ಬೆಳಗಾವಿಯಲ್ಲಿ ಮುಂದುವರಿದ ಪ್ರವಾಹ ಭೀತಿ; ಗ್ರಾಮವೊಂದರಲ್ಲಿ 300ಕ್ಕೂ ಹೆಚ್ಚು ಮನೆಗಳು ಜಲಾವೃತ

ಕೃಷ್ಣಾ ನದಿಯ ನೀರು ನುಗ್ಗಿ ಜಿಲ್ಲೆಯ ರಾಯಬಾಗ ತಾಲೂಕಿನ ಬಿರಡಿ ಗ್ರಾಮ ಜಲಾವೃತವಾಗಿದೆ. ಗ್ರಾಮದ ಸುಮಾರು 300ಕ್ಕೂ ಹೆಚ್ಚು ಮನೆ ಜಲಾವೃತವಾಗಿವೆ. ಹೀಗಾಗಿ ಅಗತ್ಯ ವಸ್ತುಗಳೊಂದಿಗೆ ಜನರು ಗ್ರಾಮ ತೊರೆಯುತ್ತಿದ್ದಾರೆ.

ಬೆಳಗಾವಿಯಲ್ಲಿ ಮುಂದುವರಿದ ಪ್ರವಾಹ ಭೀತಿ; ಗ್ರಾಮವೊಂದರಲ್ಲಿ 300ಕ್ಕೂ ಹೆಚ್ಚು ಮನೆಗಳು ಜಲಾವೃತ
ಜಲಾವೃತವಾದ ಮನೆಗಳು, ಮನೆಗಳನ್ನು ಬಿಟ್ಟು ಹೋಗುತ್ತಿರುವ ಗ್ರಾಮಸ್ಥರು

ಬೆಳಗಾವಿ: ಕೃಷ್ಣಾ ನದಿ ನೀರಿನ ಹರಿವು ಇನ್ನೂ ಕಡಿಮೆಯಾಗದ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಅಥಣಿ ತಾಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಹುಲಗಬಾಳ, ಇಂಗಳಗಾಂವ್ ಗ್ರಾಮಗಳು ನಡುಗಡ್ಡೆಯಂತಾಗಿದ್ದು, ಹಲ್ಯಾಳ-ದರೂರ್ ಸೇತುವೆ ಮೇಲೆ ನೀರು ಹರಿಯುತ್ತಿದೆ. ದರೂರ್ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಟ್ ಆಗಿದೆ. ಜಲಾವೃತವಾದ ಸೇತುವೆ ಮೇಲೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.

ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜನರಿಗೆ ಪ್ರವಾಹದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಜನರು ಜಲಾವೃತವಾದ ಗ್ರಾಮಗಳಲ್ಲಿನ ಮನೆಗಳನ್ನು ತೊರೆದು ಬಯಲಿನಲ್ಲಿಯೇ ಠಿಕಾಣಿ ಹೂಡಿದ್ದಾರೆ.

ಕೃಷ್ಣಾ ನದಿಯ ನೀರು ನುಗ್ಗಿ ಜಿಲ್ಲೆಯ ರಾಯಬಾಗ ತಾಲೂಕಿನ ಬಿರಡಿ ಗ್ರಾಮ ಜಲಾವೃತವಾಗಿದೆ. ಗ್ರಾಮದ ಸುಮಾರು 300ಕ್ಕೂ ಹೆಚ್ಚು ಮನೆ ಜಲಾವೃತವಾಗಿವೆ. ಹೀಗಾಗಿ ಅಗತ್ಯ ವಸ್ತುಗಳೊಂದಿಗೆ ಜನರು ಗ್ರಾಮ ತೊರೆಯುತ್ತಿದ್ದಾರೆ. ಬಟ್ಟೆ, ಹಾಸಿಗೆ, ದವಸ ಧಾನ್ಯಗಳು, ಸೋಪಾ, ತಿಜೋರಿ ಸಮೇತ ಗ್ರಾಮಸ್ಥರು ಊರು ಬಿಡುತ್ತಿದ್ದಾರೆ.

ಸಿದ್ದರಾಮಯ್ಯ ವ್ಯಂಗ್ಯ
2019ರಲ್ಲಿ ಪ್ರವಾಹ ಬಂದಾಗ ಪರಿಹಾರ ಕೊಡಲಿಲ್ಲ. ಆಗ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಲೇ ಇಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಕಾಂಗ್ರೆಸ್‌ನಿಂದ ತಂಡಗಳನ್ನು ರಚನೆ ಮಾಡಲಾಗಿದೆ. ಹೀಗಾಗಿ ನಾನು ಕೂಡ ಬೆಳಗಾವಿ ಜಿಲ್ಲೆಗೆ ಬಂದಿದ್ದೇನೆ. ಆಗಸ್ಟ್ 1ರಂದು ಕಾರವಾರಕ್ಕೆ ಭೇಟಿ ನೀಡುತ್ತೇನೆ. ಕಾಂಗ್ರೆಸ್‌ನ ಟೀಂಗಳು ಜಿಲ್ಲೆಗೆ ಹೋಗಿ ಪರಿಶೀಲಿಸುತ್ತೆ. ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ನೀಡುತ್ತಾರೆ. ಎಷ್ಟು ಪರಿಹಾರ ನೀಡಬೇಕೆಂದು ವರದಿಯನ್ನ ನೀಡುತ್ತೇವೆ. ಅಧಿವೇಶನ ಕರೆದು ಪ್ರವಾಹ ಬಗ್ಗೆ ಚರ್ಚೆಗೆ ಆಗ್ರಹಿಸ್ತೇವೆ. ಅನಗತ್ಯ ಖರ್ಚು ಕಡಿಮೆ ಮಾಡಿ ಪರಿಹಾರ ನೀಡಬೇಕು. ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದು ಹೇಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈಗ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಈಗ ಎಲ್ಲಿಂದ ಪರಿಹಾರ ತಂದು ಕೊಡ್ತಾರೆಂದು ವ್ಯಂಗ್ಯವಾಡಿದ್ದಾರೆ.

ಮಳೆ ಕಡಿಮೆಯಾದರೂ ಪ್ರವಾಹ ಮಾತ್ರ ಇನ್ನೂ ತಗ್ಗಿಲ್ಲ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರೂಗಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಜೊತೆಗೆ ಸುಮಾರು 800 ಎಕರೆಯಷ್ಟು ಕಬ್ಬು ಬೆಳೆ ಜಲಾವೃತವಾಗಿದೆ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿ ರೂಗಿ ಗ್ರಾಮದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನೀರಿನಲ್ಲಿ ನಿಂತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ

Fish: ಮೀನು ಖರೀದಿಸುವುದು ಹೇಗೆ? ಕಣ್ಣಲೇ ಮೀನಿನ ತಾಜಾತನ ತಿಳಿಯಲು ಈ ಸಲಹೆಗಳನ್ನು ಅನುಸರಿಸಿ

Karnataka Weather: ಬೆಂಗಳೂರು, ಕರಾವಳಿ, ಮಲೆನಾಡು ಭಾಗದಲ್ಲಿ ಇಂದು ಮಳೆ ಸಾಧ್ಯತೆ; ಕೆಲವೆಡೆ ಯೆಲ್ಲೋ ಅಲರ್ಟ್​

(Fear of Flooding continues in Belagavi and In one village, more than 300 houses are covered by water)

Click on your DTH Provider to Add TV9 Kannada