ಕಾರವಾರ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ(PSI Recruitment Scam) ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೇರೂರು ಗ್ರಾಮ ನಿವಾಸಿ ಗಣಪತಿ ವಿ.ಭಟ್ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ಟ್ರಾನ್ಸ್‌ಫರ್ ಹಾಗೂ ಇತರ ಡೀಲಿಂಗ್‌ಗಳಲ್ಲಿ ಸಕ್ರಿಯನಾಗಿದ್ದ ಎಂಬ ಬಗ್ಗೆ ತಿಳಿದು ಬಂದಿದೆ.
ಗಣಪತಿ ವಿ.ಭಟ್, ಶಾಸಕರಿಗೆ ಬಹಳ ಆತ್ಮೀಯನಾಗಿದ್ದ. ಅಕ್ರಮ ಚಟುವಟಿಕೆಯಿಂದ ಆಸ್ತಿ ಸಂಪಾದಿಸಿದ್ದ. ನಿನ್ನೆ ಬೆಂಗಳೂರಿನಿಂದ ಸಿದ್ಧಾಪುರದ ಹೇರೂರಿಗೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳು ಆರೋಪಿ ಗಣಪತಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿಯೇ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಗಣಪತಿ ವಿ.ಭಟ್ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿರಸಿ ಮೂಲದ ವ್ಯಕ್ತಿ ಗಣಪತಿ ಭಟ್ರನ್ನು ಎಲ್ಲಾ ಹಂತದಲ್ಲಿ ತನಿಖೆ ಮಾಡಲಾಗುತ್ತಿದೆ. ಹೆಸರಿನ ವಿಚಾರದಲ್ಲಿ ಕೆಲ ಗೊಂದಲ ಆಗಿತ್ತು. ನನ್ನ ಕಚೇರಿಯಲ್ಲೂ ಗಣಪತಿ ಭಟ್ ಅಂತ ಇದ್ದಾರೆ. ಹೀಗಾಗಿ ಗೊಂದಲ ಆಗಿದೆ. ಸದ್ಯ ಶಿರಸಿಯಲ್ಲಿ ಗಣಪತಿ ಭಟ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ರು.
ಪರೀಕ್ಷಾ ಅಕ್ರಮದ ಬಗ್ಗೆ ಚಾರ್ಜ್ಶೀಟ್ ಸಲ್ಲಿಸಿರುವ ಸಿಐಡಿ
ಕಲಬುರಗಿ: 545 ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪರೀಕ್ಷಾ ಅಕ್ರಮದ ಬಗ್ಗೆ ಸಿಐಡಿ ಚಾರ್ಜ್ಶೀಟ್ ಸಲ್ಲಿಸಿದೆ. ನಗರದ ಜ್ಞಾನಜೋತಿ ಇಂಗ್ಲಿಷ್ ಶಾಲೆಯಲ್ಲಿನ ಅಕ್ರಮಕ್ಕೆ ಸಂಬಂಧ 34 ಆರೋಪಿಗಳ ವಿರುದ್ಧ 5 ದಿನದ ಹಿಂದೆ ಕಲಬುರಗಿ 3ನೇ JMFC ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಚಾರ್ಜ್ಶೀಟ್ನಲ್ಲಿ ಅನೇಕ ಶಾಕಿಂಗ್ ಸಂಗತಿಗಳು ಉಲ್ಲೇಖಿಸಲಾಗಿದ್ದು, ಶಾಸಕ ವೈ.ಎಂ.ಪಾಟೀಲ್ ಪುತ್ರ ಅರುಣ್ ಕುಮಾರ್, ಶಾಸಕರ ಸಹೋದರ ಎಸ್.ವೈ.ಪಾಟೀಲ್ ಹೆಸರನ್ನು ಕಿಂಗ್ಪಿನ್ ರುದ್ರಗೌಡ ಪಾಟೀಲ್ ಪ್ರಸ್ತಾಪ ಮಾಡಿದರು. ಶಾಸಕರ ಗನ್ಮ್ಯಾನ್ ಹಯ್ಯಾಳಿ ದೇಸಾಯಿ ಪರ ಡೀಲ್ ಮಾಡಿದ್ದು, ಅರುಣ್ ಕುಮಾರ್ ಪಾಟೀಲ್ ತನಗೆ ಕರೆ ಮಾಡಿದ್ದರು. ದೇಸಾಯಿಗೆ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಹೇಳಿದರು. ಎಸ್.ವೈ.ಪಾಟೀಲ್ ಜೊತೆ ಮಾತನಾಡಿ 30 ಲಕ್ಷಕ್ಕೆ ಡೀಲ್ ಮಾಡಲಾಗಿದೆ ಎಂದು ಜಾರ್ಜ್ಶೀಟ್ನಲ್ಲಿನ ಸ್ವಖುಷಿ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.
545 OMR ಶೀಟ್ ಪೈಕಿ 234 OMR ಶೀಟ್ನಲ್ಲಿ ವ್ಯತ್ಯಾಸ
ಸಿಐಡಿ ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ವಿವಿಧ ಹಂತದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. 545 OMR ಶೀಟ್ ಪೈಕಿ 234 OMR ಶೀಟ್ನಲ್ಲಿ ವ್ಯತ್ಯಾಸ ಪತ್ತೆಯಾಗಿದೆ. ವಿವಿಧ ಹಂತದಲ್ಲಿ 234 OMR ಶೀಟ್ ತಿದ್ದಿರುವುದು ಪತ್ತೆಯಾಗಿದ್ದು, 545ರ ಪೈಕಿ 540 OMR ಶೀಟ್ FSLಗೆ ಸಿಐಡಿ ಕಳಿಸಿದ್ದು, OMR ಶೀಟ್ ಪರಿಶೀಲಿಸಿ ಎಫ್ಎಸ್ಎಲ್ ವರದಿ ನೀಡಿದೆ.
Published On - 3:43 pm, Tue, 12 July 22