ಹಸಿರು ಮೆಣಸಿನಕಾಯಿಗಳನ್ನು ವಾರಗಟ್ಟಲೆ ಸಂರಕ್ಷಿಸುವ ವಿಧಾನ ತಿಳಿದಿದೆಯೇ? ಇಲ್ಲಿದೆ ಕೆಲವು ಟಿಪ್ಸ್​

ಹಸಿರು ಮೆಣಸು: ಮೆಣಸಿನಕಾಯಿ ಖಾರದ ಜೊತೆಗೆ ಜೀವಸತ್ವಗಳ ಉತ್ತಮ ಮೂಲವಾಗಿದೆ. ಹಸಿರು ಮೆಣಸಿನಕಾಯಿ ಕೆಂಪು ಮೆಣಸಿನಕಾಯಿಗೆ ಹೋಲಿಸಿದರೆ ಹೆಚ್ಚು ಪ್ರಯೋಜನಕಾರಿ. ಮೆಣಸಿನಕಾಯಿಗಳನ್ನು, ಇತರ ಎಲ್ಲಾ ತರಕಾರಿಗಳಂತೆ(Vegetables), ಸಂರಕ್ಷಿಸಿ ತಾಜಾವಾಗಿ ಸೇವಿಸಬೇಕು.

ಹಸಿರು ಮೆಣಸಿನಕಾಯಿಗಳನ್ನು ವಾರಗಟ್ಟಲೆ ಸಂರಕ್ಷಿಸುವ ವಿಧಾನ ತಿಳಿದಿದೆಯೇ? ಇಲ್ಲಿದೆ ಕೆಲವು ಟಿಪ್ಸ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jul 27, 2021 | 3:09 PM

ಮಸಾಲೆಯುಕ್ತ ಆಹಾರವನ್ನು ಇಷ್ಟಪಡುವವರಿಗೆ ಹಸಿರು ಮೆಣಸಿನಕಾಯಿಗಳು(Green Chilli) ಹೆಚ್ಚು ಇಷ್ಟವಾಗುತ್ತವೆ. ಅದರಲ್ಲಿಯೂ ಯುವಕರು ಅಥವಾ ಯುವತಿಯರು ಸ್ಪೈಸಿ ತಿಂಡಿಗಳನ್ನು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಾರೆ. ಹೆಚ್ಚು ಖಾರದ ಹಸಿರು ಮೆಣಸು ಅಡುಗೆಯಲ್ಲಿ ಸ್ಪೈಸಿ ಜತೆಗೆ ಒಳ್ಳೆಯ ರುಚಿಯನ್ನು ನೀಡುತ್ತದೆ. ಹಾಗಿರುವಾಗ ಅಡುಗೆಯಲ್ಲಿ ಹೆಚ್ಚು ಬಳಸುವ ಹಸಿರು ಮೆಣಸಿನ ಶೇಖರಣೆ ಹೇಗೆ? ಎರಡರಿಂದ ಮೂರು ದಿನಕ್ಕೆ ಕೊಳೆತು ಹೋಗುವ ಹಸಿರು ಮೆಣಸು ಒಂದು ವಾರದವರೆಗೆ ಹಸಿರಾಗಿರುವಂತೆ ನೋಡಿಕೊಳ್ಳುವುದು ಹೇಗೆ ಎಂಬ ಕೆಲವು ಟಿಪ್ಸ್​ಗಳು ಇಲ್ಲಿವೆ.

