ಲಿಂಗಸೂರು ಸರ್ಕಾರಿ ಶಾಲೆ ಅತ್ಯುತ್ತಮ ಶಾಲೆಯಾಗಿ ಆಯ್ಕೆ; ಮಧು ಬಂಗಾರಪ್ಪ
ವಿದ್ಯಾರ್ಥಿಗಳ ಬ್ಯಾಗ್ ಹೊರೆ ಶೇ.50ರಷ್ಟು ಕಡಿಮೆ ಮಾಡುತ್ತೇವೆ. 600 ಸರ್ಕಾರಿ ಶಾಲೆ ಆರಂಭಿಸುವ ಗುರಿ ಹೊಂದಿದ್ದೇವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಸಮಾನತೆ ಮತ್ತು ರಾಷ್ಟ್ರೀಯ ಮೌಲ್ಯ ರೂಪಿಸಿ ಉತ್ತಮ ಪ್ರಜೆಯಾಗಿಸುವ ಗುರಿ ನಮ್ಮದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರು ನ.1: ಎಲ್ಲ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ. ಕರ್ನಾಟಕ (Karnataka) ರಾಜ್ಯ ಎಂದು ನಾಮಕರಣ ಮಾಡಿ 50 ವರ್ಷ ಪೂರೈಸಿದೆ. ಖಾಲಿ ಇರುವ 13 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಚಾಲನೆಯಲ್ಲಿದೆ. ಎಸ್ಎಸ್ಎಲ್ಸಿ (SSLC) ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆ ನಡೆಸುತ್ತೇವೆ. 600 ಸರ್ಕಾರಿ ಶಾಲೆ ಆರಂಭಿಸುವ ಗುರಿ ಹೊಂದಿದ್ದೇವೆ. ಅತ್ಯತ್ತಮ ಶಾಲೆಯಾಗಿ ಲಿಂಗಸೂರು (Lingasuru) ಸರ್ಕಾರಿ ಶಾಲೆಯನ್ನು ಅತ್ಯುತ್ತಮ ಶಾಲೆಯಾಗಿ ಆಯ್ಕೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಲಾ ವಿದ್ಯಾರ್ಥಿಗಳ ಬ್ಯಾಗ್ ಹೊರೆ ಶೇ.50ರಷ್ಟು ಕಡಿಮೆ ಮಾಡುತ್ತೇವೆ. 600 ಸರ್ಕಾರಿ ಶಾಲೆ ಆರಂಭಿಸುವ ಗುರಿ ಹೊಂದಿದ್ದೇವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಸಮಾನತೆ ಮತ್ತು ರಾಷ್ಟ್ರೀಯ ಮೌಲ್ಯ ರೂಪಿಸಿ ಉತ್ತಮ ಪ್ರಜೆಯಾಗಿಸುವ ಗುರಿ ನಮ್ಮದು. ಸ್ವಯಂಸೇವ ಸಂಘಗೊಳೊಂದಿಗೆ ಹಾಲು ನೀಡುವ ಯೋಜನೆಗೆ ಶೀಘ್ರವಾಗಿ ಜಾರಿ ಮಾಡಲಾಗುತ್ತೆ. ಸಸ್ಯಶಾಮಲ ಯೋಜನೆ ಜಾರಿ ಮಾಡುತ್ತೇವೆ ಎಂದರು.
ಕನ್ನಡದ ಧ್ವಜದ ಮಾನ್ಯತೆಯನ್ನ ಕೇಂದ್ರ ಕಡೆಗಣಿಸಿದೆ: ಶಾಸಕ ರಿಜ್ವಾನ್
ಕನ್ನಡದ ಧ್ವಜದ ಮಾನ್ಯತೆಯನ್ನ ಕೇಂದ್ರ ಕಡೆಗಣಿಸಿದೆ. ಪ್ರತಿ ವರ್ಷ ಮಾನ್ಯತೆ ನೀಡುತ್ತಿಲ್ಲ. ಕನ್ನಡವನ್ನು ಕಡೆಗೆಣಿಸುವ ಕೆಲಸ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಕೇಂದ್ರ ಸರ್ಕಾರ ಹಿಂದು ಹಾಗೂ ಇಂಗ್ಲಿಷ್ ಕಡ್ಡಾಯ ಮಾಡುತ್ತಿದೆ. ಕೇಂದ್ರ ಸರ್ಕಾರದಿಂದ ಕನ್ನಡ ಕಡೆಗೆಣಿಸುವ ಕೆಲಸ ನಡೆಯುತ್ತಲೆ ಇದೆ. ಕೇಂದ್ರದಿಂದ ಉದ್ಯೋಗ ಕಸೆದುಕೋಳ್ಳುವ ಕೆಲಸ ನಡೆಯುತ್ತಿದೆ ಶಾಸಕ ರಿಜ್ವಾನ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ದಿನದಂದು ಸಿದ್ದರಾಮಯ್ಯ ಬಂಪರ್ ಗಿಫ್ಟ್, ಸರ್ಕಾರಿ ಶಾಲೆಗಳಿಗೂ ಉಚಿತ ವಿದ್ಯುತ್ ಭಾಗ್ಯ
ಬಸ್ಗೆ ಬೆಂಕಿ ಹಚ್ಚುವುದರಲ್ಲಿ ಕನ್ನಡ ಅಭಿಮಾನ ಇರುವುದಿಲ್ಲ: ಡಿಕೆ ಶಿವಕುಮಾರ್
ಕನ್ನಡ ಅಭಿಯಾನ ನವೆಂಬರ್ಗೆ ಮಾತ್ರ ಸೀಮಿತ ಆಗಬಾರದು. ಎರಡೂವರೆ ಸಾವಿರದ ಇತಿಹಾಸ ನಮ್ಮ ಕನ್ನಡ ನಾಡಿಗೆ ಇದೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಬಸ್ಗೆ ಬೆಂಕಿ ಹಚ್ಚುವುದರಲ್ಲಿ ಕನ್ನಡ ಅಭಿಮಾನ ಇರುವುದಿಲ್ಲ. ಅಕುಂಶದಿಂದ ಚುಚ್ಚಿದರೂ ಕನ್ನಡ ಮರೆಯಬಾರದು ಅಂತ ಹಿರಿಯರು ಹೇಳಿದ್ದಾರೆ. ತುಂಗಾಭದ್ರಾ ಕಾವೇರಿ ಹರಿಯುವ ನಾಡು ಸ್ವರ್ಗ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 am, Wed, 1 November 23