ಕಾರವಾರ, ಜನವರಿ 21: ಗರ್ಭ ಧರಿಸಿದ ಹಸು (cow) ತಲೆಕಡಿದು ಮಾಂಸ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರಿಂದ ಐವರು ಆರೋಪಿಗಳನ್ನು ಬಂಧಸಲಾಗಿದೆ. ಮೂರು ದಿನಗಳ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಘಟನೆ ನಡೆದಿತ್ತು.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಗೃಹ ಇಲಾಖೆ ಐಜಿಪಿ, ಉತ್ತರ ಕನ್ನಡ ಎಸ್ಪಿ ಜತೆ ಗೃಹಸಚಿವ ಪರಮೇಶ್ವರ್ ನಿನ್ನೆ ಪ್ರತ್ಯೇಕ ಸಭೆ ಮಾಡಿದ್ದಾರೆ. ಗೋ ಹತ್ಯೆಯನ್ನ ಸರ್ಕಾರ ಯಾವುದೇ ಕಾರಣಕ್ಕೂ ಬೆಂಬಲಿಸಲ್ಲ. ಗೋ ಹಂತಕರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಗೋ ಮಾಂಸ ಸಾಗಾಟದ ಜಾಲ ಇದರೆ ಸಂಪೂರ್ಣ ಕಲೆ ಹಾಕುವಂತೆ ಗೃಹ ಸಚಿವ ಪರಮೇಶ್ವರ್ ಸಭೆಯಲ್ಲಿ ಸೂಚನೆ ನೀಡಿದ್ದರು.
ಇದನ್ನೂ ಓದಿ: ಕರ್ನಾಟದಲ್ಲಿ ಮತ್ತೊಂದು ಅಮಾನವೀಯ ಘಟನೆ: ಹಸುವಿನ ತಲೆ ಕಡಿದು ದೇಹ ಕೊಂಡೊಯ್ದ ದುರುಳರು
ಇನ್ನು ಗೋಹಂತಕರ ಪತ್ತೆಗಾಗಿ ಸ್ವತಃ ಫೀಲ್ಡಿಗಿಳಿದಿದ್ದ ಎಸ್ಪಿ ಎಂ.ನಾರಾಯಣ ಸಿಬ್ಬಂದಿ ಜತೆ ಕಾಡಿನಲ್ಲೇ ಸುತ್ತಾಡಿದ್ದರು. ಇದುವರೆಗೆ ಐವರು ಗೋಹಂತಕರನ್ನು ಬಂಧಿಸಿರುವ ಪೊಲೀಸರು, ಜಾಲ ಪತ್ತೆ ಮಾಡಲು ಬಲೆ ಬೀಸಿದ್ದಾರೆ. ನಿನ್ನೆವರೆಗೂ ಕಾರ್ಯಾಚರಣೆಗೆ ನಾಲ್ಕು ತಂಡಗಳನ್ನು ಮಾಡಲಾಗಿತ್ತು. ಹೆಚ್ಚುವರಿಯಾಗಿ ಇನ್ನೆರಡು ತಂಡ ರಚನೆ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೊಡ್, ಬಾಸ್ಕೇರಿ, ಹಡಿನಬಾಳ, ಕವಲಕ್ಕಿ ಭಾಗದಲ್ಲಿ ಪೊಲೀಸರಿಂದ ಕಾರ್ಯಾಚರಣೆ ಜೋರಾಗಿದ್ದು, ಈ ಹಿಂದೆ ನಾಪತ್ತೆ ಆಗಿರುವ ಹಸುಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ಪೊಲೀಸರ ತಂಡಗಳ ಜೊತೆಗೆ ಹೊನ್ನಾವರ ತಾಲೂಕಿನಲ್ಲೇ ಎಸ್ಪಿ ಎಂ. ನಾರಾಯಣ ಠಿಕಾಣಿ ಹೂಡಿದ್ದಾರೆ.
ಇದನ್ನೂ ಓದಿ: ಮೂಕ ಪ್ರಾಣಿ ಮೇಲೆ ಇದೆಂಥಾ ಕ್ರೌರ್ಯ: ನಾಯಿಯನ್ನ ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಇಂತಹ ನೀಚ ಕೃತ್ಯ ನಡೆದಿತ್ತು. ಕೃಷ್ಣ ಆಚಾರಿ ಎಂಬುವವರ ಹಸುವನ್ನು ಮೇಯಲು ಕಾಡಿಗೆ ಬಿಟ್ಟಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹುಡಕಾಡಿದರೂ ಪತ್ತೆ ಆಗಿಲಿಲ್ಲ. ಆದರೆ ಮರುದಿನ ಬೆಳಗ್ಗೆ ಮಾಲೀಕರಿಗೆ ಆಘಾತ ಕಾದಿತ್ತು. ಮನೆಯಿಂದ ಅನತಿ ದೂರದಲ್ಲೇ ಹಸುವಿನ ತಲೆ ಕತ್ತರಿಸಿ ಬಿದ್ದಿತ್ತು. ಹಸುವಿನ ಕಾಲು ಕಾಣಸಿತ್ತು. ದುಷ್ಟರು ಹಸುವಿನ ಮುಂಡ, ಹಸುವಿನ ಹೊಟ್ಟೆಯಲ್ಲಿದ್ದ ಕರುವಿನ ಮಾಂಸವನ್ನ ಹೊತ್ತೊಯ್ದಿದ್ದಾರೆ ಅಂತಾ ಹಸುವಿನ ಮಾಲೀಕರು ಕಣ್ಣೀರು ಹಾಕಿದ್ದರು. ಈ ಘಟನೆಯಿಂದ ರಾಜ್ಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:30 pm, Tue, 21 January 25