ದಾಂಡೇಲಿ: ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ

ಮೀನು ಹಿಡಿಯುತ್ತಿದ್ದ ಮೋಹಿನ್ (15) ಎಂಬಾತನನ್ನು ಮೊಸಳೆ ಎಳೆದೊಯ್ದಿದೆ. ನದಿಯಲ್ಲಿ ಬಾಲಕನಿಗಾಗಿ ಅರಣ್ಯಾಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ.

ದಾಂಡೇಲಿ: ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ
ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ

ಕಾರವಾರ: ಮೀನು ಹಿಡಿಯುತ್ತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವಿನಾಯಕನಗರ ಬಳಿ ನಡೆದಿದೆ. ಇಲ್ಲಿನ ಕಾಳಿ ನದಿಯಲ್ಲಿ ದುರ್ಘಟನೆ ಸಂಭವಿಸಿದೆ. ಮೀನು ಹಿಡಿಯುತ್ತಿದ್ದ ಮೋಹಿನ್ (15) ಎಂಬಾತನನ್ನು ಮೊಸಳೆ ಎಳೆದೊಯ್ದಿದೆ. ನದಿಯಲ್ಲಿ ಬಾಲಕನಿಗಾಗಿ ಅರಣ್ಯಾಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ.

ವಿಜಯನಗರ: ಸಿಡಿಲು ಬಡಿದು ಮೂವರು ಸಾವು
ವರಲಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ ದುರ್ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಕುರಿಗಾಹಿಗಳಾದ ಉಪ್ಪಾರ ಹನುಮಂತಪ್ಪ (35), ಮೈಲಾರಿ (11), ಮಲ್ಲಿಕಾರ್ಜುನ (34) ಸಾವನ್ನಪ್ಪಿದ್ದಾರೆ. 2 ಮೇಕೆ ಮರಿ ಕೂಡ ಸಾವನ್ನಪ್ಪಿದೆ. ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್‌ ಶರಣಮ್ಮ ಭೇಟಿ ನೀಡಿದ್ದಾರೆ.

ಕಲಬುರಗಿ: ಮಗುವಿನ ಜೊತೆ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ
ಮಗುವಿನ ಜೊತೆ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಲಬುರಗಿ ಜಿಲ್ಲೆ ಶಹಾಬಾದ್ ತಾಲೂಕಿನ ಶಂಕರವಾಡಿಯಲ್ಲಿ ನಡೆದಿದೆ. ಶಂಕರವಾಡಿ ಬಳಿ ಕಾಗಿನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗು ಜತೆ ಭಂಕೂರು ನಿವಾಸಿ ಶಾಂತಾ (24) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀನು ನನಗೆ ಚೀಟ್ ಮಾಡಿದ್ದೀಯಾ. ನನ್ನ ಹಾಗೂ ಮಗನ ಲೈಫ್ ಹಾಳು ಮಾಡಿದ್ದೀಯಾ ಎಂದು ಸಾಯುವ ಮುನ್ನ ಪತಿ ಹೆಸರಿನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಶಾಂತಾ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದು ತಿಳಿದುಬಂದಿದೆ. ಸ್ಥಳಕ್ಕೆ ಶಹಾಬಾದ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕೊಪ್ಪಳ: ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ
ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರದಲ್ಲಿ ರೈತ ಬುಡ್ನೇಸಾಬ (65) ಶವ ಪತ್ತೆಯಾಗಿದೆ. ನಿನ್ನೆ ರಾತ್ರಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ರೈತ, ಇಂದು ಮೃತನಾಗಿ ಪತ್ತೆಯಾಗಿದ್ದಾರೆ. ಹೊಲದಿಂದ ಎತ್ತಿನ ಬಂಡಿಯಲ್ಲಿ ವಾಪಸಾಗುತ್ತಿದ್ದಾಗ ಘಟನೆ ಸಂಭವಿಸಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಂಗಳೂರು: ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ
ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ ಆಗಿದ್ದಾಳೆ. ನದಿಯಲ್ಲಿ 11 ವರ್ಷದ ಮುಫೀದಾ ಮೃತದೇಹ ಪತ್ತೆಯಾಗಿದೆ. ಮಂಗಳೂರಿನ ಕುದ್ರೋಳಿ ಹೈದರಾಲಿ ರಸ್ತೆಯ ನಿವಾಸಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ನದಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಬೆಳಗ್ಗೆ 8 ಗಂಟೆಯಿಂದ ನಾಪತ್ತೆಯಾಗಿದ್ದ ಮುಫೀದಾ ಮೃತಪಟ್ಟಿದ್ದಾಳೆ. ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ವಿಜಯಪುರ: ಕಲುಷಿತ ನಲ್ಲಿ ನೀರು ಸೇವಿಸಿ ಇಬ್ಬರ ಸಾವು

ಇದನ್ನೂ ಓದಿ: ಮದುವೆ ದಿಬ್ಬಣದ ಬಸ್ ಅಪಘಾತ; ಓರ್ವ ಸಾವು, 20 ಜನರಿಗೆ ಗಾಯ

Click on your DTH Provider to Add TV9 Kannada