ಕಾರವಾರ: ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆ, ಜನರಲ್ಲಿ ಆತಂಕ
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡ ಗ್ರಾಮದ ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆಯಾಗಿದೆ. ದೊಡ್ಡ ಸಿಲಿಂಡರ್ ಆಕರದ ವಸ್ತು ಕಂಡು ಜನರು ಆತಂಕಗೊಂಡಿದ್ದಾರೆ.
ಕಾರವಾರ, ಆಗಸ್ಟ್ 4: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಗ್ರಾಮದ ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆಯಾಗಿದೆ. ದೊಡ್ಡ ಸಿಲಿಂಡರ್ ಆಕರದ ವಸ್ತು ಕಂಡು ಆತಂಕಗೊಂಡ ಸ್ಥಳೀಯ ಜನರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ವಸ್ತುವನ್ನು ಪರಿಶೀಲನೆ ನಡೆಸಿದ್ದಾರೆ. ಆಳ ಸಮುದ್ರದಲ್ಲಿ ಹಡಗಿನಿಂದ ಕಲಚಿ ಬಿದ್ದಿರುವ ವಸ್ತು ದಡಕ್ಕೆ ಬಂದಿರಬಹುದು ಎಂದು ಭಾವಿಸಿದ್ದಾರೆ. ಆ ಮೂಲಕ ಜನರಲ್ಲಿನ ಆತಂಕವನ್ನು ಕರಾವಳಿ ಕಾವಲು ಪಡೆ ಹಾಗೂ ಪೊಲೀಸರು ದೂರ ಮಾಡಿದ್ದಾರೆ.
ಇದನ್ನೂ ಓದಿ: ಕಾರವಾರ: ಮೊಬೈಲ್ ಚಾರ್ಜಿಂಗ್ ಕೇಬಲ್ ಬಾಯಿಗೆ ಹಾಕಿಕೊಂಡ ನವಜಾತ ಶಿಶು, ತಕ್ಷಣ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದಳು
ಹಸುಗೂಸನ್ನ ಆಸ್ಪತ್ರೆ ತೊಟ್ಟಿಲಲ್ಲೇ ಬಿಟ್ಟು ಹೋದ ಹೆತ್ತವರು
ಕಾರವಾರ: ಮೂರು ದಿನದ ಹಸುಗೂಸನ್ನ ಹೆತ್ತವರು ಆಸ್ಪತ್ರೆ ತೊಟ್ಟಿಲಲ್ಲೇ ಬಿಟ್ಟು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮುಂಡಗೋಡ ಜ್ಯೋತಿ (ಕ್ರಿಶ್ಚಿಯನ್) ಆಸ್ಪತ್ರೆಯಲ್ಲಿ ನಡೆದಿದೆ. ಮಗು ಸಾಕಲಾಗದೇ ಇದ್ದವರು ತೊಟ್ಟಿಲಲ್ಲಿ ಹಾಕಿ ಎಂಬ ಸೂಚನಾ ಫಲಕದ ಕೆಳಗಿರುವ ತೊಟ್ಟಿಲಿಗೆ ಮಗು ಹಾಕಿ ಹೋಗಿದ್ದಾರೆ.
ಬೆಳಗ್ಗಿನ ಜಾವ ಮಗುವಿಗೆ ಬಟ್ಟೆ ಸುತ್ತಿ ತೊಟ್ಟಿಲಿನಲ್ಲಿಟ್ಟು ಹೆತ್ತವರು ಹೋಗಿದ್ದಾರೆ. ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಬೇಟಿನೀಡಿ ಪರಿಶೀಲನೆ ನಡೆಸಿದ್ದು, ಹಸುಗೂಸನ್ನ ಶಿರಸಿ ದತ್ತು ಕೇಂದ್ರಕ್ಕೆ ನೀಡಲು ಕ್ರಮ ಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