Trivial reason: ಜೀವನಾಧಾರವಾಗಿದ್ದ ಅಂಗಡಿಗೆ ಬೆಂಕಿ ಇಟ್ಟ ನೆರೆಮನೆಯಾತ! ಕಣ್ಣೀರಿಟ್ಟ ಬಡ ಕುಟುಂಬ, ವಿಡಿಯೋದಲ್ಲಿ ಸೆರೆ

Trivial reason: ಜೀವನಾಧಾರವಾಗಿದ್ದ ಮುಕ್ಕಣ್ಣನ ಅಂಗಡಿ ಇದೀಗ ಕ್ಷುಲ್ಲಕ ಕಾರಣಕ್ಕೆ ಸಂಪೂರ್ಣ ನಾಶವಾಗಿದೆ. ಗ್ರಾಹಕರ 30ಕ್ಕೂ ಹೆಚ್ಚು ಬಟ್ಟೆ ಸುಟ್ಟು ಬೂದಿಯಾಗಿದ್ದರೆ, 2 ಲಕ್ಷ ರೂ. ಗೂ ಹೆಚ್ಚು ನಷ್ಟ ಉಂಟಾಗಿದೆ. ಜೀವನಾಧಾರವಾಗಿದ್ದ ಧೋಬಿ ಅಂಗಡಿಯನ್ನು ಸುಟ್ಟು ಹಾಕಿದ ಮಂಜು ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿ, ಕಾರವಾರ ಶಹರ ಠಾಣೆ ಪೊಲೀಸರು ಮಂಜುನನ್ನು ವಶಕ್ಕೆ ಪಡೆದಿದ್ದಾರೆ.

Trivial reason: ಜೀವನಾಧಾರವಾಗಿದ್ದ ಅಂಗಡಿಗೆ ಬೆಂಕಿ ಇಟ್ಟ ನೆರೆಮನೆಯಾತ! ಕಣ್ಣೀರಿಟ್ಟ ಬಡ ಕುಟುಂಬ, ವಿಡಿಯೋದಲ್ಲಿ ಸೆರೆ
ಜೀವನಾಧಾರವಾಗಿದ್ದ ಅಂಗಡಿಗೆ ಬೆಂಕಿ ಇಟ್ಟ ನೆರೆಮನೆಯಾತ -ಕಣ್ಣೀರಿಟ್ಟ ಕುಟುಂಬ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಸಾಧು ಶ್ರೀನಾಥ್​

Updated on:Feb 29, 2024 | 1:52 PM

ಮನುಷ್ಯನಿಗೆ ತಾಳ್ಮೆ ಬಹಳ ಮುಖ್ಯ. ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಗಲಾಟೆಗಳು ದೊಡ್ಡ ಅನಾಹುತಕ್ಕೆ ಸಾಕ್ಷಿ ಆಗಿರುತ್ತದೆ. ಕಾರವಾರದಲ್ಲಿ ಶೌಚಾಲಯದಲ್ಲಿ ಕುಳಿತುಕೊಳ್ಳಲು ಡಿಸ್ಟರ್ಬ್ ಮಾಡಿದ್ರು ಅಂತಾ, ಕೋಪದಲ್ಲಿ ಅಂಗಡಿಯನ್ನೆ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ ಇಲ್ಲೊಬ್ಬ ಭೂಪ. ಅಷ್ಟಕ್ಕೂ ಆಗಿದ್ದೇನು ಅಂತಿರಾ? ಇಲ್ಲಿದೆ ನೋಡಿ ರಿಪೊರ್ಟ್. ಒಂದೆಡೆ ಸುಟ್ಟು ಕರಕಲಾದ (Fire) ಇಸ್ತ್ರಿ ಅಂಗಡಿ (Iron Shop). ಇನ್ನೊಂದೆಡೆ ಭಾವುಕರಾಗಿ ಕಣ್ಣೀರು ಹಾಕುತ್ತಿರುವ ಬಡ ದಂಪತಿ ( Livelihood).. ಹೌದು ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ( Karwar) ನಗರದ ಕುಂಠಿ ಮಹಾಮಾಯಿ ದೇವಸ್ಥಾನದ ಎದುರಿನ ಧೋಬಿ ಅಂಗಡಿ ಬಳಿ.

ಯಾರೋ ಮಧ್ಯ ರಾತ್ರಿ ವೇಳೆ ಅಂಗಡಿಗೆ ಆಗಮಿಸಿ ಬೆಂಕಿ ಹಚ್ಚಿದ್ದಾರೆ. ನೋಡು ನೋಡುತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡಿದ್ದ ಇಸ್ತ್ರಿ ಮಾಡುವ ಗ್ರಾಹಕರ ಬಟ್ಟೆಗಳು ಸುಟ್ಟು ಬೂದಿಯಾಗಿತ್ತು. ದಿನದ ಕೂಳು ನೀಡುತ್ತಿದ್ದ ಅಂಗಡಿ ಮಾಲೀಕ ಮುಕ್ಕಣ್ಣನಿಗೆ ಬರಸಿಡಿಲು ಬಡಿದಂತಾಗಿದೆ. ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡು ಅಲ್ಲಿಯೇ ಇದ್ದ ಶಾಲೆಯ ಸಿಸಿ ಕ್ಯಾಮರಾ ದೃಶ್ಯವನ್ನ ವೀಕ್ಷಿಸಿದಾಗ ದೋಬಿ ಅಂಗಡಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಸೆರೆ ಸಿಕ್ಕಿದೆ.

