ರೈಲು
ಬೆಂಗಳೂರು/ಮೈಸೂರು, ಮಾರ್ಚ್ 26: ಯುಗಾದಿ (Ugadi) ಮತ್ತು ರಂಜಾನ್ (Ramzan) ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ನೈಋತ್ಯ ರೈಲ್ವೆಯು (South Western Railway) ಬೆಂಗಳೂರು ಮತ್ತು ಮೈಸೂರಿನಿಂದ ರಾಜ್ಯ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು ಬಿಟ್ಟಿದೆ. ಬೆಳಗಾವಿ, ಕಾರವಾರ ಮತ್ತು ಕಲಬುರಗಿ ನಿಲ್ದಾಣಗಳಿಗೆ ವಿಶೇಷ ರೈಲುಗಳನ್ನು ಬಿಡಲಾಗಿದೆ. ಈ ವಿಶೇಷ ರೈಲು ವಿವರಗಳು ಈ ಕೆಳಗಿನಂತಿದೆ.
ಬೆಂಗಳೂರು-ಬೆಳಗಾವಿ ವಿಶೇಷ ರೈಲು
- ರೈಲು ಸಂಖ್ಯೆ 06511: ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 28ರಂದು ಸಂಜೆ 7:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 07:30ಕ್ಕೆ ಬೆಳಗಾವಿಯನ್ನು ತಲುಪಲಿದೆ.
- ರೈಲು ಸಂಖ್ಯೆ 06512: ಬೆಳಗಾವಿ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 29 ರಂದು ಸಂಜೆ 5.00 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗಿನ ಜಾವ 04:30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
- ರೈಲು ಸಂಖ್ಯೆ 06513: ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 30 ರಂದು ಸಂಜೆ 7:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 07:30ಕ್ಕೆ ಬೆಳಗಾವಿಯನ್ನು ತಲುವಲಿದೆ.
- ರೈಲು ಸಂಖ್ಯೆ 06514: ಬೆಳಗಾವಿ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 31 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗಿನ ಜಾವ 04:30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ನಿಲುಗಡೆ: ಈ ವಿಶೇಷ ರೈಲುಗಳು (06511/12 ಮತ್ತು 06513/14) ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ಳಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.
ಇದನ್ನೂ ಓದಿ: ಯುಗಾದಿ,ರಂಜಾನ್ ಹಬ್ಬಕ್ಕೆ ಬೆಂಗಳೂರಿನಿಂದ ವಿಶೇಷ ಬಸ್ : ಮುಂಗಡ ಬುಕ್ಕಿಂಗ್‌ಗೆ ಡಿಸ್ಕೌಂಟ್
ಬೆಂಗಳೂರು-ಕಲಬುರಗಿ ವಿಶೇಷ ರೈಲು
- ರೈಲು ಸಂಖ್ಯೆ 06519: ಎಸ್ಎಮ್ವಿಟಿ ಬೆಂಗಳೂರು-ಕಲಬುರಗಿ ಎಕ್ಸ್ಪ್ರೆಸ್ ರೈಲು ಮಾರ್ಚ್ 28 ರಂದು ರಾತ್ರಿ 9:15ಕ್ಕೆ ಎಸ್ಎಮ್ವಿಟಿ ಬೆಂಗಳೂರಿನಿಂದ ಹೊರಟು ಮರುದಿವಸ ಮಾರ್ಚ್ 29 ರಂದು ಬೆಳಗ್ಗೆ 7:40ಕ್ಕೆ ಕಲಬುರಗಿ ತಲುಪಲಿದೆ.
- ರೈಲು ಸಂಖ್ಯೆ 06520: ಕಲಬುರಗಿ-ಎಸ್ಎಮ್ವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು ಮಾರ್ಚ್ 29 ರಂದು ಬೆಳಗ್ಗೆ 9:35ಕ್ಕೆ ಕಲಬುರಗಿ ನಿಲ್ದಾಣದಿಂದ ಹೊರಟು ಅದೇ ದಿನ ರಾತ್ರಿ 8 ಗಂಟೆಗೆ ಬೆಂಗಳೂರು ತಲುಪಲಿದೆ.
ಮೈಸೂರು-ಕಾರವಾರ ವಿಶೇಷ ರೈಲು
- ರೈಲು ಸಂಖ್ಯೆ 06203: ಮೈಸೂರು-ಕಾರವಾರ ವಿಶೇಷ ರೈಲು ಮಾರ್ಚ್ 28 ರಂದು ರಾತ್ರಿ 9:35ಕ್ಕೆ ಮೈಸೂರು ರೈಲು ನಿಲ್ದಾಣದಿಂದ ಹೊರಟು, ಮರುದಿನ ಮಾರ್ಚ್ 29 ರಂದು ಸಂಜೆ 4 ಗಂಟೆಗೆ ಕಾರವಾರ ತಲುಪಲಿದೆ.
- ರೈಲು ಸಂಖ್ಯೆ 06204: ಕಾರವಾರ-ಮೈಸೂರು ವಿಶೇಷ ರೈಲು ಮಾರ್ಚ್ 29 ರಂದು ರಾತ್ರಿ 11:30 ಕ್ಕೆ ಕಾರವಾರ ರೈಲು ನಿಲ್ದಾಣದಿಂದ ಹೊರಟು, ಮರುದಿನ ಮಾರ್ಚ್ 30 ರಂದು ಸಂಜೆ 4:40ಕ್ಕೆ ಮೈಸೂರು ತಲುಪಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