ಉತ್ತರ ಕನ್ನಡ: 75 ವರ್ಷಗಳ ಶಾಲೆಗೆ ಹಳೆ ವಿದ್ಯಾರ್ಥಿಗಳೆ ಆಸರೆ; ತಮ್ಮ ಸ್ವಂತ ಹಣದಲ್ಲೆ ಕಟ್ಟಡಕ್ಕೆ ಕಾಯಕಲ್ಪ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 16, 2023 | 3:07 PM

ರಾಜ್ಯದಲ್ಲಿ ಅನೇಕ ಶಾಲಾ ಕಟ್ಟಡ ಶಿಥಿಲಾವಸ್ಥೆ ಇರುವ ಬಗ್ಗೆ ಟಿವಿ9 ಸಾಕಷ್ಟು ವರದಿಗಳನ್ನು ಪ್ರಸಾರ ಮಾಡುತ್ತಿದೆ. ಆದ್ರೆ, ಸರ್ಕಾರದಿಂದ ಮಾತ್ರ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂಬುವುದನ್ನ ಅರಿತ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು, ತಾವೇ ಹಣ ಹಾಕಿ ಕಟ್ಟಡಕ್ಕೆ ಕಾಯಕಲ್ಪ ನೀಡುವ ಕೆಲಸ ಮಾಡುತ್ತಿದ್ದಾರೆ. ಹಾಗಾದ್ರೆ, ಆ ಶಾಲೆ ಯಾವುದು ಅಂತೀರಾ? ಇಲ್ಲಿದೆ.

ಉತ್ತರ ಕನ್ನಡ: 75 ವರ್ಷಗಳ ಶಾಲೆಗೆ ಹಳೆ ವಿದ್ಯಾರ್ಥಿಗಳೆ ಆಸರೆ; ತಮ್ಮ ಸ್ವಂತ ಹಣದಲ್ಲೆ ಕಟ್ಟಡಕ್ಕೆ ಕಾಯಕಲ್ಪ
ಹಳೆಯ ವಿದ್ಯಾರ್ಥಿಗಳಿಂದ 75 ವರ್ಷ ಹಳೆಯ ಶಾಲೆಯ ಕಾಯಕಲ್ಪ
Follow us on

ಉತ್ತರ ಕನ್ನಡ, ಡಿ.16: ಟಿವಿ9 ಕನ್ನಡ ರಾಜ್ಯದ ಜನರ ನಂಬಿಕೆಯ ಪ್ರತಿರೂಪ. ಇಲ್ಲಿ ಪ್ರಸಾರ ಆಗುವ ಸುದ್ದಿಗಳು ನಂಬಿಕಾರ್ಹ ಇರುತ್ತೆ ಎಂಬುವುದು ಮತ್ತೆ ಮತ್ತೆ ಸಾಭೀತು ಮಾಡಿದೆ. ಟಿವಿ9 ನಲ್ಲಿ ಪ್ರಸಾರ ಆಗುವ ಬಹಳಷ್ಟು ಸುದ್ದಿಗಳು ಸರ್ಕಾರದ ಮಟ್ಟದಲ್ಲಿ ಇಂಪ್ಯಾಕ್ಟ್ ಆಗಿ ಸಮಸ್ಯೆಗೆ ಪರಿಹಾರ ಸಿಗುವುದನ್ನ ನಾವು ಕಂಡಿದ್ದೆವೆ. ಹಾಗೆಯೇ ಕೆಲವು ಸಮಸ್ಯೆಗಳಿಗೆ ಸರ್ಕಾರ (Government) ಸ್ಪಂದಿಸುವುದಕ್ಕೆ ಆಗದೆ ಇದ್ದಾಗ ಸಾರ್ವಜನಿಕರೆ ಸ್ವಯಂ ಪ್ರೇರಣೇಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವ ಅನೇಕ ನಿದರ್ಶನಗಳಿವೆ. ಅದಕ್ಕೆ ಪುಷ್ಠಿ ಎಂಬಂತೆ ಉತ್ತರ ಕನ್ನಡ(Uttara Kannada)ಜಿಲ್ಲೆಯ ಚಾಂಡಿಯಾ ಗ್ರಾಮದ ಅನುದಾನಿತ ದಿ ಪಾಪ್ಯೂಲರ್ ನ್ಯೂ ಇಂಗ್ಲೀಷ್ ಶಾಲೆಯ ಕಟ್ಟಡವನ್ನ ಹಳೆಯ ವಿದ್ಯಾರ್ಥಿಗಳೇ ಕಾಯಕಲ್ಪ ಮಾಡಿದ್ದಾರೆ.

