AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ನವರು ಮತ ಹಾಕಿಸಿಕೊಂಡು ಐದು ವರ್ಷ ನಿಮ್ಮನ್ನು ಅಂಧಕಾರದಲ್ಲಿ ಇಡುತ್ತಾರೆ -ಸಿಎಂ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ನವರು ಮತ ಹಾಕಿಸಿಕೊಂಡು ಅಂಧಕಾರದಲ್ಲಿಡ್ತಾರೆ. ಐದು ವರ್ಷ ನಿಮ್ಮನ್ನು ಅಂಧಕಾರದಲ್ಲಿ ಇಡುತ್ತಾರೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್​ನವರು ಮತ ಹಾಕಿಸಿಕೊಂಡು ಐದು ವರ್ಷ ನಿಮ್ಮನ್ನು ಅಂಧಕಾರದಲ್ಲಿ ಇಡುತ್ತಾರೆ -ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Updated By: ಆಯೇಷಾ ಬಾನು|

Updated on:Oct 24, 2021 | 1:19 PM

Share

ವಿಜಯಪುರ: ಅ.30ರಂದು ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗ್ತಿದ್ದಂತೆ ಪ್ರಚಾರದ ಅಬ್ಬರ ಜೋರಾಗಿದೆ. ಸದ್ಯ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ನವರು ಮತ ಹಾಕಿಸಿಕೊಂಡು ಅಂಧಕಾರದಲ್ಲಿಡ್ತಾರೆ. ಐದು ವರ್ಷ ನಿಮ್ಮನ್ನು ಅಂಧಕಾರದಲ್ಲಿ ಇಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ನಾನು 15 ಲಕ್ಷ ಮನೆ ಕೊಟ್ಟೆ ಅಂತಾರೆ ಸಿದ್ದರಾಮಯ್ಯ. ಬರಿ ಘೋಷಿಸಿ ಹೋದ್ರೆ ಮನೆ ಹೇಗೆ ಕೊಟ್ಟಂತಾಗುತ್ತದೆ. ಅವರು ಘೋಷಣೆ ಮಾಡಿದ ಕೆಲಸ ನಾವು ಮಾಡ್ತಿದ್ದೇವೆ. ಕಾಂಗ್ರೆಸ್ ಆ ಭಾಗ್ಯ ಕೊಟ್ವಿ ಈ ಭಾಗ್ಯ ಕೊಟ್ವಿ ಎನ್ನುತ್ತಾರೆ ಆದ್ರೆ ಕಾಂಗ್ರೆಸ್ನವರ ಯಾವ ಭಾಗ್ಯ ಜನರ ಮನೆಗೆ ತಲುಪಲಿಲ್ಲ. ಮೋದಿ ಕೊಟ್ಟ ಯೋಜನೆ ಜನರ ಅಕೌಂಟ್ಗೆ ತಲುಪಿದೆ ಎಂದು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಏನಾದ್ರೂ ಅಭಿವೃದ್ಧಿ ಆಗಿದ್ರೆ ಅದು ನಮ್ಮ ಅವಧಿಯಲ್ಲಿ ಮಾತ್ರ. ನಾನು ಬಂದ ಕೂಡಲೇ 5 ಸಾವಿರ ಮನೆಗಳನ್ನ ಕೊಡುವ ಕೆಲಸ ಮಾಡಿದ್ದೇವೆ. ಹಣ ಹಂಚುವ ಸಂಸ್ಕೃತಿ ಆರಂಭಿಸಿದ್ದೇ ಕಾಂಗ್ರೆಸ್​ ಪಕ್ಷದವರು. ಗೋಣಿ ಚೀಲದಲ್ಲಿ ಹಣ ತರುವವರು ಕಾಂಗ್ರೆಸ್​ ಪಕ್ಷದವರು. ನಾವು ಚುನಾವಣೆಯಲ್ಲಿ ಗೆದ್ರೆ ಹಣ ಬಲದಿಂದ ಗೆದ್ರು ಅಂತಾರೆ. ನೀವು ಮಸ್ಕಿ ಉಪಚುನಾವಣೆಯಲ್ಲಿ ಹೇಗೆ ಗೆಲುವು ಸಾಧಿಸಿದ್ರಿ? ಎಂದು ಕಾಂಗ್ರೆಸ್​ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಸಿಎಂ ವಾಹನ ಸಹಿತ ಇತರೆ ವಾಹನಗಳ ತಪಾಸಣೆ ಮಾಡಿದ್ದಾರೆ. ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಇದ್ದ ಕಾರು ತಪಾಸಣೆ ನಡೆಸಿದ್ದಾರೆ.

basavraj bommai

ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಇದ್ದ ಕಾರು ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ: ಮುಂದಿನ ವರ್ಷದಿಂದ ರಾಜ್ಯ ಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಣೆ: ಬಸವರಾಜ ಬೊಮ್ಮಾಯಿ ಘೋಷಣೆ

Published On - 1:09 pm, Sun, 24 October 21