ಗ್ರಾಮದ ಜನರ ನಿದ್ದೆಗೆಡಿಸಿದೆ ಈ ಮಂಗ; 10 ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಕೋತಿ ಓಡಿಸಲು ಹರ ಸಾಹಸಪಡುತ್ತಿರುವ ಇಡೀ ಊರು

ಉತ್ತರಕನ್ನಡ ಜಿಲ್ಲೆ ಅಂಕೋಲದ ಬಬ್ರೂವಾಡ ಗ್ರಾಮದಲ್ಲಿ ಒಂದೇ ಒಂದು ಕೋತಿ ಗ್ರಾಮದ ಜನರ ನಿದ್ದೆ ಹಾಳು ಮಾಡಿದೆ. ಇಷ್ಟು ದಿನ ನೆಮ್ಮದಿಯಿಂದ ಇದ್ದ ಈ ಊರಿಗೆ ಏಕಾಏಕಿ ಕೋತಿ ಎಂಟ್ರಿ ಕೊಟ್ಟಿದೆ.

ಗ್ರಾಮದ ಜನರ ನಿದ್ದೆಗೆಡಿಸಿದೆ ಈ ಮಂಗ; 10 ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಕೋತಿ ಓಡಿಸಲು ಹರ ಸಾಹಸಪಡುತ್ತಿರುವ ಇಡೀ ಊರು
ಕೋತಿ ಓಡಿಸಲು ಹರ ಸಾಹಸಪಡುತ್ತಿರುವ ಊರಿನ ಜನ
Follow us
TV9 Web
| Updated By: ಆಯೇಷಾ ಬಾನು

Updated on: Apr 29, 2022 | 8:22 AM

ಕಾರವಾರ: ಕಳೆದ ಒಂದು ವಾರದಿಂದ ಈ ಗ್ರಾಮದಲ್ಲಿ ಕೋತಿಯ ಕಾಟ ಹೆಚ್ಚಾಗಿದೆ. ಊರಿನ ಜನರ ಮೇಲೆ ಕೋತಿ ದಾಳಿ ಮಾಡಿದ್ದು ಭಯ ಹುಟ್ಟುವಂತೆ ಮಾಡಿದೆ. ಹೀಗಾಗಿ ಆಂತಕಗೊಂಡ ಅಲ್ಲಿಯ ಜನ ಗುಂಪು ಗುಂಪಾಗಿ ಕೈಯಲ್ಲಿ ಕೋಲು ಹಿಡಿದು ಕೋತಿಯನ್ನು ಮಟ್ಟ ಹಾಕಲು ರೆಡಿಯಾಗಿದ್ದಾರೆ.

10 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಕೋತಿ ಉತ್ತರಕನ್ನಡ ಜಿಲ್ಲೆ ಅಂಕೋಲದ ಬಬ್ರೂವಾಡ ಗ್ರಾಮದಲ್ಲಿ ಒಂದೇ ಒಂದು ಕೋತಿ ಗ್ರಾಮದ ಜನರ ನಿದ್ದೆ ಹಾಳು ಮಾಡಿದೆ. ಇಷ್ಟು ದಿನ ನೆಮ್ಮದಿಯಿಂದ ಇದ್ದ ಈ ಊರಿಗೆ ಏಕಾಏಕಿ ಕೋತಿ ಎಂಟ್ರಿ ಕೊಟ್ಟಿದೆ. ಒಂದು ವಾರದಿಂದ ಬಿಟ್ಟೂ ಬಿಡದೆ ಜನರ ಮೇಲೆ ಅಟ್ಯಾಕ್ ಮಾಡ್ತಿದೆ. ಹತ್ತಾರು ಜನರಿಗೆ ಕಚ್ಚಿ ರಕ್ತಸ್ರಾವವಾಗುವಂತೆ ತೀವ್ರವಾಗಿ ಗಾಯ ಮಾಡಿದೆ. ಲಕ್ಷ್ಮಿ ಎಂಬ ವೃದ್ಧೆಯ ಮಂಗನ ದಾಳಿಯಿಂದ ನರಳುವಂತಾಗಿದೆ. ಇನ್ನೂ ಮಂಗನ ಭಯಕ್ಕೆ ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರು ಮನೆಯಿಂದ ಆಚೆ ಬರುವುದಕ್ಕು ಭಯ ಪಡುವಂತಾಗಿದೆ.

ಒಂದು ವಾರದಿಂದ ಯಾವುದೇ ಕೆಲಸಕ್ಕೆ ಹೋಗದೆ ಮಂಗನನ್ನು ಹಿಡಿಯುವುದೇ ಇಲ್ಲಿಯ ಜನ್ರಿಗೆ ದೊಡ್ಡ ಕಾಯಕವಾಗಿದೆ. ಕೈಯಲ್ಲಿ ಕೋಲು ಹಿಡಿದು, ಪಟಾಕಿ ಹಚ್ಚುತ್ತ ಒಂದು ಕಡೆಯಿಂದ ಮತ್ತೊಂದು ಕಡೆ ಮಂಗನನ್ನು ಓಡಿಸುತ್ತಿದ್ದಾರೆ. ಅರಣ್ಯ ಸಿಬ್ಬಂದಿ, ಅರವಳಿಕೆ ತಜ್ಞರು, ಡೇರಿಂಗ್ ಟೀಮ್ ಎಲ್ಲರೂ ಮಂಗನನ್ನು ಹಿಡಿಯಲು ಪ್ರಯತ್ನ ಪಡ್ತಿದ್ದಾರೆ. ವಿಶೇಷ ಅಂದ್ರೆ ಒಂಟಿಯಾಗಿ ಓಡಾಡೋ ಮಹಿಳೆಯರನ್ನೇ ಕೋತಿ ಟಾರ್ಗೆಟ್ ಮಾಡಿ ಕಚ್ಚುತ್ತಿದೆ. ಒಟ್ಟಾರೆ, ಕೋತಿ ಕಾಟದಿಂದ ಗ್ರಾಮಸ್ಥರು ಹೈರಾಣಾಗಿದ್ದು, ಹೇಗಾದ್ರು ಮಂಗ ಸೆರೆ ಸಿಕ್ರೆ ಸಾಕಪ್ಪ ಅಂತ ಅಂದುಕೊಳ್ತಿದ್ದಾರೆ.

ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ

ಇದನ್ನೂ ಓದಿ: ಕಿರುತೆರೆ ಸೀರಿಯಲ್ ನಿರ್ದೇಶಕ ಅರವಿಂದ್​ ಕೌಶಿಕ್​ ಬಂಧನ: ನಿರ್ಮಾಪಕರಿಗೆ 73 ಲಕ್ಷ ರೂ. ವಂಚಿಸಿದ ಆರೋಪ

ಗೀತಮ್ ಕಾಲೇಜಿನ ಮೇಲೆ ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದ್ದಕ್ಕೆ ವಿದ್ಯಾರ್ಥಿನಿ ಸಾವು ಬಿಟ್ಟು ಬೇರೆ ಕಾರಣಗಳಿವೆಯೇ?

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