ಮೆಣಸಿನಕಾಯಿ ಖಾರದ ಜೊತೆಗೆ ಜೀವಸತ್ವಗಳ ಉತ್ತಮ ಮೂಲವಾಗಿದೆ. ಹಸಿರು ಮೆಣಸಿನಕಾಯಿ ಕೆಂಪು ಮೆಣಸಿನಕಾಯಿಗೆ ಹೋಲಿಸಿದರೆ ಹೆಚ್ಚು ಪ್ರಯೋಜನಕಾರಿ. ಮೆಣಸಿನಕಾಯಿಗಳನ್ನು, ಇತರ ಎಲ್ಲಾ ತರಕಾರಿಗಳಂತೆ(Vegetables), ಸಂರಕ್ಷಿಸಿ ತಾಜಾವಾಗಿ ಸೇವಿಸಬೇಕು. ನೀವು ಅವುಗಳನ್ನು ಒಂದು ವಾರ ಫ್ರಿಜ್ ನಲ್ಲಿ ಸಂಗ್ರಹಿಸಿದರೆ ಅವು ಹಾಳಾಗುತ್ತವೆ. ಈ ಕಾರಣಕ್ಕಾಗಿ, ಹೆಚ್ಚಿನ ಜನರು ಕಡಿಮೆ ಮೆಣಸಿನಕಾಯಿಗಳನ್ನು ಖರೀದಿಸುತ್ತಾರೆ ಅಥವಾ ಹೆಚ್ಚಿನ ದಿನಗಳವರೆಗೆ ಅವುಗಳನ್ನು ಸಂರಕ್ಷಿಸುವ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ.

ಮೆಣಸಿನಕಾಯಿಗಳನ್ನು ಫ್ರಿಡ್ಜ್​ನಲ್ಲಿ ಇಟ್ಟ ನಂತರವೂ ಅವುಗಳನ್ನು ಸಂರಕ್ಷಿಸುವ ಕೆಲವು ಸಲಹೆಗಳು:

* ಮಾರುಕಟ್ಟೆಯಿಂದ ಮೆಣಸಿನಕಾಯಿಗಳನ್ನು ಖರೀದಿಸುವಾಗ, ಗೊಂಚಲಿನಲ್ಲಿ ಯಾವುದೇ ಕೊಳೆತ ಮೆಣಸು ಇಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು

* ಶೇಖರಿಸಿಡುವ ಮೊದಲು ಮೆಣಸಿನಕಾಯಿಯನ್ನು ನೀರಿನಿಂದ ತೊಳೆಯಬೇಕು ಮತ್ತು ನಂತರ ಅವುಗಳನ್ನು ಅರ್ಧ ಘಂಟೆಯವರೆಗೆ ತಣ್ಣನೆಯ ನೀರಿನಲ್ಲಿ ನೆನೆಸಿಡಬೇಕು

*ಎಲ್ಲಾ ಹಸಿರು ಮೆಣಸಿನಕಾಯಿಗಳನ್ನು ನೀರಿನಿಂದ ತೆಗೆದುಕೊಂಡು ಕಾಗದದ ಟವಲ್ ಬಳಸಿ ಒಣಗಿಸಿ

*ಯಾವುದೇ ಮೆಣಸಿನಕಾಯಿ ಕೆಟ್ಟದ್ದಾಗಿದ್ದರೆ ಅಥವಾ ಕೊಳೆತಿದ್ದರೆ ಅದನ್ನು ಅರ್ಧದಷ್ಟು ಕತ್ತರಿಸಿ

*ಮೆಣಸಿನಕಾಯಿಗಳನ್ನು ಬಾಳೆ ಎಲೆಗಳಲ್ಲಿ ಸುತ್ತಿ ಜಿಪ್ಲಾಕ್ ಚೀಲದಲ್ಲಿ ಫ್ರಿಜ್ ನಲ್ಲಿ ಇಡಬೇಕು. ಇದನ್ನು ಮಾಡುವುದರಿಂದ ಅವು ನೇರವಾಗಿ ತಣ್ಣಗಾಗುವುದನ್ನು ತಡೆಯುತ್ತದೆ.

ಇದನ್ನೂ ಓದಿ:

Egg Curry: ಸಾವಜಿ ಸ್ಟೈಲ್ ಎಗ್​ ಕರಿ ಇಂದೇ ಮಾಡಿ ಸವಿಯಿರಿ

Health Tips: ಅಂಗೈ ಮೇಲೆ ಅರಳುವ ಮೆಹಂದಿ ಅಂದಕ್ಕಷ್ಟೇ ಸೀಮಿತ ಅಲ್ಲ, ಇದರ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಿರಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