ಬಿಜೆಪಿ, ಜೆಡಿಎಸ್​ಗೆ ನಾನೇ ಟಾರ್ಗೆಟ್; ಇಬ್ಬರಿಗೂ ನನ್ನನ್ನು ಕಂಡರೆ ಭಯ: ಸಿದ್ದರಾಮಯ್ಯ ಹೇಳಿಕೆ

ಬಿಜೆಪಿ, ಜೆಡಿಎಸ್​ಗೆ ನಾನೇ ಟಾರ್ಗೆಟ್; ಇಬ್ಬರಿಗೂ ನನ್ನನ್ನು ಕಂಡರೆ ಭಯ: ಸಿದ್ದರಾಮಯ್ಯ ಹೇಳಿಕೆ
ಸಿದ್ದರಾಮಯ್ಯ

Siddaramaiah: ಸಿಂದಗಿಯಲ್ಲಿ ಜೆಡಿಎಸ್ ಗೆಲ್ಲಲ್ಲ. ಆದ್ರೂ ಕುಟುಂಬ ಇಲ್ಲೇ ಇದೆ. ದೇವೇಗೌಡರ ಪೂರ್ತಿ ಫ್ಯಾಮಿಲಿ ಇಲ್ಲೇ ಇದೆ. ನಾನು ಅವತ್ತೇ ಹೇಳಿದ್ದೆ ಇದು ಜೆಡಿಎಸ್‌ ಅಲ್ಲ ಜೆಡಿಎಫ್. ಜೆಡಿ ಫ್ಯಾಮಿಲಿ. ಜೆಡಿಎಸ್ ಕುಟುಂಬದ ಪಕ್ಷ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

TV9kannada Web Team

| Edited By: ganapathi bhat

Oct 24, 2021 | 5:19 PM

ವಿಜಯಪುರ: ಬೈಎಲೆಕ್ಷನ್‌ನಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ನೇರ ಸ್ಪರ್ಧೆ ಇದೆ. ಜೆಡಿಎಸ್‌ ಕಣದಲ್ಲಿದ್ರೂ ಸಹ ಸ್ಪರ್ಧೆಯಲ್ಲಿ ಇಲ್ಲ. ಜೆಡಿಎಸ್​ಗೂ ನಾನೇ ಟಾರ್ಗೆಟ್, ಬಿಜೆಪಿಗೂ ನಾನೇ ಟಾರ್ಗೆಟ್. ಏಕೆಂದರೆ ಇಬ್ಬರಿಗೂ ನನ್ನನ್ನು ಕಂಡರೆ ಭಯವಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸಿಂದಗಿಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಹೆಚ್‌.ಡಿ. ಕುಮಾರಸ್ವಾಮಿ, ಹೆಚ್.ಡಿ. ದೇವೇಗೌಡರು ನನ್ನ ವಿರುದ್ಧ ಬಾಣ ಬಿಡ್ತಿದ್ದಾರೆ. ಸಿಂದಗಿಯಲ್ಲಿ ಜೆಡಿಎಸ್ ಗೆಲ್ಲಲ್ಲ. ಆದ್ರೂ ಕುಟುಂಬ ಇಲ್ಲೇ ಇದೆ. ದೇವೇಗೌಡರ ಪೂರ್ತಿ ಫ್ಯಾಮಿಲಿ ಇಲ್ಲೇ ಇದೆ. ನಾನು ಅವತ್ತೇ ಹೇಳಿದ್ದೆ ಇದು ಜೆಡಿಎಸ್‌ ಅಲ್ಲ ಜೆಡಿಎಫ್. ಜೆಡಿ ಫ್ಯಾಮಿಲಿ. ಜೆಡಿಎಸ್ ಕುಟುಂಬದ ಪಕ್ಷ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಮುಗಿಸಿಬಿಟ್ರೆ ಕಾಂಗ್ರೆಸ್ ಮುಗಿಸಬಹುದು ಎಂದು ಎರಡು ಪಕ್ಷಗಳು ಲೆಕ್ಕಾಚಾರ ಹಾಕಿಕೊಂಡಿವೆ. ಆದ್ರೆ ಸಿದ್ದರಾಮಯ್ಯರನ್ನು ಮುಗಿಸಲು ಜನ ಬಿಡಲ್ಲ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಜೆಡಿಎಸ್ ಬಿಜೆಪಿಯ ಬಿ ಟೀಂ. ಬಿಜೆಪಿಯವರು ಹಿಂದುಳಿದ ಜಾತಿಗಳ‌ ವಿರೋಧಿಗಳು. ಬಿಜೆಪಿಯವರು ಶ್ರೀಮಂತರ ಪರವಾಗಿ ಇದ್ದಾರೆ. ಹಿಂದುಳಿದ ವರ್ಗಗಳ ಜಾತಿಗೆ ಅನ್ಯಾಯ ಮಾಡಿದ್ರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂದುಳಿದವರ ಪರ ಸಿದ್ದರಾಮಯ್ಯ ಮಾತು ಬಿಜೆಪಿ ಹಿಂದುಳಿದವರ ಪರ ಒಂದೂ ಕಾರ್ಯಕ್ರಮ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಕಂಬಳಿ ಹಾಕಲು ಯೋಗ್ಯತೆ ಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬೊಮ್ಮಾಯಿ ನೀನು ಯಾವತ್ತಾದರೂ ಕುರಿ ಕಾದಿದ್ದೀಯಾ? ನಾನು ಕುರಿ ಕಾದಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ. ಕನಕಗುರು ಪೀಠ ಮಾಡಿದ್ದು ನಾನು. ಸಂಗೊಳ್ಳಿ ಬ್ರಿಗೇಡ್ ಮಾಡಿದ ಈಶ್ವರಪ್ಪ. ಇದೀಗ ಬ್ರಿಗೇಡ್ ಎಲ್ಲಿದೆ. ಸ್ವಾರ್ಥಕ್ಕಾಗಿ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದ್ದ. ಇದೀಗ ಬ್ರಿಗೇಡ್ ಎಲ್ಲಿದೆ ಎಂದು ಕೇಳಿದ್ದಾರೆ.

