ನೆರೆ ಪ್ರದೇಶಗಳಿಗೆ ಕಾಟಾಚಾರದ ಪ್ರವಾಸ ಕೈಗೊಂಡ್ರಾ ನೂತನ ಸಿಎಂ ಬೊಮ್ಮಾಯಿ? ಕಾಳಜಿ ಕೇಂದ್ರಗಳಲ್ಲಿ ನೆರೆ ಸಂತ್ರಸ್ತರ ಕಣ್ಣೀರು
ನಿಜವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹಕ್ಕೆ ಹೆಚ್ಚು ಪರಿಣಾಮ ಬೀರಿರುವ ಪ್ರವಾಹ ಪೀಡಿತ ಪ್ರದೇಶ ಯಾವುದೆಂದರೆ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕದ್ರಾ. ಇಲ್ಲಿ ಒಂದೇ ಗ್ರಾಮದಲ್ಲಿ ಏಳೆಂಟು ಮನೆಗಳು ಕೊಲಾಪ್ಸ್ ಆಗಿವೆ.
ಕಾರವಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮರು ದಿನವೇ ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆ ಪ್ರವಾಸಕ್ಕೆ ಹೋಗಿ ಬಂದರು. ಬೆಂಗಳೂರಿನಿಂದ ನೇರವಾಗಿ ಉತ್ತರ ಕನ್ನಡಕ್ಕೆ ಹೋಗ್ತೀನಿ ಅಂತ ಹೊರಟಿದ್ದ ಸಿಎಂ ಉತ್ತರ ಕನ್ನಡ ಜಿಲ್ಲೆಗೆ ತಲುಪಿದ್ದು ಎರಡು ಗಂಟೆ ತಡವಾಗಿ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ, ಅರಬೈಲ್ ಘಾಟ್ ಮೊದಲಾದ ಕಡೆಗಳಲ್ಲಿ ಸಿಎಂ ಬರುತ್ತಾರೆ, ನಮ್ಮ ಮಾತು ಕೇಳ್ತಾರೆ ಅಂತ ಸಂತ್ರಸ್ತರು ಕಾದು ಕುಳಿತಿದ್ದರು. ಯಲ್ಲಾಪುರಕ್ಕೆ ಬರುತ್ತಿದ್ದಂತೆ ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಚಾರದಲ್ಲಿ ಸರ್ಕಾರ ಹೇಗೆ ಪರಿಹಾರ ಕೊಟ್ಟಿದೆ. ಮುಂದೆ ಯಾವ ರೀತಿಯಲ್ಲಿ ಪ್ರವಾಹ ವೀಕ್ಷಣೆ ಮಾಡ್ತೀನಿ ಅನ್ನೋದನ್ನು ವಿವರಿಸುವ ಕೆಲಸ ಸಿಎಂ ಮಾಡಿದ್ರು. ಆದ್ರೆ ಬೇಸರದ ಸಂಗತಿಯೆಂದರೆ ಕಳಚೆ ಅನ್ನೋ ಗ್ರಾಮಕ್ಕೆ ಭೇಟಿ ಕೊಟ್ಟಾಗ ಅಲ್ಲಿ ವಿದ್ಯಾರ್ಥಿನಿಯರು ಆನ್‌ಲೈನ್ ಕ್ಲಾಸ್ ತೊಂದ್ರೆ ಆಗ್ತಿದೆ ಅಂತಾ ಕಣ್ಣೀರಹಾಕಿದ್ರು. ಆದ್ರೆ, ಅವರ ಕಣ್ಣೀರಿಗೆ ಬೆಲೆನೇ ಸಿಗಲಿಲ್ಲ.
