Car- Deer Accident: ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಜಿಂಕೆ, ಮುಂದೇನಾಯ್ತು?

Car- Deer Accident: ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಜಿಂಕೆ, ಮುಂದೇನಾಯ್ತು?
ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಜಿಂಕೆ, ಮುಂದೇನಾಯ್ತು?

ಟಾಟಾ ಕಂಪನಿಯ ಕಾರು ಕಲ್ಕುಣಿ ಕ್ರಾಸ್ ಬಳಿ ಚಲಿಸುತ್ತಿದ್ದಾಗ ಜಿಂಕೆ ಏಕಾಏಕಿ ರಸ್ತೆಯಲ್ಲಿ ಅಡ್ಡಬಂದಿದೆ. ಕಾರಿಗೆ ಡಿಕ್ಕಿ ಹೊಡೆದು, ಜಿಂಕೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಹೆಚ್ಚು ಡ್ಯಾಮೇಜ್ ಆಗಿದೆ.

TV9kannada Web Team

| Edited By: sadhu srinath

Apr 26, 2022 | 4:52 PM

ಕಾರವಾರ: ವೇಗವಾಗಿ ಚಲಿಸುತ್ತಿದ್ದ ಕಾರಿಗೆ ಜಿಂಕೆ ಅಚಾನಕ್ಕಾಗಿ ಡಿಕ್ಕಿ ಹೊಡೆದಿದ್ದು, ಅದು ಸ್ಥಳದಲ್ಲೇ ಅಸುನೀಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ರಾಜ್ಯ ಹೆದ್ದಾರಿ-93ರ ಕಲ್ಕುಣಿ ಕ್ರಾಸ್ ಬಳಿ ಈ ಆಕಸ್ಮಿಕ ಘಟನೆ ನಡೆದಿದೆ. ಅಂದಾಜು 10 ವರ್ಷ ಪ್ರಾಯದ ಗಂಡು ಜಿಂಕೆ ಅಪಘಾತದಲ್ಲಿ ಕೊನೆಯುಸಿರೆಳೆದಿದೆ. ಟಾಟಾ ಕಂಪನಿಯ ಕಾರು ಕಲ್ಕುಣಿ ಕ್ರಾಸ್ ಬಳಿ ಚಲಿಸುತ್ತಿದ್ದಾಗ ಜಿಂಕೆ ಏಕಾಏಕಿ ರಸ್ತೆಯಲ್ಲಿ ಅಡ್ಡಬಂದಿದೆ. ಕಾರಿಗೆ ಡಿಕ್ಕಿ ಹೊಡೆದು, ಜಿಂಕೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಹೆಚ್ಚು ಡ್ಯಾಮೇಜ್ ಆಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಸುನೀಗಿದ ಜಿಂಕೆಯನ್ನು ಶವಪರೀಕ್ಷೆಗಾಗಿ ಅರಣ್ಯ ಸಿಬ್ಬಂದಿ ಸಿದ್ಧಾಪುರದ ಅರಣ್ಯಾಧಿಕಾರಿ ಕಚೇರಿಗೆ ಕೊಂಡೊಯ್ದಿದ್ದಾರೆ.

ಹಸು ಮೇಯಿಸುವಾಗ ಮಹಿಳೆ ಮೇಲೆ ಆನೆ ದಾಳಿ: ಮೈಸೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ಮುಂದುವರಿದಿದ್ದು, ಹಾಡಿ ಮಹಿಳೆಯ ಮೇಲೆ ಆನೆಯೊಂದು ದಾಳಿ‌ ಮಾಡಿದೆ. ಕಾಡಿನಿಂದ ನಾಡಿಗೆ ಬಂದಿರುವ ಆನೆಗಳು ದಿಕ್ಕಾಪಾಲಾಗಿ ಗ್ರಾಮದಲ್ಲಿ ಓಡಾಡುತ್ತಿವೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಅದ್ವಾಳ ಗ್ರಾಮದ ಕೆರೆ ಬಳಿ ಹಸು ಮೇಯಿಸುತ್ತಿದ್ದಾಗ ಮಹಿಳೆಯ ಮೇಲೆ ಆನೆ ದಾಳಿ ಮಾಡಿ, ಗಾಯಗೊಳಿಸಿದೆ. ಹರಳಳ್ಳಿ ಗ್ರಾಮದ 55 ವರ್ಷ ಮಹಿಳೆ ಪುಟ್ಟಲಕ್ಷ್ಮಮ್ಮ ಗಯಗೊಂಡವರು. ಈ ಮಧ್ಯೆ, ಆನೆಯನ್ನು ಕಾಡಿಗೆ ವಾಪಸ್ಸು ಕಳುಹಿಸಲು ಅರಣ್ಯ‌ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ದುಬಾರೆ ಬಳಿ ಕಾವೇರಿ ನದಿಯಲ್ಲಿ ಸುಳಿಗೆ ಸಿಲುಕಿ ಮಹಾರಾಷ್ಟ್ರ ಮೂಲದ ಬಾಲಕ ದುರ್ಮರಣ: ಸೋಮವಾರಪೇಟೆ (ಮಡಿಕೇರಿ): ಮಹಾರಾಷ್ಟ್ರದಿಂದ ಕುಟುಂಬಸ್ಥರ ಜತೆ ಪ್ರವಾಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಬಾಲಕ ದುಬಾರೆ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಹಾರಾಷ್ಟ್ರ ಮೂಲದ ಅಮಿತ್ ಮಹಾಜನ್(17) ಸಾವನ್ನಪ್ಪಿದ ನತದೃಷ್ಟ ಬಾಲಕ. ಈತ ನಾಸಿಕ್ ಜಿಲ್ಲೆಯ ಅನಂತಪುರ ಗ್ರಾಮದವ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ದುಬಾರೆ ಬಳಿ ನದಿಯಲ್ಲಿ ಈಜಲು ಇಳಿದಾಗ ಅಮಿತ್ ಮಹಾಜನ್ ಸುಳಿಗೆ ಸಿಲುಕಿ ದುರ್ಮರಣ ಹೊಂದಿದ್ದಾನೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ ಘಟನೆ ನಡೆದಿದೆ.

Follow us on

Related Stories

Most Read Stories

Click on your DTH Provider to Add TV9 Kannada