ಶಾಂತಿ, ಸೌಹಾರ್ದತೆ, ಪೋಲಿಯೋ ಮುಕ್ತ ಸಂದೇಶ ಸಾರಲು ಸೈಕಲ್ ಯಾತ್ರೆ: ಕೇರಳ to ಲಂಡನ್‌ಗೆ ಹೊರಟ ವ್ಯಕ್ತಿ
ಫಾಯಿಸ್ ಅಶ್ರಪ್ ಅಲಿ ಇಂಜಿನಿಯರಿಂಗ್ ಉದ್ಯೋಗಿಯಾಗಿದ್ದು ಈತ ಕೇರಳದ ತಿರುವನಂತಪುರಂ ನಿಂದ ಸುಮಾರು 35 ದೇಶಗಳನ್ನ ಸುತ್ತಿ ಲಂಡನ್ ತಲುಪಲಿದ್ದಾನೆ.
ಕಾರವಾರ: ಆಗಸ್ಟ್ 15 ರಂದು ಅಜಾದಿ ಕಾ ಅಮೃತ ಮಹೋತ್ಸವ ಆಚರಣೆ ಬಳಿಕ, ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂನಿಂದ ಲಂಡನ್ ವರಗೆ ಸೈಕ್ಲಿಂಗ್ ಆರಂಭಿಸಿದ ವ್ಯಕ್ತಿ ಫಾಯಿಸ್ ಅಶ್ರಪ್ ಅಲಿ ಇಂದು ಕಾರವಾರಕ್ಕೆ ಬಂದು ತಲುಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾರ್ ಶಿಪ್ ಮ್ಯೂಸಿಯಮ್ ಮುಂದೆ ಅಶ್ರಪ್ ಅಲಿಗೆ ರೋಟರಿ ಕ್ಲಬ್ ವತಿಯಿಂದ ಅದ್ದೂರಿ ಸ್ವಾಗತ ಮಾಡಲಾಗಿದೆ. ಇನ್ನು ಶಾಂತಿ, ಸೌಹಾರ್ದತೆ ಹಾಗೂ ಪೋಲಿಯೋ ಮುಕ್ತ ಸಂದೇಶ ಸಾರಲು ಫಾಯಿಸ್ ಸೈಕಲ್ ಏರಿ ದೇಶ ಸುತ್ತಲು ಪ್ರಾರಂಭ ಮಾಡಿದ್ದಾರೆ.
ಕೇರಳದ ತಿರುವನಂತಪುರಂ ನಿಂದ ಆರಂಭವಾದ ಈ ಸೈಕಲ್ ಯಾತ್ರೆ ಸುಮಾರು 35 ದೇಶಗಳನ್ನ ಸುತ್ತಿ ಲಂಡನ್ ತಲುಪಲಿದೆ. ಅಂದರೆ 35,000 ಕಿಮೀ ದೂರದ ವರಗೆ ಸೈಕಲ್ ಯಾತ್ರೆ ಮಾಡಿ ಲಂಡನ್‌ಗೆ ಈತ ತಲುಪಲಿದ್ದಾನೆ. ಇನ್ನು ಲಂಡನ್ ತಲುಪಬೇಕಾದರೆ ಈತನಿಗೆ ಸುಮಾರು 450 ದಿನಗಳು ಬೇಕಾಗುತ್ತೆ. ಅಂದರೆ 2024 ಮಾರ್ಚ ತಿಂಗಳಿನಲ್ಲಿ ಈತ ಲಂಡನ್ ತಲುಪುತ್ತಾನೆ. ದಾರಿಯುದ್ದಕ್ಕೂ ಈತನಿಗೆ ರೋಟರಿ ಕ್ಲಬ್ ವತಿಯಿಂದ ಸಹಾಯ ಮಾಡಲಾಗುತ್ತೆ.
ಇನ್ನೂ ಫಾಯಿಸ್ ಅಶ್ರಪ್ ಅಲಿ ಇಂಜಿನಿಯರಿಂಗ್ ಉದ್ಯೋಗಿಯಾಗಿದ್ದು ಈತನಿಗೆ ಮಡದಿ ಮುದ್ದಾದ ಎರಡು ಮಕ್ಕಳು ಇದ್ದಾರಂತೆ. ಕುಟುಂಬದ ಸಹಕಾರದೊಂದಿಗೆ ಈತ ಸೈಕ್ಲಿಂಗ್ ಆರಂಭಿಸಿದ್ದಾನೆ. ಇನ್ನು 2019 ರಲ್ಲಿ ಸೈಕ್ಲಿಂಗ್ ಮಾಡಿ ಸಿಂಗಪುರಕ್ಕೆ ಹೋಗಿದ್ದ. ಈಗ ಕೇರಳ ದಿಂದ ಲಂಡನ್‌ಗೆ ಹೋಗುವ ನಿರ್ಧಾರ ಮಾಡಿದ್ದಾನೆ.
ಈತನ ಸೈಕ್ಲಿಂಗ್ ಮಾರ್ಗ ಕಾರವಾರ ದಿಂದ ಗೋವಾ, ಮುಂಬಯಿ, ಮಸ್ಕತ್, ಓಮನ್, ಯುಎಇ, ಸೌದಿ ಅರೇಬಿಯಾ, ಕ್ವಾಟರ್, ಬ್ರಹೈನ್, ಕುವೈತ್, ಇರಾಕ್, ಇರಾನ್, ಅಜರ್ ಬೈಜಾನ್, ಜಾರ್ಜಿಯಾ ಹಾಗೂ ಟರ್ಕಿ ಮೂಲಕ ಲಂಡನ್ ತಲುಪಲಿದ್ದಾನೆ.
ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ
Published On - 12:45 pm, Wed, 7 September 22