ಕೈಗಾ ಅಣು ಘಟಕದ ನಿರ್ದೇಶಕಗೆ 3 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ ಸೈಬರ್ ಕಳ್ಳರು!

ರಾಜೇಂದ್ರ ಕುಮಾರ ಗುಪ್ತಾ ಅವರು ಗೂಗಲ್ ಸರ್ಚ್​ ಮೂಲಕ ಇಂಡಿಗೋ ಏಕ್ಸಿಕ್ಯೂಟಿವ್ ಅಧಿಕಾರಿ ಎಂದು ನಮೂದಿಸಿದ್ದ ನಂಬರ್ ಗೆ ಕರೆ ಮಾಡಿದ್ದರು. ಆ ವೇಳೆ ಮೊಬೈಲ್ ನಲ್ಲಿ ಎನಿ ಡೆಸ್ಕ್​ ಆಪ್ ಡೌನ್ ಲೋಡ್ ಮಾಡಿಸಿ ಖಾತೆಯಿಂದ ಹಣ ವಂಚಿಸಿದ್ದಾರೆ ಸೈಬರ್ ಕಳ್ಳರು!

ಕೈಗಾ ಅಣು ಘಟಕದ ನಿರ್ದೇಶಕಗೆ 3 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ ಸೈಬರ್ ಕಳ್ಳರು!
ಕೈಗಾ ಅಣು ಘಟಕದ ನಿರ್ದೇಶಕಗೆ 3 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ ಸೈಬರ್ ಕಳ್ಳರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 13, 2022 | 6:08 PM

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ಉತ್ಪಾದನಾ ಘಟಕದ ನಿರ್ದೇಶಕ ರಾಜೇಂದ್ರ ಕುಮಾರ ಗುಪ್ತಾಗೆ ಸೈಬರ್ ಕಳ್ಳರು ಮೂರು ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ್ದಾರೆ. ರಾಜೇಂದ್ರ ಕುಮಾರ ಗುಪ್ತಾ ಅವರ ಎಸ್.ಬಿ.ಐ ಖಾತೆಯಿಂದ ₹3,00,068 ಹಣ ಲಪಟಾಯಿಸಲಾಗಿದೆ. ಕೈಗಾ ನಿರ್ದೇಶಕ ರಾಜೇಂದ್ರ ಕುಮಾರ ಗುಪ್ತಾ ಅವರು ಗೋವಾದಿಂದ ಜೈಪುರಕ್ಕೆ ಪ್ರಯಾಣಿಸಲು ಇಂಡಿಗೋ ಏರಲೈನ್ಸನಲ್ಲಿ ಟಿಕೇಟನ್ನು ಬುಕ್ ಮಾಡಿದ್ದರು. ಪ್ಲೈಟ್ ರದ್ದಾದ ಕಾರಣ ಟಿಕೇಟ್ ಹಣವನ್ನು ಇಂಡಿಗೋ ಏರಲೈನ್ಸ್ ಸಂಸ್ಥೆ ಮರುಪಾವತಿ ಮಾಡಿರಲಿಲ್ಲ.

ಆದರೆ ಇತ್ತ ರಾಜೇಂದ್ರ ಕುಮಾರ ಗುಪ್ತಾ ಅವರು ಗೂಗಲ್ ಸರ್ಚ್​ ಮೂಲಕ ಇಂಡಿಗೋ ಏಕ್ಸಿಕ್ಯೂಟಿವ್ ಅಧಿಕಾರಿ ಎಂದು ನಮೂದಿಸಿದ್ದ ನಂಬರ್ ಗೆ ಕರೆ ಮಾಡಿದ್ದರು. ಆ ವೇಳೆ ಮೊಬೈಲ್ ನಲ್ಲಿ ಎನಿ ಡೆಸ್ಕ್​ ಆಪ್ ಡೌನ್ ಲೋಡ್ ಮಾಡಿಸಿ ಖಾತೆಯಿಂದ ಹಣ ವಂಚಿಸಿದ್ದಾರೆ ಸೈಬರ್ ಕಳ್ಳರು! ಕಾರವಾರದ ಸೈಬರ್ ಅಪರಾಧ ವಿಭಾಗದ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೆಯ ಆವರಣದಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಬಂಧನ:

