ಮಳೆ ನಿಂತರೂ ನಿಲ್ಲದ ನೆರೆ ಸಂತ್ರಸ್ತರ ಪರದಾಟ; ಕಾರವಾರದಲ್ಲಿ 50 ಕ್ಕೂ ಹೆಚ್ಚು ಮನೆಗಳು ಕುಸಿತ

| Updated By: sandhya thejappa

Updated on: Jul 26, 2021 | 11:53 AM

ಸರ್ಕಾರ ಪರಿಹಾರ ನೀಡದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲರೂ ಗಂಜಿ ಕೇಂದ್ರದಲ್ಲಿದ್ದೇವೆ. ನಮಗೆ ಯಾರು ದಿಕ್ಕು ಅಂತ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಮಳೆ ನಿಂತರೂ ನಿಲ್ಲದ ನೆರೆ ಸಂತ್ರಸ್ತರ ಪರದಾಟ; ಕಾರವಾರದಲ್ಲಿ 50 ಕ್ಕೂ ಹೆಚ್ಚು ಮನೆಗಳು ಕುಸಿತ
More than 50 homes have collapsed in karawara
Follow us on

ಕಾರವಾರ: ಸದ್ಯ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ನೆರೆ ಸಂತ್ರಸ್ತರ ಗೋಳಾಟ ನಿಂತಿಲ್ಲ. ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಮನೆಗಳು ಕುಸಿತವಾಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. 2019 ರ ಪರಿಹಾರವೇ ನಮಗೆ ಸಿಕ್ಕಿಲ್ಲ. ನಮ್ಮ ಅಂಗಡಿ ಮುಂಗಟ್ಟು ಎಲ್ಲವೂ ನೆಲಸಮವಾಗಿದೆ. ಸಾಲ ಶೂಲ ಮಾಡಿ ಅಂಗಡಿ ಮಾಡಿದ್ದೆವು. ಅದಕ್ಕೆ ಬಡ್ಡಿ ಕಟ್ಟಬೇಕು. ಜೀವನಕ್ಕೆ ಆಧಾರವಾಗಿದ್ದ ಅಂಗಡಿಯೇ ನೆಲಸಮವಾಗಿದೆ ಅಂತ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಸರ್ಕಾರ ಪರಿಹಾರ ನೀಡದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲರೂ ಗಂಜಿ ಕೇಂದ್ರದಲ್ಲಿದ್ದೇವೆ. ನಮಗೆ ಯಾರು ದಿಕ್ಕು ಅಂತ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ನೀರು ಬಿಡುಗಡೆ
ಕೊಪ್ಪಳ: ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆ ಜಲಾಶಯದಿಂದ 30 ಕ್ರಸ್ಟ್ ಗೇಟ್ಗಳ ಮೂಲಕ 86 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ನದಿಗೆ ನೀರು ಬಿಟ್ಟ ಹಿನ್ನೆಲೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ನದಿ ದಂಡೆಗೆ ಇರುವ ನವವೃಂದಾವನಕ್ಕೆ ಸಂಪರ್ಕ ಕಡಿತವಾಗಿದೆ. ಕೃಷ್ಣದೇವರಾಯ ಸಮಾಧಿ ಕೂಡಾ ಮುಳುಗಡೆಯಾಗಿದೆ.

ಇದನ್ನೂ ಓದಿ

ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕ; ರಕ್ಷಣೆಗೆ ಸ್ಥಳೀಯರ ಹರಸಾಹಸ

ಕೊಡಗು: ದನಗಳನ್ನು ಕರೆತರಲು ಹೋದ ವ್ಯಕ್ತಿ ಮೇಲೆ ಎರಗಿದ ಕಾಡಾನೆ; ಏಕಾಏಕಿ ದಾಳಿಯಿಂದ ಕಾರ್ಮಿಕ ಸಾವು

(More than 50 homes have collapsed in karawara)