ಯಲ್ಲಾಪುರ: ಬೈಕ್ ಓವರ್ ಟೇಕ್ ವಿಷಯಕ್ಕೆ ಜಗಳ: ಆರು ಮಂದಿಯಿಂದ ಹಲ್ಲೆ, ಯುವಕ ಸಾವು

ಬೈಕ್ ಓವರ್ ಟೇಕ್ ವಿಷಯದಲ್ಲಿ ಆರು ಮಂದಿ ಇದ್ದ ತಂಡವೊಂದು ಯುವಕನೊಬ್ಬನ್ನನ್ನು ಕೊಲೆ ಮಾಡಿದ ಆರೋಪ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಕೇಳಿಬಂದಿದೆ. ಪ್ರಜ್ವಲ್​​ ಮೇಲೆ ಹಲ್ಲೆಗೈದು ಸಾಯಿಸಿದ್ದಾರೆಂದು ಮೃತನ ಪೋಷಕರು ಆರೋಪಿಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ: ಬೈಕ್ ಓವರ್ ಟೇಕ್ ವಿಷಯಕ್ಕೆ ಜಗಳ: ಆರು ಮಂದಿಯಿಂದ ಹಲ್ಲೆ, ಯುವಕ ಸಾವು
ಯಲ್ಲಾಪುರದಲ್ಲಿ ಬೈಕ್ ಓವರ್ ಟೇಕ್ ವಿಷಯಕ್ಕೆ ಜಗಳ: ಆರು ಮಂದಿಯಿಂದ ಹಲ್ಲೆ, ಯುವಕ ಸಾವು (ಸಾಂದರ್ಭಿಕ ಚಿತ್ರ)
Edited By: Rakesh Nayak Manchi

Updated on: Feb 25, 2024 | 2:15 PM

ಕಾರವಾರ, ಫೆ.25: ಬೈಕ್ ಓವರ್​ಟೇಕ್ ವಿಚಾರವಾಗಿ ಆರು ಮಂದಿ ಇದ್ದ ತಂಡವೊಂದು ಯುವಕನೊಬ್ಬನ್ನು ಕೊಲೆ (Murder) ಮಾಡಿದ ಆರೋಪ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ (Yellapur) ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಕೇಳಿಬಂದಿದೆ. ಹಳಿಯಾಳ ಮೂಲದ ಪ್ರಜ್ವಲ್ ಕಕ್ಕೇರಿಕರ (24) ಕೊಲೆಯಾದ ಯುವಕನಾಗಿದ್ದಾನೆ.

ಕುಟುಂಬಸ್ಥರ ಕೊಲೆ ಆರೋಪ ಮಾಡಿದ್ದು, ಪ್ರಜ್ವಲ್​​​ ಮೇಲೆ ಹಲ್ಲೆಗೈದು ಸಾಯಿಸಿದ್ದಾರೆಂದು ಆರೋಪಿಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಣಾ ಮರಾಠಿ, ಅನಿಕೆತ್ ಮಿರಾಶಿ, ರಿತೇಶ್ ಪಾಟೀಲ್, ಪಾಂಡುರಂಗ ಕಳಸುರಕರ್, ಪ್ರಶಾಂತ್ ಕಲಸುರಕರ್ ಹಾಗೂ ರೂಪೇಶ್ ಆರೋಪಿಗಳೆಂದು ಪೊಲೀಸರ ಗುರುತಿಸಿದ್ದಾರೆ. ಬೈಕ್ ಒವರಟೆಕ್ ಮಾಡುವ ವಿಷಯದಲ್ಲಿ ನಡೆದ ಜಗಳದಲ್ಲಿ ಯುವಕ ಪ್ರಜ್ವಲ್​ನನ್ನು ಥಳಿಸಿದ್ದಾರೆ. ಈ ವೇಳೆ ಬಲವಾದ ಹೊಡೆತಕ್ಕೆ ಪ್ರಜ್ವಲ್ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಬಸ್​ಗೆ ಕಲ್ಲೆಸೆದ ಕುಡುಕ ಮಗ; ತಂದೆ ಪೊಲೀಸರ ವಶಕ್ಕೆ

ಗದಗ: ಸೈಡ್​ ಬಿಡು ಅಂತ ಹೇಳಿದ್ದಕ್ಕೆ ಕುಡುಕನೊಬ್ಬ ಬಸ್​ಗೆ ಕಲ್ಲೆಸೆದು ಕಿರಿಕ್ ಮಾಡಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಪುಟ್ಟಪ್ಪ ಸರ್ಕಾರಿ ಬಸ್​ಗೆ ಕಲ್ಲೆಸೆದು ಗಾಜು ಪುಡಿ ಮಾಡಿದ ವ್ಯಕ್ತಿ. ಗುತ್ತಲ ಪಟ್ಟಣದದಿಂದ ಸೂರಣಗಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ಬಸ್​ಗೆ ಮದ್ಯ ವ್ಯಸನಿ ಅಡ್ಡನಿಂತಿದ್ದಾನೆ.

ಇದನ್ನೂ ಓದಿ: ಆನೇಕಲ್​: ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಎಷ್ಟೇ ಹಾರ್ನ್​ ಮಾಡಿದರೂ ದಾರಿ ಬಿಡದೇ ಬಸ್ ಚಾಲಕ ಹಾಗೂ ಕಂಡಕ್ಟರ್​​ ಜೊತೆಗೆ ಕಿರಿಕ್ ಮಾಡಿದ್ದಲ್ಲದೆ, ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಸ್ಥಳಿಯರು ಅದೆಷ್ಟೇ ಬುದ್ದಿ ಹೇಳಿ ಬಿಡಿಸಲು ಹೋದರೂ ಮಾತು ಕೇಳದೆ ಮೊಂಡುತನ ತೋರಿದ ಆತ ಬಸ್​ ಗಾಜಿಗೆ ಕಲ್ಲು ಎಸೆದಿದ್ದಾನೆ. ಇದರಿಂದಾಗಿ ಗಾಜು ಪುಡಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಕಲ್ಲು ಚಾಲಕ ಬಳಿಯಿಂದ ಪಾಸ್ ಆಗಿದೆ. ಘಟನೆ ನಂತರ ಯುವಕ ಪರಾರಿಯಾಗಿದ್ದು, ಮಗ ಮಾಡಿದ ತಪ್ಪಿಗೆ ತಂದೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us