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಗಾಂವಠಾಣ ಗ್ರಾಮದಲ್ಲಿ ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಜಾನು ದೂಳು ಪಂಗಡೆ (43) ಎಂಬಾತನನ್ನು ಬಂಧಿಸಲಾಗಿದೆ. ಆದರೆ ಪಂಗಡೆ ತಾನು ಬೆಳೆದ ಗಾಂಜಾ ಮಾರಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಅಂದಾಜು 50,000 ಮೌಲ್ಯದ ಗಾಂಜಾ ವಶ ಪಡಿಸಿಕೊಂಡು ದಾಂಡೇಲಿ ಪೊಲೀಸ್ ಠಾಣೆಯ ಪೊಲೀಸರು ಪಂಗಡೆನನ್ನು ಬಂಧಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಸಂಪ್ ಅಗೆಯುವಾಗ ಚಿನ್ನದ ಮಣಿ ಹಾರಗಳು ಸಿಕ್ಕಿವೆ ಎಂದು ಹೊಟೇಲ್ ಉದ್ಯಮಿಗೆ 15 ಲಕ್ಷ ರೂ ವಂಚನೆ!

ಬೆಂಗಳೂರು: ವಂಚನೆಗೆ ಸಾವಿರ ಮುಖ ಲಕ್ಷ ದಾರಿಗಳಂತೆ! ಅದು ಎಂದೂ ಮುಗಿಯದ ಗೋಳಿನ ಹಾಡು! ತಾಜಾ ಪ್ರಕರಣದಲ್ಲಿ ಮೋಸ ಹೋಗುವ ಮಿಕ ಸಿಕ್ಕಿದೆಯೆಂದು ಯುವಕನೊಬ್ಬ ತಮಿಳುನಾಡಿನ‌ ಖ್ಯಾತ ಹೊಟೇಲ್ ಉದ್ಯಮಿಗೆ ಟೋಪಿ ಹಾಕಿದ ಪ್ರಕರಣವಿದು. ಸಂಪ್ ಅಗೆಯುವಾಗ ನಿಧಿ ಸಿಕ್ಕಿದೆ ಎಂದು ತಮಿಳುನಾಡಿನ‌ ಖ್ಯಾತ ಹೊಟೇಲ್ ಉದ್ಯಮಿಗೆ ಟೋಪಿ ಹಾಕಿದ್ದಾನೆ ಈ ಖದೀಮ. ಅದು ತಮಿಳುನಾಡಿನ‌ ಖ್ಯಾತ ಸ್ವಾಮಿ ಚಿಕನ್ ಚೆಟ್ಟಿನಾಡ್ ಹೊಟೇಲ್. ಅದರ ಮಾಲೀಕ ಮುರುಘಾನಾಥಂಗೆ ಅರ್ಜುನ್ ಎಂಬಾತ 15 ಲಕ್ಷ ರೂಪಾಯಿ ವಂಚನೆ ಎಸಗಿದ್ದಾನೆ.

