AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್, ಡೀಸೆಲ್ ಹಾಕಿಸಲು ಗೋವಾದತ್ತ ತೆರಳುತ್ತಿರುವ ಕಾರವಾರ ಜನ, ಸ್ಥಳೀಯ ಬಂಕ್​ಗಳಿಗೆ ಸಂಕಷ್ಟ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗಡಿ ಪ್ರದೇಶದ ಪೆಟ್ರೋಲ್ ಬಂಕ್​ನವರ ಸಂಕಷ್ಟಕ್ಕೆ ಕಾರಣವಾಗಿದೆ. ನೆರೆಯ ಗೋವಾದಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಸಿಗುವುದರಿಂದ ಕಾರವಾರದ ವಾಹನ ಮಾಲೀಕರೆಲ್ಲ ಪೆಟ್ರೋಲ್​ಗಾಗಿ ಗೋವಾಕ್ಕೆ ತೆರಳುತ್ತಿದ್ದಾರೆ. ಇದು ಸ್ಥಳೀಯ ಬಂಕ್​ಗಳನ್ನು ಸಂಕಷ್ಟಕ್ಕೆ ಈಡುಮಾಡಿದೆ.

ಪೆಟ್ರೋಲ್, ಡೀಸೆಲ್ ಹಾಕಿಸಲು ಗೋವಾದತ್ತ ತೆರಳುತ್ತಿರುವ ಕಾರವಾರ ಜನ, ಸ್ಥಳೀಯ ಬಂಕ್​ಗಳಿಗೆ ಸಂಕಷ್ಟ
ಪೆಟ್ರೋಲ್, ಡೀಸೆಲ್ ಹಾಕಿಸಲು ಗೋವಾದತ್ತ ತೆರಳುತ್ತಿರುವ ಕಾರವಾರ ಜನ, ಸ್ಥಳೀಯ ಬಂಕ್​ಗಳಿಗೆ ಸಂಕಷ್ಟ
Ganapathi Sharma
|

Updated on:Jul 26, 2024 | 1:17 PM

Share

ಕಾರವಾರ, ಜುಲೈ 26: ನೆರೆಯ ಗೋವಾದಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ದೊರೆಯುತ್ತಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜನ ಅಲ್ಲಿಗೇ ದೌಡಾಯಿಸುತ್ತಿದ್ದಾರೆ. ಇದರಿಂದಾಗಿ ಕಾರವಾರದ ಸ್ಥಳೀಯ ಪೆಟ್ರೋಲ್ ಬಂಕ್​ಗಳು ನಷ್ಟ ಅನುಭವಿಸುವಂತಾಗಿದೆ ಎಂದು ವರದಿಯಾಗಿದೆ. ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಗೋವಾದ ಪೆಟ್ರೋಲ್ ಬಂಕ್​​ಗಳಿಗೆ ವಾಹನ ಮಾಲೀಕರು ಬರುತ್ತಿದ್ದು, ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ಪ್ರಸ್ತುತ, ಗೋವಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 99 ರೂ. ಇದ್ದು, ಕಾರವಾರದಲ್ಲಿ ಲೀಟರ್‌ಗೆ 104 ರೂ. ಇದೆ. ಗೋವಾದಲ್ಲಿ ಕಾರವಾರಕ್ಕಿಂತ ಪೆಟ್ರೋಲ್ 5 ರೂ. ಅಗ್ಗವಾಗಿದೆ. ಡೀಸೆಲ್ ಸಹ ಗೋವಾದಲ್ಲಿ ರಿಯಾಯಿತಿ ದರದಲ್ಲಿ ಬರುತ್ತದೆ. ಕಾರವಾರದಲ್ಲಿ ಡೀಸೆಲ್ ಲೀಟರ್​​ಗೆ 90.57 ರೂ. ಇದ್ದರೆ, ಗೋವಾದಲ್ಲಿ ಲೀಟರ್‌ಗೆ 88.07 ರೂ. ಇದೆ.

ಈ ಉಳಿತಾಯದ ಲಾಭ ಪಡೆಯಲು ಟ್ರಕ್ ಚಾಲಕರು ಮತ್ತು ಇತರ ವಾಹನ ಮಾಲೀಕರು 15 ಕಿಮೀ ಸಂಚರಿಸಿ ಗೋವಾಕ್ಕೆ ತೆರಳುತ್ತಿದ್ದಾರೆ. ಗೋವಾ ಗಡಿಯಲ್ಲಿ ಹೆಚ್ಚಿನ ವಾಹನ ಮಾಲೀಕರು ತಮ್ಮ ಟ್ಯಾಂಕ್‌ಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಾರೆ, ಅಲ್ಲಿ ಕಡಿಮೆ ಬೆಲೆ ಇದೆ. ಕರ್ನಾಟಕದಲ್ಲಿ ಇತ್ತೀಚೆಗೆ ಇಂಧನ ಬೆಲೆ ಏರಿಕೆಯಾದ ನಂತರ, ಕಾರವಾರದ ಪೆಟ್ರೋಲ್ ಪಂಪ್‌ಗಳು ನಷ್ಟ ಅನುಭವಿಸಿವೆ. ಹೆಚ್ಚಿನ ಗ್ರಾಹಕರು ಗೋವಾ ಗಡಿಗೆ ಹೋಗುತ್ತಾರೆ ಎಂದು ಕಾರವಾರದ ಪೆಟ್ರೋಲ್ ಪಂಪ್‌ನ ನೌಕರರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಗೋವಾ ಗಡಿಯಲ್ಲಿ ವಾಹನಕ್ಕೆ ಪೆಟ್ರೋಲ್ ತುಂಬಿಸಿದರೆ ನಾವು ಲೀಟರ್‌ಗೆ 5 ರೂ.ವರೆಗೆ ಉಳಿಸಬಹುದು. ಕರ್ನಾಟಕದಲ್ಲಿ ಪೆಟ್ರೋಲ್​ಗೆ 104.49 ರೂ. ಇದ್ದು, ಗೋವಾದಲ್ಲಿ ನಾವು 11 ಲೀಟರ್ ಪೆಟ್ರೋಲ್ ಖರೀದಿಸಿದರೆ ಒಂದು ಲೀಟರ್ ಉಚಿತವಾಗಿ ಬರುತ್ತದೆ ಎಂದು ವಾಹನ ಮಾಲೀಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬರಲಿದೆ ಬುಲೆಟ್ ಟ್ರೈನ್: ಚೆನ್ನೈ ಮೈಸೂರು ಮಧ್ಯೆ ಕೇವಲ ಒಂದೂವರೆ ಗಂಟೆಯಲ್ಲಿ ಪ್ರಯಾಣ

ಗೋವಾ ಮತ್ತು ಕರ್ನಾಟಕದಲ್ಲಿ ಇಂಧನ ಬೆಲೆಯಲ್ಲಿ ಸುಮಾರು 15 ರೂ.ನಷ್ಟು ವ್ಯತ್ಯಾಸವಿದೆ. ಆದ್ದರಿಂದ ಗ್ರಾಹಕರು ಅದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಗೋವಾದ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಹೇಳಿದ್ದಾರೆ.

ಕರ್ನಾಟಕದಿಂದ ಹೆಚ್ಚಿನ ವಾಹನ ಮಾಲೀಕರು ಪೆಟ್ರೋಲ್​​ ಹಾಕಿಸಿಕೊಳ್ಳಲು ಬರುವುದನ್ನು ಗೋವಾದ ಪೆಟ್ರೋಲ್ ಪಂಪ್‌ ಉದ್ಯೋಗಿಯೊಬ್ಬರು ದೃಢಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Fri, 26 July 24