ಕಾರವಾರ, ಅ.21: ವ್ಯಕ್ತಿಯೊಬ್ಬ ಹಿಂದೂ ದೇವತೆಗಳನ್ನು ನಿಂದಿಸುತ್ತಿರುವುದನ್ನು ವಿಡಿಯೋ ಮಾಡಿದ್ದ ಮಾರುತಿ ನಾಯ್ಕ (35) ಎಂಬವರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ ಶಿರವಾಡದಲ್ಲಿ ನಡೆದಿದೆ.
ಆತ್ಮಹತ್ಯೆಗೂ ಮುನ್ನ ತನ್ನ ಪುತ್ರನ ಚಡ್ಡಿಯ ಕಿಸೆಯಲ್ಲಿ ಸುಸೈಡ್ ನೋಟ್ ಇಟ್ಟು ಪತ್ನಿಗೆ ನೀಡುವಂತೆ ಮಾರುತಿ ಹೇಳಿದ್ದರು. ಡೆತ್ ನೋಟ್‌ನಲ್ಲಿ ನನ್ನ ಆತ್ಮಹತ್ಯೆಗೆ ಪೊಲೀಸರು ಹಾಗೂ ಎಲಿಷಾ ಕುಟುಂಬಸ್ಥರು ಕಾರಣ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಆತ್ಮಹತ್ಯೆಗೆ ಶರಣಾದ ಯುವಕ; ಕಾರಣವೇನು ಗೊತ್ತಾ?
ಡೆತ್ ನೋಟ್‌ನಲ್ಲಿ ಪೊಲೀಸ್ ಸಿಬ್ಬಂದಿ ದೇವರಾಜ, ಎಲಿಷಾ ಕುಟುಂಬಸ್ಥ ಬಸವರಾಜ, ಸುರೇಶ್, ನಾಗಮ್ಮ ಹೆಸರು ಬರೆದಿದ್ದಾರೆ. ಇತ್ತ ಪತಿಯನ್ನು ಕಳೆದುಕೊಂಡ ಮಾರುತಿ ಪತ್ನಿ ರಾಧಾ, ಕಣ್ಣೀರು ಹಾಕುತ್ತಿದ್ದು, ಪತಿಯ ಸಾವಿಗೆ ನ್ಯಾಯ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