ಕಾರ’ವಾರ್’ ಲೋಕಸಭಾ ಚುನಾವಣೆ: ಉಭಯ ಪಕ್ಷದಿಂದ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಲು ಪ್ಲ್ಯಾನ್!

ನಾಳೆಯೇ 18ನೇ ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಲಿದೆ. ಈ ಮಧ್ಯೆ, ರಾಜ್ಯದಲ್ಲಿ ಈಗಾಗಲೇ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ - ಕೆಲವರ ಹೆಸರು ಘೋಷಣೆ ಆಗಿದ್ರೆ, ಇನ್ನು ಕೆಲವರ ಹೆಸರು ಫೈನಲ್ ಆಗಿದ್ದು ಘೋಷಣೆ ಆಗುವುದು ಬಾಕಿ ಇದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಅಭ್ಯರ್ಥಿಗಳ ಆಯ್ಕೆ ಉಭಯ ಪಕ್ಷಗಳಿಗೆ ಕಗ್ಗಂಟಾಗಿದೆ.

ಕಾರ'ವಾರ್' ಲೋಕಸಭಾ ಚುನಾವಣೆ: ಉಭಯ ಪಕ್ಷದಿಂದ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಲು ಪ್ಲ್ಯಾನ್!
ಕಾರವಾರ​ ಯಾರಿಗೆ? ಉಭಯ ಪಕ್ಷದಿಂದ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಲು ಪ್ಲ್ಯಾನ್
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಸಾಧು ಶ್ರೀನಾಥ್​

Updated on: Mar 15, 2024 | 1:20 PM

ನಾಳೆಯೇ 18ನೇ ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಲಿದೆ. ಈ ಮಧ್ಯೆ, ರಾಜ್ಯದಲ್ಲಿ ಈಗಾಗಲೇ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ – ಕೆಲವರ ಹೆಸರು ಘೋಷಣೆ ಆಗಿದ್ರೆ, ಇನ್ನು ಕೆಲವರ ಹೆಸರು ಫೈನಲ್ ಆಗಿದ್ದು ಘೋಷಣೆ ಆಗುವುದು ಬಾಕಿ ಇದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ (Karwar Lok Sabha Election 2024) ಮಾತ್ರ ಅಭ್ಯರ್ಥಿಗಳ ಆಯ್ಕೆ ಉಭಯ ಪಕ್ಷಗಳಿಗೆ (BJP, Congress) ಕಗ್ಗಂಟಾಗಿದೆ. ಉಭಯ ಪಕ್ಷಗಳು ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸಿವೆ ಈ ಕುರಿತ ವರದಿ ಇಲ್ಲಿದೆ. ದೇಶದಲ್ಲಿ ಈಗಾಗಲೇ ಲೊಕಸಭಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ.. ತಾ ಮುಂದೆ ನಾ ಮುಂದೆ ಎಂದು ಪಕ್ಷಗಳು ತಮ್ಮ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಲೆಕ್ಕಾಚಾರ ಮಾಡುತ್ತಿದ್ರೆ ಅಕಾಂಕ್ಷಿಗಳು ಮಾತ್ರ ಟಿಕೆಟ್ ಗಾಗಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಆದ್ರೆ ಉತ್ತರ ಕನ್ನಡ ಕ್ಷೇತ್ರದ ಪರಿಸ್ಥಿತಿ ಮಾತ್ರ ಭಿನ್ನವಾಗಿದೆ.

ಹೌದು ಕಳೆದ ನಾಲ್ಕುವರೆ ವರ್ಷಗಳಿಂದ ಸೈಲೆಂಟ್ ಆಗಿದ್ದ ಸಂಸದ ಅನಂತ ಕುಮಾರ ಹೆಗಡೆ ಕಳೆದ ಎರಡು ತಿಂಗಳಿನಿಂದ ಮತ್ತೆ ಆಕ್ಟಿವ್ ಆಗಿದ್ದಾರೆ. ಎಳನೇ ಬಾರಿ ಸ್ಪರ್ಧೆ ಮಾಡಲು ಇಚ್ಛಿಸಿರುವ ಅನಂತ ಕುಮಾರ, ಟಿಕೆಟ್ ಗಾಗಿ ದೆಹಲಿ, ಬೆಂಗಳೂರಿಗೆ ಹೋಗಿ ಲಾಬಿ ಮಾಡದೆ ತಮ್ಮ ಪ್ರಚಾರ ವೈಖರಿಯ ಮೂಲಕವೆ ಟಿಕೆಟ್ ಗಿಟ್ಟಿಸುವ ತಂತ್ರ ಹೆಣೆದಿದ್ದಾರೆ.

