AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಸಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಮೇಲೆ ಜೇನು ದಾಳಿ; ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ

ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್(Bhimanna Naik) ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಜೇನು ದಾಳಿ ಮಾಡಿದ ಘಟನೆ ಶಿರಸಿ(Sirsi) ತಾಲೂಕಿನ ಕೆಂಗ್ರೆ ಹೊಳೆ ಬಳಿ ನಡೆದಿದೆ. ಬರ ಪರಿಸ್ಥಿತಿ ಸಂಬಂಧ ಶಿರಸಿಯ ಕೆಂಗ್ರೆ ಹೊಳೆಯ ನೀರಿನ ಮಟ್ಟ ವೀಕ್ಷಣೆಗೆ ಹೋದ ವೇಳೆ ಈ ದುರ್ಘಟನೆ ನಡೆದಿದೆ.

ಶಿರಸಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಮೇಲೆ ಜೇನು ದಾಳಿ; ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ
ಶಿರಸಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಮೇಲೆ ಜೇನು ದಾಳಿ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:May 08, 2024 | 3:21 PM

Share

ಉತ್ತರ ಕನ್ನಡ, ಮೇ.08: ಶಿರಸಿ(Sirsi) ತಾಲೂಕಿನ ಕೆಂಗ್ರೆ ಹೊಳೆ ಬಳಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್(Bhimanna Naik) ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಜೇನು ದಾಳಿ ಮಾಡಿದೆ. ಶಿರಸಿ TSS ಆಸ್ಪತ್ರೆಗೆ ದಾಖಲಿಸಿ ಶಾಸಕ ಭೀಮಣ್ಣ ಹಾಗೂ ಶಿರಸಿ ನಗರಸಭಾ ಪೌರಾಯುಕ್ತ ಕಾಂತರಾಜ್​​ಗೆ ಚಿಕಿತ್ಸೆ ನೀಡಲಾಗುತ್ತಿದೆ. ಬರ ಪರಿಸ್ಥಿತಿ ಸಂಬಂಧ ಶಿರಸಿಯ ಕೆಂಗ್ರೆ ಹೊಳೆಯ ನೀರಿನ ಮಟ್ಟ ವೀಕ್ಷಣೆಗೆ ಹೋದ ವೇಳೆ ಈ ದುರ್ಘಟನೆ ನಡೆದಿದೆ.

ಜಮೀನುಗಳಿಗೆ ನುಗ್ಗಿ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

ಚಾಮರಾಜನಗರ: ಜಮೀನುಗಳಿಗೆ ನುಗ್ಗಿ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಸಾಕಾನೆಗಳ ಸಹಾಯದಿಂದ ಇಂದು(ಮೇ.08) ಸೆರೆ ಹಿಡಿಯಲಾಗಿದೆ. ಬಂಡೀಪುರದ ಗೋಪಾಲಸ್ವಾಮಿಬೆಟ್ಟ ಸುತ್ತಮುತ್ತ ಜಮೀನುಗಳಲ್ಲಿ ಈ ಕಾಡಾನೆ ಅಡ್ಡಾಡುತ್ತಿದ್ದು, ಫಸಲು ಹಾಳು ಮಾಡುತ್ತಿತ್ತು. ಈ ಹಿನ್ನಲೆ ಇತ್ತೀಚೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಬಂಡೀಪುರಕ್ಕೆ ಭೇಟಿ ನೀಡಿದ್ದಾಗ ಕಾಡಾನೆ ಸೆರೆಗೆ ರೈತರು ಮನವಿ ಸಲ್ಲಿಸಿದ್ದರು. ಅದರಂತೆ ಇಂದು ಪುಂಡಾನೆಯನ್ನು ಹಿಡಿದಿದ್ದು, ಕಬಿನಿ ಹಿನ್ನೀರು ಪ್ರದೇಶಕ್ಕೆ ಬಿಡಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ:ಚಾಮರಾಜನಗರ: ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ: ಓರ್ವ ವ್ಯಕ್ತಿ ಸಾವು, 10 ಜನರಿಗೆ ಗಾಯ

ರೈಲ್ವೆ ನಿಲ್ದಾಣದ ಹೊರಗಡೆ ಪಾರ್ಕಿಂಗ್ ವಿಚಾರಕ್ಕೆ ಹೊಡೆದಾಟ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿ ಪಾರ್ಕಿಂಗ್ ವಿಚಾರಕ್ಕೆ ಇಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದೆ. ಚೆನ್ನೈನಿಂದ ಆಗಮಿಸಿರುವ ದಂಪತಿಯನ್ನು ಕರೆದೊಯ್ಯಲು ರೈಲ್ವೆ ನಿಲ್ದಾಣಕ್ಕೆ ಬೈಕ್​ನಲ್ಲಿ ಇಬ್ಬರು ಬಂದಿದ್ದರು. ಜೊತೆಗೆ ರೈಲ್ವೆ ನಿಲ್ದಾಣದ ಮುಂಭಾಗ ಪಾರ್ಕ್ ಮಾಡಿದ್ದರು. ಇದೇ ವೇಳೆ ಚಂದನ್ ಎಂಬಾತ ಇಲ್ಲಿ ಪಾರ್ಕ್ ಮಾಡಬೇಡಿ ಎಂದು ಗಲಾಟೆ ತೆಗೆದಿದ್ದಾನೆ. ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಿ, ಇಲ್ಲಿ ಪಿಕಪ್ ಮತ್ತು ಡ್ರಾಪ್‌ಗೆ ಮಾತ್ರ ಅವಕಾಶ ಎಂದು ಧಮಕಿ ಹಾಕಿದ್ದಾನೆ. ಈ ವೇಳೆ ಬೈಕ್ ಸವಾರರು ಹಾಗೂ ಚಂದನ್ ನಡುವೆ ವಾಗ್ವಾದ ನಡೆದಿದ್ದು, ಚಂದನ್ ಬೆಂಬಲಕ್ಕೆ ಬಂದ ಆಟೋರಿಕ್ಷಾ ಚಾಲಕರು ಸೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಲಾಟೆ ವಿಡಿಯೋ ವೈರಲ್ ಆಗಿದ್ದು, ಆಟೋ ಚಾಲಕರ ಗುರುತು ಪತ್ತೆ ಹಚ್ಚಿ, ಶೀಘ್ರ ಕ್ರಮ ಕೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Wed, 8 May 24