ಒಂದೇ ತಿಂಗಳಲ್ಲಿ 20 ಲಕ್ಷ ರೂಪಾಯಿ ಹಣ ಸಂಗ್ರಹ

ರಾಜ್ಯದಲ್ಲಿ ಅನೇಕ ಕಡೆ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡದಲ್ಲಿಯೆ ಮಕ್ಕಳು ಓದುತ್ತಿರುವ ಬಗ್ಗೆ ಟಿವಿ9 ಕಳೆದ ಐದು ತಿಂಗಳಿನಿಂದ ನೂರಾರು ಸುದ್ದಿಗಳನ್ನು ಪ್ರಸಾರ ಮಾಡಿದೆ. ಆದ್ರೆ, ಹಣಕಾಸಿನ ಕೊರತೆಯಿಂದ ಎಲ್ಲ ಕೊಠಡಿಗಳನ್ನು ಒಮ್ಮೆಲೆ ಮರು ನಿರ್ಮಾಣ ಮಾಡುವುದು ಕಷ್ಟ ಸಾಧ್ಯ ಎಂಬುವುದನ್ನ ಪರೋಕ್ಷವಾಗಿ ತಿಳಿಸಿದೆ. ಅದನ್ನು ಅರಿತಿರುವ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಾಲೆಯ ದುರಸ್ತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸದ್ಯ ಪರಿಹಾರ ಸಿಗುವುದು ಕಷ್ಟವೆಂದು, ತಮ್ಮ ಸ್ವಂತ ಹಣದಲ್ಲೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಮರುನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೇವಲ ಒಂದೆ ತಿಂಗಳಲ್ಲಿ 20 ಲಕ್ಷ ರೂಪಾಯಿ ಹಣ ಸಂಗ್ರವಾಗಿದ್ದೂ, ಒಟ್ಟು ಮೂರು ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಬಡವರ ಮಕ್ಕಳ ಸರ್ಕಾರಿ ಶಾಲೆ ಅಧೋಗತಿ, ಕುಸಿಯುವ ಹಂತದಲ್ಲಿ ಕಟ್ಟಡ

ಈ ಶಾಲೆ ಪ್ರಾರಂಭವಾಗಿ ಸುಮಾರು 75 ವರ್ಷ ಕಳೆದಿದೆ. ಶಾಲೆಯಿಂದ ಸಾವಿರಾರು ವಿದ್ಯಾರ್ಥಿಗಳು ಕಲಿತು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ಧಾರೆ. ಸದ್ಯ ನೂರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶಾಲಾ ಕಟ್ಟಡಗಳು ಮಾತ್ರ ಶಿಥಿಲಾವಸ್ಥೆಯಲ್ಲಿದ್ದೂ, ಭಯದಲ್ಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೊಠಡಿಯಲ್ಲಿರಬೇಕಿತ್ತು. ಹಾಗಾಗಿ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಏನು ಪ್ರಯೋಜನ ಆಗಿಲ್ಲ ಎಂಬುದನ್ನ ಅರಿತ, ಈ ಶಾಲೆಯ ಹಳೆಯ ವಿದ್ಯಾರ್ಥಿಗಳು, ತಾವು ಕಲಿತ ಶಾಲೆಗೆ ತಮ್ಮಿಂದಲೆ ಅಳಿಲು ಸೇವೆ ಮಾಡೋಣ ಎಂಬ ಸದುದ್ದೇಶದಿಂದ ಲಕ್ಷಾಂತರ ರೂಪಾಯಿ ಕ್ರೋಢಿಕರಣ ಮಾಡಿ ಶಾಲಾ ಕೊಠಡಿ ಮರು ನಿರ್ಮಾಣ ಹಾಗೂ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಟಿವಿ9 ವರದಿಯಿಂದ ಇಂಪ್ಯಾಕ್ಟ್ ಅಷ್ಟೆ ಅಲ್ಲದೆ ಅನೇಕರಿಗೆ ಪ್ರೇರಣೆ ಕೂಡ ಎಂಬುವುದು ಮತ್ತೊಮ್ಮೆ ಸಾಭೀತಾಗಿದೆ. ಇದೆ ರೀತಿ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ರಾಜ್ಯದಲ್ಲಿ ಇರುವ ಅನೇಕ ಶಿಥಿಲಾವಸ್ಥೆಯ ಕೊಠಡಿಗಳಿಗೆ ಕಾಯಕಲ್ಪ ಸಿಕ್ಕರೆ ಅದೆಷ್ಟೋ ವಿದ್ಯಾರ್ಥಿಗಳು ಪ್ರಾಣ ಭಯ ಇಲ್ಲದೆ ಶಾಲೆಗೆ ಬರುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