ಹಾಗಾಗಿ ಈಗಾಗಲೇ ಎರಡನೇ ಸುತ್ತಿನ ಪ್ರಚಾರ ಮುಗಿಸಿರುವ ಅನಂತ ಕುಮಾರ, ತಮ್ಮ ಮೂರನೆ ಹಂತದ ಪ್ರಚಾರಕ್ಕೆ ತಯಾರಿ ನಡೆಸಿದ್ದಾರೆ. ಆದ್ರೆ ಈ ಬಾರಿ ಅವರ ತಂತ್ರ ಉಲ್ಟಾ ಹೊಡೆದಿದೆ. ತಮ್ಮ ವಿವಾದಾತ್ಮಕ ಭಾಷಣದ ಮೂಲಕ ಹಿಂದೂ ವೋಟ್ ಗಳನ್ನ ಸೆಳೆಯುವ ಹುಮ್ಮಸ್ಸಿನಲ್ಲಿ. ಸಂವಿಧಾನ ತಿದ್ದುಪಡಿ ಬಗ್ಗೆ ಆಡಿದ ಮಾತುಗಳು ಅನಂತ ಕುಮಾರಗೆ ಮುಳ್ಳಾಗಿ ಪರಣಮಿಸಿದೆ ಎನ್ನಲಾಗಿದೆ.

ಹೌದು ಇದೆ ಹೇಳಿಕೆಯಿಂದ ಅನಂತ ಕುಮಾರ ಹೆಗಡೆಗೆ ಟಿಕೆಟ್ ತಪ್ಪುವ ಸಾಧ್ಯತೆ ದಟ್ಟವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದಲ್ಲದೆ, ನಾಲ್ಕುವರೆ ವರ್ಷ ಕ್ಷೇತ್ರದ ಜನರ ಕೈಗೆ ಸಿಗದ ಹೆಗಡೆಗೆ ಟಿಕೆಟ್ ಕೊಡಬಾರದೆಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡದಾಗಿತ್ತು.

ಆದ್ರೆ ಹೆಗೆಡೆ ಕ್ಷೇತ್ರದಾದ್ಯಂತ ಸುತ್ತಾಟ ಮಾಡುವಾಗ ಸಿಕ್ಕ ಜನಮನ್ನಣೆ ಕಂಡು ಟಿಕೆಟ್ ಕೊಡುವ ನಿರೀಕ್ಷೆ ಹೆಚ್ಚಿತ್ತು. ಆದ್ರೆ ಮುಂಡಗೋಡ ತಾಲೂಕಿನ ಹಲಗೇರಿ ಗ್ರಾಮದ ಕಾರ್ಯರ್ತರ ಸಭೆಯಲ್ಲಿ ಸಂವಿಧಾನ ತಿದ್ದುಪಡಿ ಬಗ್ಗೆ ನೀಡಿದ ಹೆಳಿಕೆ. ಬಿಜೆಪಿ ನಾಯಕರಿಗೆ ಇರುಸುಮುರುಸಿಗೆ ಕಾರಣವಾಗಿದ್ದರಿಂದ ಅನಂತ ಕುಮಾರ ಬಿಟ್ಟು ಅಚ್ಚರಿ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕಮಲ ನಾಯಕರು ಚಿಂತನೆ ನಡೆಸಿದ್ದಾರೆ.

Also Read: Trivial reason – ಜೀವನಾಧಾರವಾಗಿದ್ದ ಅಂಗಡಿಗೆ ಬೆಂಕಿ ಇಟ್ಟ ನೆರೆಮನೆಯಾತ! ಕಣ್ಣೀರಿಟ್ಟ ಬಡ ಕುಟುಂಬ, ವಿಡಿಯೋದಲ್ಲಿ ಸೆರೆ

ಇನ್ನು ಯಾರೂ ಕೂಡ ಉತ್ತರ ಕನ್ನಡ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಅಭ್ಯರ್ಥಿ ಆಗಲು ಮುಂದೆ ಬರುತ್ತಿಲ್ಲ. ಅಂಜಲಿ ನಿಂಬಾಳ್ಕರ ಹೊರತು ಪಡಿಸಿದ್ರೆ ಆರ್ ವಿ ದೇಶಪಾಂಡೆ ಸೇರಿದಂತೆ ಹಿರಿಯ ನಾಯಕರು ಯಾರೂ ನಾ ವಲ್ಲೆ ಅಂತಿದ್ದಾರೆ. ಈ ಮಧ್ಯೆ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ ಅವರು ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ರೆ ಪ್ರಬಲ ಪೈಪೋಟಿ ನೀಡಬಹುದು ಎನ್ನಲಾಗಿದೆ. ಆದ್ರೆ ಹೆಬ್ಬಾರನನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲು ಜಿಲ್ಲೆಯ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಉತ್ತರ ಕನ್ನಡ ಕ್ಷೇತ್ರಕ್ಕಾಗಿ ಉಭಯ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಣಮಿಸಿದ್ದು, ಎರಡೂ ಪಕ್ಷಗಳಿಂದ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೋ ಅಥವಾ ಅನಿವಾರ್ಯವಾಗಿ ಬಿಜೆಪಿಯಿಂದ ಮತ್ತೆ ಅನಂತ ಕುಮಾರ ಮತ್ತು ಕಾಂಗ್ರೆಸ್ ಪಕ್ಷದಿಂದ ಅಂಜಲಿ ನಿಂಬಾಳ್ಕರ್ ಗೆ ಟಿಕೆಟ್ ಕೊಡ್ತಾರಾ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