ಕೆಂಪೇಗೌಡ ಜಯಂತಿ ಮಾಡಿದ್ದು ಸಿದ್ದರಾಮಯ್ಯ. ದೇವೇಗೌಡ, ಕುಮಾರಸ್ವಾಮಿ ಅಲ್ಲ. ಈಶ್ವರಪ್ಪ ಒಂದು ಸಲ ಹೇಳಿದ್ರು ನಾನು ಕುರುಬ ಅಲ್ಲಾ ಅಂತ. ಆದ್ರೆ ನಾನು ಕುರುಬ ಕುರುಬ. ಜಾತಿಯಲ್ಲಿ ಹುಟ್ಟಿರೋದನ್ನು ಸುಳ್ಳು ಹೇಳಲು ಆಗುತ್ತಾ? ಆದ್ರೆ ಯಾವ ಜಾತಿಯಲ್ಲಿ ಹುಟ್ಟಿದ್ದೇವೆ ಅನ್ನೋದು ಮುಖ್ಯವಲ್ಲ. ಮಾವವೀಯತೆ ಮುಖ್ಯ ಎಂದು ತಿಳಿಸಿದ್ದಾರೆ.

ಹಿಂದುಳಿದವರು ಸ್ವಾಭಿಮಾನಿಗಳಾಗಬೇಕು. ಶತಮಾನಗಳ ಕಾಲ ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದರು ಎಂದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ನಡೆದ ತಳವಾರ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಎಸ್​ಟಿಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಉಡುಪಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ನೀಡದಿರುವ ಕಾರಣ ಅವರನ್ನು ಮಠದ ವಿರೋಧಿ ಅನ್ನಲಾಗದು: ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

ಇದನ್ನೂ ಓದಿ: ಮಾಧ್ಯಮ ಪ್ರಕಟಣೆ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ!

Follow us on

Related Stories

Most Read Stories

Click on your DTH Provider to Add TV9 Kannada