ನಿಮ್ಮ ಹೊಟೇಲ್ ತಿಂಡಿ ಚೆನ್ನಾಗಿದೆ ಎಂದು ಹೊಟೇಲ್ ಮಾಲೀಕನ ಪರಿಚಯ ಮಾಡಿಕೊಂಡಿದ್ದ ಅರ್ಜುನ್ ಚೆನ್ನೈನಲ್ಲಿಯೇ ಕೆಲಸ ಮಾಡ್ತಿರೋದಾಗಿ ಹೇಳಿಕೊಂಡಿದ್ದನಂತೆ. ನಂತರ ನನ್ನ ಮನೆ ಸಂಪ್ ಅಗೆಯುವಾಗ 5 ಮಣಿ ಹಾರದ ನಿಧಿ ಸಿಕ್ಕಿದೆ ಎಂದು ಹೇಳಿದ್ದಾನೆ. ಎರಡು ಮಣಿಗಳನ್ನ ಮಾಲೀಕನಿಗೆ ನೀಡಿ, ಬೇಕಾದ್ರೆ ಪರಿಶೀಲನೆ ನಡೆಸಿ ಎಂದು ಕೊಟ್ಟು ಬಂದಿದ್ದನಂತೆ. ಅದರಂತೆ ಪರೀಕ್ಷೆ ನಡೆಸಿ‌ದ ಹೊಟೇಲ್ ಮಾಲೀಕ ಮುರುಘಾನಾಥಂಗೆ ಮಣಿ ಹಾರ ಅಸಲು ಚಿನ್ನದ್ದು ಎಂಬುದು ಮನವರಿಕೆಯಾಗಿದೆ. ಆದರೆ ಅತಿಯಾಸೆಗೆ ಬಿದ್ದಿದ್ದ ಮಾಲೀಕ ಉಳಿದ ಮಣಿ ಸರಗಳನ್ನ ಚೆನ್ನೈನ ರೇಸ್ ಕೋರ್ಸ್ ಬಳಿ ತರಲು ಅರ್ಜುನನಿಗೆ ಹೇಳಿದ್ದಾನೆ.

ಮುರುಘಾನಾಥನ ಹಣೆಬರಹ ಕೆಟ್ಟಿತ್ತು ಅನಿಸುತ್ತೆ… ಅದರಲ್ಲಿ ಮತ್ತೆ ನಾಲ್ಕು ಮಣಿಗಳನ್ನ ಪರಿಶೀಲಿಸಿದಾಗ ಅದೂ ಕೂಡ ಅಸಲಿಯಾಗಿತ್ತು ಎಂಬುದು ನಿಕ್ಕಿಯಾಗಿದೆ! ಸರಿ, ಮೂರು ದಿನಗಳ ಬಳಿಕ ಕರೆ ಮಾಡಿದ ಅರ್ಜುನ್ ಒಂದು ಕೆಜಿ‌ ಮಣಿಗೆ 25 ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿದ್ದಾನೆ. ಆದರೆ ಮೊದಲು ಸ್ವಲ್ಪವಷ್ಟೇ ಮಣಿ ಹಾರ ತೆಗೆದುಕೊಳ್ಳೊದಾಗಿ ಹೇಳಿ, ಉದ್ಯಮಿ ಮುರುಘಾನಾಥ 15 ಲಕ್ಷ ರೂಪಾಯಿ ರೆಡಿ ಮಾಡಿಕೊಂಡಿದ್ದಾನೆ.

ಅದರಂತೆ ಬೆಂಗಳೂರಿನಲ್ಲಿ ಮಣಿಗಳನ್ನ ಕೊಡೋದಾಗಿ ಹೇಳಿ ಕರೆಸಿಕೊಂಡಿದ್ದ ಅರ್ಜುನ್ ಆ್ಯಂಡ್ ಟೀಂ ಕೆ ಎಸ್ ಆರ್ ಟಿಸಿ ಮೂರನೇ ಮುಖ್ಯ ದ್ವಾರದ ಬಳಿ ಉದ್ಯಮಿ ಮುರುಘಾನಾಥನನ್ನ ಕರೆಸಿಕೊಂಡಿದ್ದಾರೆ. ನಂತರ ಆತನಿಂದ 15 ಲಕ್ಷ ರೂ ಪಡೆದು ನಕಲಿ ಮಣಿಗಳನ್ನ ನೀಡಿ ಪರಾರಿಯಾಗಿದ್ದಾರೆ. 15 ಲಕ್ಷ ರೂಪಾಯಿ ಮೌಲ್ಯದ ಮಣಿಗಳನ್ನ ನೀಡಿ ಅರ್ಜುನ್ ಹಾಗೂ ಮಹಿಳೆ ಸೇರಿ ಮೂವರಿಂದ ವಂಚನೆಯಾಗಿರೋದಾಗಿ ಉದ್ಯಮಿ ಮುರುಘಾನಾಥ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ವಂಚಕರು ಸಿಗ್ತಾರಾ? ಹಣ ವಾಪಸ್ ಬರುತ್ತಾ? ಕಾದು ನೋಡಬೇಕಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:07 pm, Mon, 13 June 22

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್