AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fish: ಮೀನು ಖರೀದಿಸುವುದು ಹೇಗೆ? ಕಣ್ಣಲೇ ಮೀನಿನ ತಾಜಾತನ ತಿಳಿಯಲು ಈ ಸಲಹೆಗಳನ್ನು ಅನುಸರಿಸಿ

ಮಾರುಕಟ್ಟೆಯಲ್ಲಿ ಒಳ್ಳೆಯದು ಎನಿಸುವ ಮೀನು ಮನೆಗೆ ತಂದಾಗ ಹಾಳಾಗುವುದು ಹೇಗೆ? ತಾಜಾ ಮೀನು ಎಂದು ಗುರುತಿಸುವುದು ಹೇಗೆ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

Fish: ಮೀನು ಖರೀದಿಸುವುದು ಹೇಗೆ? ಕಣ್ಣಲೇ ಮೀನಿನ ತಾಜಾತನ ತಿಳಿಯಲು ಈ ಸಲಹೆಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 27, 2021 | 8:56 AM

Share

ಮೀನು ಕಡಿಮೆ ಕೊಬ್ಬಿನಾಂಶ ಮತ್ತು ಅಧಿಕ ಪೋಷಕಾಂಶಗಳನ್ನು ಹೊಂದಿದೆ. ವಾರಕ್ಕೆ ಎರಡು ಬಾರಿಯಾದರೂ ಮೀನುಗಳನ್ನು ಸೇವಿಸಿದರೆ, ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಬಹುದು. ಮೀನು ತಿನ್ನುವುದು ಬಿಪಿ, ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ನಾವು ಇತ್ತೀಚೆಗೆ ಖರೀದಿಸುವ ಮೀನು ಅಷ್ಟು ರುಚಿಯಾಗಿರುವುದಿಲ್ಲ. ಅಲ್ಲದೇ ಬೇಗ ಹಾಳಾಗುತ್ತದೆ.  ಈ ರೀತಿಯ ಮೀನು ಸೇವಿಸುವುದರಿಂದ ಜೀರ್ಣಾಂಗ ಸಮಸ್ಯೆ ಎದುರಾಗುತ್ತದೆ. ಹಾಗಿದ್ದರೆ ಮಾರುಕಟ್ಟೆಯಲ್ಲಿ ಒಳ್ಳೆಯದು ಎನಿಸುವ ಮೀನು ಮನೆಗೆ ತಂದಾಗ ಹಾಳಾಗುವುದು ಹೇಗೆ? ತಾಜಾ ಮೀನು ಎಂದು ಗುರುತಿಸುವುದು ಹೇಗೆ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

ತಾಜಾ ಮೀನು ಖರೀದಿಸುವಾಗ ಈ ಸಲಹೆಗಳನ್ನು ಅನುಸರಿಸಿ

ವಾಸನೆ ಮೀನು ತಾಜಾವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಅವುಗಳ ವಾಸನೆ ಬಗ್ಗೆ ಗಮನಹರಿಸುವುದು ಮುಖ್ಯ. ಇದು ನಿಮಗೆ ಸ್ವಲ್ಪ ವಿಚಿತ್ರವೆನಿಸಿದರೂ ಸತ್ಯ. ನೀವು ಮೀನನ್ನು ಪರೀಕ್ಷಿಸುವ ಕಾಲಕ್ಕೆ ಸಮುದ್ರದ ನೀರು ಮಿಶ್ರಿತ ವಾಸನೆ ಬಂದರೆ ಅವು ತಾಜಾ ಮೀನು ಎಂದರ್ಥ. ದುರ್ವಾಸನೆ ಬಂದರೆ ಅವು ಖಂಡಿತವಾಗಿಯೂ ಹಾಳಾದ ಮೀನುಗಳು ಎಂದು ತಿಳಿಯಿರಿ.

ಮೀನಿನ ಕಣ್ಣುಗಳು ಮೀನಿನ ಕಣ್ಣುಗಳ ಮೇಲೆ ಬಿಳಿ ಲೇಪನವಿದ್ದರೆ, ಒಂದು ವೇಳೆ ಕಣ್ಣುಗಳು ಒಳ ಹೋದಂತೆ ಇದ್ದರೂ ಅಂತಹ ಮೀನುಗಳು ಹಾನಿಗೊಳಗಾಗಿರುತ್ತದೆ ಎಂದರ್ಥ. ತಾಜಾ ಮೀನುಗಳು ಯಾವಾಗಲೂ ಪ್ರಕಾಶಮಾನವಾದ ಕಣ್ಣುಗಳನ್ನು ಹೊಂದಿರುತ್ತದೆ.

ಮೀನಿನ ಆಕಾರ ಮೀನು ಖರೀದಿಸುವಾಗ ಅವುಗಳ ಆಕಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ತಾಜಾ ಮೀನಿನ ವಿನ್ಯಾಸವು ಒಳ ಮತ್ತು ಹೊರಭಾಗದಲ್ಲಿ ಏಕರೂಪವಾಗಿ ದೃಢವಾಗಿರುತ್ತದೆ. ತಾಜಾ ಮೀನಿನ ಮಾಂಸ ಸ್ವಚ್ಛವಾಗಿ ಕಾಣುತ್ತದೆ. ಹಾನಿಗೊಳಗಾದ ಮೀನಿನ ಚರ್ಮದ ಮೇಲೆ ಸುಕ್ಕುಟ್ಟಿದ ಅಥವಾ ಮುದ್ದೆಯಾದಂತೆ ಗೋಚರವಾಗುತ್ತದೆ.

ಮೀನಿನ ಬಣ್ಣ ಸಮುದ್ರದಲ್ಲಿ ಸಿಗುವ ಆಹಾರ ಅಥವಾ ಮೀನುಗಳನ್ನು ಆರಿಸುವಾಗ, ಮೊದಲು ಅವುಗಳ ಬಣ್ಣವನ್ನು ನೋಡಬೇಕು. ಮೀನಿನ ಬಣ್ಣ ಯಾವಾಗಲೂ ಸ್ಪಷ್ಟವಾಗಿರುತ್ತದೆ. ಮೀನು ಹೊಳಪು ಕಳೆದುಕೊಂಡಿರದಿದ್ದರೆ ಅದು ತಾಜಾ ಎಂದರ್ಥ.

ಕಿವಿರುಗಳನ್ನು ಗಮನಿಸಿ ಮೀನು ತಾಜಾ ಎಂದು ಖಚಿತಪಡಿಸಿಕೊಳ್ಳಲು, ಕಿವಿರುಗಳನ್ನು ಮೇಲಕ್ಕೆತ್ತಿ ಮತ್ತು ಮೀನಿನ ಒಳಭಾಗ ಗುಲಾಬಿ ಬಣ್ಣದ್ದೇ ಎಂದು ನೋಡಿ. ವಾಸ್ತವವಾಗಿ, ತಾಜಾ ಮೀನಿನ ವಿನ್ಯಾಸವು ಸ್ವಲ್ಪ ತೇವವಾಗಿರುತ್ತದೆ.

ಇದನ್ನೂ ಓದಿ: Healthy Heart: ಹೃದಯ ಬಡಿತದ ಮೇಲೆ ನಮ್ಮ ಆರೋಗ್ಯ ನಿಂತಿದೆ; ಈ ರೋಗ ಲಕ್ಷಣಗಳ ಬಗ್ಗೆ ಸದಾ ಎಚ್ಚರ ವಹಿಸಿ

Health Tips: ಆಲ್ಕೋಹಾಲ್ ಜತೆಗೆ ಈ 5 ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