ಉತ್ತರ ಕನ್ನಡದಲ್ಲಿ 350ಕ್ಕೂ ಹೆಚ್ಚು ಅಡಕೆ ಮರಗಳ ಮಾರಣಹೋಮ! ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆರೋಪ
ಎಂಟು ಅರಣ್ಯ ಅಧಿಕಾರಿಗಳ ತಂಡ ಧಿಡೀರನೆ ತೋಟಕ್ಕೆ ಬಂದು ಐದು ವರ್ಷದಿಂದ ಕಷ್ಟ ಪಟ್ಟು ಬೆಳೆದ ಅಡಕೆ ಮರಗಳನ್ನ ಕಡೆದು ಹಾಕಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಕೆ ಮತ್ತು ಬಾಳೆ ಬೆಳೆದಿದ್ದ ರೈತರು ಈಗ ನ್ಯಾಯ ಕೊಡಿಸಿ ಅಂತಾ ಅಂಗಲಾಚುತ್ತಿದ್ದಾರೆ.
ಕಾರವಾರ: ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ 350 ಕ್ಕೂ ಅಧಿಕ ಅಡಕೆ ಮರಗಳ (Areca Trees) ಮಾರಣಹೋಮ ನಡೆದಿದೆ ಅಂತಾ ಜಮೀನು ಮಾಲೀಕರು ಆರೋಪಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ ತಾಲೂಕಿನ ಹಟ್ಟಿಕೇರೆಯ ಶವಗುಳಿ ಗ್ರಾಮದಲ್ಲಿ ನಡೆದಿದೆ. ಬೆಳ್ಳಾ ತಮ್ಮಣ್ಣ ಕುಣಬಿ ಮತ್ತು ಸಾತಾ ಒಳ್ಳು ಕುಣಬಿ ಎಂಬ ರೈತರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿದ್ದ ಅಡಕೆ ಮರಗಳು ಮತ್ತು ಬಾಳೆಯನ್ನ ಅರಣ್ಯ ಅಧಿಕಾರಿಗಳು ಧಿಡೀರನೆ ದಾಳಿ ಮಾಡಿ ಕಡೆದು ಹಾಕಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಎಂಟು ಅರಣ್ಯ ಅಧಿಕಾರಿಗಳ ತಂಡ ಧಿಡೀರನೆ ತೋಟಕ್ಕೆ ಬಂದು ಐದು ವರ್ಷದಿಂದ ಕಷ್ಟ ಪಟ್ಟು ಬೆಳೆದ ಅಡಕೆ ಮರಗಳನ್ನ ಕಡೆದು ಹಾಕಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಕೆ ಮತ್ತು ಬಾಳೆ ಬೆಳೆದಿದ್ದ ರೈತರು ಈಗ ನ್ಯಾಯ ಕೊಡಿಸಿ ಅಂತಾ ಅಂಗಲಾಚುತ್ತಿದ್ದಾರೆ. ಅಡಕೆ ಮರಗಳನ್ನ ಕಡಿಬೇಡಿ ಅಂತಾ ರೈತರು ಕೇಳಿಕೊಂಡರು ಮಾತು ಕೇಳದೆ ಮನಸೋಇಚ್ಛೆ ಗಿಡಗಳನ್ನ ಕಡೆದು ಹಾಕಿದ್ದಾರೆ. ಈ ಹಿಂದೆಯು ಅಧಿಕಾರಿಗಳು ತಮ್ಮ ತೋಟಕ್ಕೆ ಬಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ನಾವು ಕೊಟ್ಟಿರಲಿಲ್ಲ. ಕೊಡುವುದಕ್ಕೆ ನಮ್ಮ ಹತ್ತಿರ ಹಣ ಸಹ ಇಲ್ಲ. ದುಡ್ಡು ಕೊಟ್ಟಿಲ್ಲ ಅಂತಾ ಅಧಿಕಾರಿಗಳು ಹೀಗೆ ನಮಗೆ ಅನ್ಯಾಯ ಮಾಡಿದ್ದಾರೆ ಅಂತಾ ರೈತರು ಆರೋಪ ಮಾಡಿದ್ದಾರೆ.
ಗಿಡ, ಮರಗಳನ್ನ ಬೆಳೆಸಿ ಕಾಡು ಉಳಿಸಿ ಅಂತಾ ಹೇಳಬೇಕಾದವರೆ ಈ ರೀತಿ ವರ್ತನೆ ಮಾಡಿದ್ದಾರೆ. ಮುಂಚಿತವಾಗಿ ನಮಗೆ ಮಾಹಿತಿ ನೀಡಿಲ್ಲ. ಜೊತೆಗೆ ಕಳೆದ ಐದು ವರ್ಷದಿಂದ ನಾವು ಈ ಭೂಮಿಯಲ್ಲಿ ಅಡಕೆ, ಬಾಳೆ ಬೆಳೆಯುತ್ತಿದ್ದೇವೆ. ಇಷ್ಟು ದಿನ ಬಿಟ್ಟು ಈಗ ಏಕಾಏಕಿ ಬಂದು ಮರಗಳನ್ನ ಕಡೆದಿದ್ದಾರೆ. ಕೆಲವೇ ತಿಂಗಳಲ್ಲಿ ಅಡಕೆ ಮರಗಳು ಫಲ ಕೊಡುತ್ತಿದ್ದವು. ಅವುಗಳನ್ನ ಕಡೆದು ಹಾಕಿದ್ದಾರೆ. ಕೈಗೆ ಬಂದ ತುತ್ತನ್ನ ಅಧಿಕಾರಿಗಳು ಮಣ್ಣು ಪಾಲು ಮಾಡಿದ್ದಾರೆ ನಮಗೆ ನ್ಯಾಯ ಕೊಡಿಸಿ ಅಂತ ರೈತರು ಕೇಳುತ್ತಿದ್ದಾರೆ.
ಈ ಪ್ರಕರಣ ಕುರಿತು ಅಂಕೋಲ ಆರ್ಎಫ್ಓವಿಪಿ ನಾಯಕ್ ಅವರನ್ನ ಕೇಳಿದರೆ, ಹೊಸದಾಗಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಅಲ್ಲಿ ಅಡಕೆ ಮತ್ತು ಬಾಳೆ ಬೆಳೆದಿದ್ದರು. ಹೀಗಾಗಿ ಅದನ್ನ ತೆರವು ಮಾಡಿದ್ದೇವೆ. ಹಳೆಯ ಅತಿಕ್ರಮಣ ಇದ್ದರೆ ಅರಣ್ಯ ಇಲಾಖೆಯಿಂದಲೇ ಮಾಹಿತಿ ಸಂಗ್ರಹಿಸಿ ಫಲಾನುಭವಿಗಳಿಗೆ ಪಟ್ಟ ಸಿಗುವಂತೆ ಮಾಡಿದ್ದೇವೆ. ಹಟ್ಟಿಕೇರೆ ಮತ್ತು ಶವಗುಳಿ ಗ್ರಾಮದ ರೈತರು ಹೊಸದಾಗಿ ಅತಿಕ್ರಮಣ ಮಾಡಿ ಕೃಷಿ ಮಾಡಿದ್ದರು ಅದನ್ನ ತಡೆದಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ
Winter Allergy: ಚಳಿಗಾಲದಲ್ಲಿ ಉಂಟಾಗುವ ಅಲರ್ಜಿಗಳಿಂದ ಆರೋಗ್ಯ ಹದಗೆಡಬಹುದು; ಇಲ್ಲಿದೆ 5 ಪರಿಹಾರ