ಸಿಎಂ ಬಸವರಾಜ್ ಬೊಮ್ಮಾಯಿ ಮಹಾ ನಿರ್ಲಕ್ಷ್ಯ ನಿಜವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹಕ್ಕೆ ಹೆಚ್ಚು ಪರಿಣಾಮ ಬೀರಿರುವ ಪ್ರವಾಹ ಪೀಡಿತ ಪ್ರದೇಶ ಯಾವುದೆಂದರೆ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕದ್ರಾ. ಇಲ್ಲಿ ಒಂದೇ ಗ್ರಾಮದಲ್ಲಿ ಏಳೆಂಟು ಮನೆಗಳು ಕೊಲಾಪ್ಸ್ ಆಗಿವೆ. ಕಾಳಿ ನದಿ ಪಾತ್ರದಲ್ಲಿ ಮಹಾ ಪ್ರವಾಹವಾಗಿದ್ದು ಮಲ್ಲಾಪುರಾ, ಗಾಂಧಿನಗರ, ಕೈಗಾ ಟೌನ್ ಶಿಪ್, ಗೋಟೆಗಾಳಿ, ಕೆರೆವಾಡಿ, ಬೈರೇ ಗ್ರಾಮದಲ್ಲಿ ಭಾರೀ ಅನಾಹುತವಾಗಿದೆ. ಆದ್ರೆ ಕದ್ರಾ ರಸ್ತೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಾಲಿಟ್ಟಿಲ್ಲ. ಕೇವಲ ನಾಲ್ಕು ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾತ್ರ ಭೇಟಿ ನೀಡಿದ್ದಾರೆ. ಯಲ್ಲಾಪುರ:- ಡಬ್ಗುಳಿ, ಅಂಕೋಲಾ:- ಹಳವಳ್ಳಿ, ಹೊನ್ನಳ್ಳಿ, ಮಂಜಗುಣಿ, ಬೆಳಸೆ, ಕೋಡಸಣಿ, ಜೋಯ್ಡಾ:- ಅಣಸಿ ಘಾಟ್, ಕಾರವಾರ:- ಕದ್ರ, ಮಲ್ಲಾಪುರ, ಹಣಕೋಣ್ ಜೂಗ್, ಹಳಗಾ, ಸಿದ್ದರ್, ಖಾರ್ಗೆ, ಕುನ್ನಿಪೇಟ್ ಈ ಪ್ರದೇಶಗಳಲ್ಲಿ ಪ್ರವಾಹವಾಗಿದ್ರೂ ಸಿಎಂ ಭೇಟಿ ನೀಡಿಲ್ಲ.
ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರ ಕಣ್ಣೀರು 2019ರಲ್ಲಿ ಪ್ರವಾಹ ಬಂದಾಗಲೂ ಪರಿಹಾರ ನೀಡಲಿಲ್ಲ. ಈಗ ಮತ್ತೆ ಪ್ರವಾಹ ಬಂದು ನಮ್ಮ ಮನೆಗಳು ಮುಳುಗಿವೆ ಎಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಿರಡಿ ಗ್ರಾಮದ ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರು ಕಣ್ಣೀರು ಹಾಕಿದ್ದಾರೆ. ಕಾಳಜಿ ಕೇಂದ್ರದಲ್ಲಿ ಊಟಕ್ಕಾಗಿ ನಾಚಿಕೆ ಬಿಟ್ಟು ಕಾಯ್ತಿದ್ದೇವೆ. ಸರ್ಕಾರ ನಮಗೆ ಊಟ ಕೊಡದಿದ್ದರೂ ಪರವಾಗಿಲ್ಲ. ಈ ಬಾರಿಯಾದ್ರೂ ನಮಗೆ ಪ್ರವಾಹ ಪರಿಹಾರ ನೀಡಲಿ. ಇಲ್ಲವೇ ಬೇರೆ ಎಲ್ಲಾದರೂ ನಮಗೆ ಮನೆ ನಿರ್ಮಿಸಿಕೊಡಲಿ. ಮಕ್ಕಳನ್ನ ಕಟ್ಟಿಕೊಂಡು ಪದೇಪದೆ ಮನೆ ಬಿಡುವುದು ಕಷ್ಟ. ನಮ್ಮ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ಒಂದು ದಿನದ ಮಳೆ ಪೀಡಿತ ಪ್ರದೇಶಗಳ ಪ್ರವಾಸದ ವೇಳೆ ಸಂತ್ರಸ್ತರ ದುಃಖ ದುಮ್ಮಾನಗಳಿಗೆ ಅಷ್ಟಾಗಿ ಸ್ಪಂದನೆಯಂತೂ ಸಿಕ್ಕಿಲ್ಲ. ಸಿಎಂ ಜತೆಯಲ್ಲಿದ್ದ ಮಾಜಿ ಸಚಿವ ಶಿವರಾಂ ಹೆಬ್ಬಾರ್ ಮತ್ತೆ ತಮಗೆ ಮಂತ್ರಿಗಿರಿ ಸಿಗಬೇಕು ಅನ್ನೋ ಕಾರಣಕ್ಕೆ ಹೋದಲ್ಲೆಲ್ಲಾ ಬೊಮ್ಮಾಯಿಯವರನ್ನು ಹಿಂಬಾಲಿಸಿದ್ದರು. ಅದು ಬಿಟ್ರೆ ಸಿಂಗಲ್ ಸಿಎಂ ಸರ್ಕಾರದಿಂದ ಸಂತ್ರಸ್ತರಿಗೆ ಸರಿಯಾದ ನೆರವು ಯಾವಾಗ ಸಿಗುತ್ತೆ ಎನ್ನುವ ಪ್ರಶ್ನೆ ಪ್ರವಾಹದಿಂದ ಹೊಡೆತ ತಿಂದವರನ್ನು ಕಾಡುತ್ತಿದೆ.
ಇದನ್ನೂ ಓದಿ: ಬಿ.ಎಸ್. ಯಡಿಯೂರಪ್ಪ ನನಗೆ ಸಿಎಂ ಸ್ಥಾನವನ್ನು ತಪ್ಪಿಸಿದರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್!