ದಾರೆ ರೈತರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:52 am, Thu, 27 March 25