Also Read: ಸಹ ವ್ಯಾಪಾರಿಯೇ ಒಂಟಿ ಮನೆ ದರೋಡೆ ಮಾಡಲು ಮೋಸ್ಟ್ ವಾಂಟೆಡ್‌ ಗ್ಯಾಂಗ್​ಗೆ ಸುಪಾರಿ ನೀಡಿದ್ದ!

ವಿಚಾರಣೆ ನಡೆಸಿದ ಪೊಲೀಸರಿಗೆ ನಗರದ ಹಬ್ಬುವಾಡದಲ್ಲಿ ವಾಸಿಸುವ ಮುಕ್ಕಣ್ಣನ ನೆರೆಮನೆಯ ಮಂಜು ಎಂಬಾತ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಮಂಜು ಬೆಂಕಿ ಹಚ್ಚಲು ಕಾರಣ ಎನೂ ಅಂದ್ರೆ ಅಂಗಡಿ ಮಾಲೀಕ ಮುಕ್ಕಣ್ಣ ಮತ್ತು ಮಂಜು ಸೇರಿ ಐದು ಮನೆಗಳಿಗೆ ಒಂದೇ ಶೌಚಾಲಯ ಇದೆ. ಶೌಚಕ್ಕೆ ಹೋದವರು ಬೇಗ ಬರಲ್ಲ ಅಂತಾ ಆಗಾಗ ಗಲಾಟೆ ನಡೆಯುತ್ತಾ ಇತ್ತು.‌ ಮಂಗಳವಾರ ಬೆಳಿಗ್ಗೆಯೂ ಮಂಜು ಶೌಚಕ್ಕೆ ಹೋದವನು ಬೇಗ ಹೋರಗೆ ಬಂದಿಲ್ಲ.

ಕೋಪಗೊಂಡ ಮುಕ್ಕಣ್ಣನ ಪತ್ನಿ ಭಾರತಿ, ಬೇಗ ಹೋರಗೆ ಬಾ ಅಂತಾ ಜೋರು ಧ್ವನಿಯಲ್ಲಿ ಕೂಗಿದಕ್ಕೆ ಗಲಾಟೆ ನಡೆದಿತ್ತು. ಈ ಗಲಾಟೆ ತಾರಕಕ್ಕೆ ಹೋಗಿ ಧೋಬಿ ಅಂಗಡಿ ಮಾಲೀಕ ಮುಕ್ಕಣ್ಣನಿಗೆ ಮಂಜು ಹೊಡೆದಿದ್ದ. ಹೀಗಾಗಿ ಮಕ್ಕಣ್ಣನ ಪತ್ನಿ ಭಾರತಿ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಕುಪಿತನಾದ ಆರೋಪಿ ಮಂಜು ಮಧ್ಯರಾತ್ರಿ ಕಾಲೋನಿಯಲ್ಲೇ ಇದ್ದ ಧೋಬಿ ಅಂಗಡಿ ಬಳಿ ತೆರಳಿ, ಬೆಂಕಿ ಹಚ್ಚಿ ಸೇಡು ತೀರಿಸಿಕೊಂಡಿದ್ದಾನೆ.

ಇಂತಹ ಕ್ಷುಲ್ಲಕ ಕಾರಣಕ್ಕೆ ಜೀವನಾಧಾರವಾಗಿದ್ದ ಮುಕ್ಕಣ್ಣನ ಅಂಗಡಿ ಇದೀಗ ಸಂಪೂರ್ಣ ನಾಶವಾಗಿದೆ. ಗ್ರಾಹಕರ 30ಕ್ಕೂ ಹೆಚ್ಚು ಬಟ್ಟೆಗಳು ಸುಟ್ಟು ಬೂದಿಯಾಗಿದ್ದರೆ, ಎರಡು ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ಹೀಗಾಗಿ ಜೀವನಾಧಾರವಾಗಿದ್ದ ಧೋಬಿ ಅಂಗಡಿಯನ್ನು ಸುಟ್ಟು ಹಾಕಿದ ಮಂಜು ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿ, ಕಾರವಾರ ಶಹರ ಠಾಣೆ ಪೊಲೀಸರು ಮಂಜುನನ್ನು ವಶಕ್ಕೆ ಪಡೆದಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಮಂಜುವಿನ ಕೋಪ ನೆರೆಮನೆಯ ಮುಕ್ಕಣ್ಣನ ಬದುಕನ್ನೇ ಕಿತ್ತುಕೊಂಡಿದೆ. ಇನ್ನು ಕೋಪದ ಕೈಗೆ ಬುದ್ದಿ ಕೊಟ್ಟ ಮಂಜು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Thu, 29 February 24