ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕ; ರಕ್ಷಣೆಗೆ ಸ್ಥಳೀಯರ ಹರಸಾಹಸ

ಜಿಲ್ಲೆಯ ಅಥಣಿ ತಾಲೂಕಿನ 22 ಗ್ರಾಮಗಳು ಮುಳಗಡೆಯಾಗಿವೆ. ಈ ನಡುವೆ ಕೃಷ್ಣಾ ನದಿ ನೀರು ಏರಿಕೆಯಾಗಿದ್ದಕ್ಕೆ ಹುಲಗವಾಳಿ ಗ್ರಾಮದ ಯುವಕ ಕುಮಾರ್ ಎಂಬಾತ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ.

ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕ; ರಕ್ಷಣೆಗೆ ಸ್ಥಳೀಯರ ಹರಸಾಹಸ
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಿಸಲಾಗಿದೆ
Follow us
TV9 Web
| Updated By: sandhya thejappa

Updated on:Jul 26, 2021 | 10:59 AM

ಬೆಳಗಾವಿ: ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸದ್ಯ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಕೋಯ್ನಾ ಡ್ಯಾಂನಿಂದ 40 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಟ್ಟಿದ್ದು, ಇದರಿಂದ ಕೃಷ್ಣಾ ನದಿಯಲ್ಲಿ 4 ಲಕ್ಷ 10 ಸಾವಿರ ಕ್ಯೂಸೆಕ್ ಹೊರ ಹರಿವಿದೆ. ಇನ್ನೂ ಕೂಡ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಹೀಗಾಗಿ ಕೃಷ್ಣಾ ನದಿ ತಟದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಜಿಲ್ಲೆಯ ಅಥಣಿ ತಾಲೂಕಿನ 22 ಗ್ರಾಮಗಳು ಮುಳಗಡೆಯಾಗಿವೆ. ಈ ನಡುವೆ ಕೃಷ್ಣಾ ನದಿ ನೀರು ಏರಿಕೆಯಾಗಿದ್ದಕ್ಕೆ ಹುಲಗವಾಳಿ ಗ್ರಾಮದ ಯುವಕ ಕುಮಾರ್ ಎಂಬಾತ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ. ಅಥಣಿ ತಾಲೂಕಿನ ಹುಲಿ ಗಡ್ಡಿ ಗ್ರಾಮದಲ್ಲಿದ್ದ ಜಮೀನಿಗೆ ಹೋಗಿದ್ದ ಯುವಕ ಕುಮಾರ್, ನೀರು ಏರಿಕೆಯಾಗಿದ್ದನ್ನ ಗಮನಿಸಿ ಹುಲಗಬಾಳಿಯಲ್ಲಿದ್ದ ಮನೆಗೆ ವಾಪಾಸ್ ಆಗುತ್ತಿದ್ದ. ಮುಳುಗಿದ ಸೇತುವೆಯಲ್ಲೇ ನಡೆದುಕೊಂಡು ಬರುತ್ತಿದ್ದ ಕುಮಾರ್ ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಸಿಕ್ಕಿಕೊಂಡಿದ್ದ. ಈಜಲು ಆಗದೇ ಕೊಚ್ಚಿಕೊಂಡು ಹೋಗುತ್ತಿದ್ದ.

ಹುಲಗಬಾಳಿ ಗ್ರಾಮದ ಕೆಲ ಯುವಕರು ಗಮನಿಸಿ ಆತನ ರಕ್ಷಣೆಗೆ ಧಾವಿಸಿದ್ದಾರೆ. ತಕ್ಷಣ ಹಗ್ಗ ತಂದು ಕುಮಾರ್​ಗೆ ಹಗ್ಗ ನೀಡಿ ಎಳೆಯಲು ಮುಂದಾಗಿದ್ದಾರೆ. ಆದರೆ ನೀರಿನ ಪ್ರಮಾಣ ಜಾಸ್ತಿ ಇರುವ ಕಾರಣಕ್ಕೆ ಆತನ ಬಳಿ ಹಗ್ಗ ಮುಟ್ಟಿಸಲು ಆಗಿಲ್ಲ. ಇದೇ ವೇಳೆ ಪರಶುರಾಮ್ ಕಾಂಬ್ಳೆ ಎಂಬಾತ ತನ್ನ ಜೀವವನ್ನ ಪಣಕ್ಕಿಟ್ಟು ರಭಸವಾಗಿ ಹರಿಯುವ ನದಿಗೆ ಇಳಿದು ಕುಮಾರ್ಗೆ ಹಗ್ಗ ನೀಡಿದ್ದಾನೆ. ಕುಮಾರ್ ಹಗ್ಗ ಹಿಡಿದುಕೊಳ್ಳುತ್ತಿದ್ದಂತೆ ದಂಡೆ ಮೇಲಿದ್ದ ಯುವಕರು ಎಳೆದುಕೊಂಡು ಆತನ ಜೀವ ಉಳಿಸಿದ್ದಾರೆ. ಮತ್ತೊರ್ವ ವ್ಯಕ್ತಿಯ ರಕ್ಷಣೆ ಕೃಷ್ಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ವ್ಯಕ್ತಿ ಕೊಚ್ಚಿಕೊಂಡು ಹೋಗಿ ಮುಳ್ಳಿನ ಗಿಡದಲ್ಲಿ ಸಿಲುಕಿದ್ದ. ನದಿ ಮಧ್ಯೆ ಮುಳ್ಳಿನ ಗಿಡಗಂಟೆಯಲ್ಲಿ‌ ಸಿಲುಕಿದ್ದ. ದೋಣಿ ಮೂಲಕ ಸ್ಥಳೀಯ ಯುವಕರು ತೆರಳಿ ವ್ಯಕ್ತಿಯನ್ನ ರಕ್ಷಣೆ ಮಾಡಿದ್ದಾರೆ.‌

ಪ್ರವಾಹದಲ್ಲಿ ಸಿಲುಕಿದ್ದ ನಾಯಿ ಮರಿ ರಕ್ಷಣೆ ಅಥಣಿ ತಾಲೂಕಿನ‌ ಹಳ್ಯಾಳ ಗ್ರಾಮದ ಬಳಿ ಪ್ರವಾಹದಲ್ಲಿ ಸಿಲುಕಿದ್ದ ನಾಯಿ ಮರಿಯನ್ನು ರಕ್ಷಿಸಲಾಗಿದೆ. ಪ್ರಹಾದಲ್ಲಿ ಪೊಲೀಸ್ ಪೇದೆ ಆಲಗೂರ ಹಾಗೂ ಇತರರಿಂದ ನಾಯಿ ಮರಿಯನ್ನು ರಕ್ಷಣೆ ಮಾಡಲಾಗಿದೆ.

ನೀರಿನಲ್ಲಿ ಹೋಗುತ್ತಿದ್ದ ನಾಯಿಯನ್ನು ರಕ್ಷಿಸಲಾಗಿದೆ

ಇದನ್ನೂ ಓದಿ

ತುಂಗಭದ್ರಾ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುಗಡೆ; ನದಿ ಪಾತ್ರದಲ್ಲಿದ್ದ ಪುರಂದರ ದಾಸರ ಮಂಟಪ, ಸ್ನಾನಘಟ್ಟ ಮುಳುಗಡೆ

Belagavi Flood: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ; 30ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆ, ನೀರಿನಲ್ಲಿ ತೇಲಿ ಹೋದ ಜಾನುವಾರುಗಳು

(A young man was washed away by Krishna river at Belagavi)

Published On - 10:19 am, Mon, 26 July 21