ದೇವಸ್ಥಾನದ ಮಹದ್ವಾರ ನಿರ್ಮಾಣಕ್ಕೆ ವಿರೋಧ: ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾದ ಅನ್ಯಕೋಮಿನ ಯುವಕರು; ಶಾಸಕ ಸುನೀಲ್ ನಾಯ್ಕ ಖಡಕ್ ಎಚ್ಚರಿಕೆ
ದೇವಸ್ಥಾನದ ಮಹದ್ವಾರ ನಿರ್ಮಾಣದ ವಿಚಾರಕ್ಕೆ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಭಟ್ಕಳದ ಸೋನಾರಕೇರಿಯಲ್ಲಿ ನಡೆದಿದೆ.
ಉತ್ತರ ಕನ್ನಡ: ದೇವಸ್ಥಾನದ ಮಹದ್ವಾರ ನಿರ್ಮಾಣದ ವಿಚಾರಕ್ಕೆ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಭಟ್ಕಳದ (Bhatkal) ಸೋನಾರಕೇರಿಯಲ್ಲಿ ನಡೆದಿದೆ. ಭಟ್ಕಳದ ನಿಚ್ಚಲಮಕ್ಕಿ ಶ್ರೀ ವೆಂಕಣರಮಣ ದೇವಸ್ಥಾನದ ಮಹದ್ವಾರ (Mahdwara) ನಿರ್ಮಾಣಕ್ಕೆ ಮುಂದಾಗಿದ್ದಾಗ, ಅನ್ಯಕೋಮಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಭಟ್ಕಳದ ಸೋನಾರಕೇರಿಯಲ್ಲಿ ಬಿಜೆಪಿ ಶಾಸಕ ಸುನೀಲ್ ನಾಯ್ಕ (Sunil Nayka) ತಮ್ಮ ಸ್ವಂತ ಖರ್ಚಿನಲ್ಲಿ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವೇಳೆ ಅನ್ಯಕೋಮಿನವರು ಮಹಾದ್ವಾರ ನಿರ್ಮಾಣ ಮಾಡಿದರೆ ನಾವು ಟಿಪ್ಪು ಗೇಟ್ ನಿರ್ಮಾಣ ಮಾಡುತ್ತೇವೆ ಎಂದು ಪಟ್ಟು ಹಿಡದಿದ್ದಾರೆ.
ದೇವಸ್ಥಾನಕ್ಕೆ ಹೋಗಲು ಭಟ್ಕಳದ ಹಳೆಬಸ್ ನಿಲ್ದಾಣದಿಂದ ಸುಲ್ತಾನ್ ಸ್ಟ್ರೀಟ್ ಮಾರ್ಗವಾಗಿ ಹೋಗಬೇಕಿದ್ದು, ಇಲ್ಲಿ ನೀವು ಮಹಾದ್ವಾರ ನಿರ್ಮಾಣ ಮಾಡಬೇಡಿ ಎಂದು ಅನ್ಯಕೋಮಿನ ಪಟ್ಟು ಹಿಡದಿದ್ದಾರೆ. ಅಲ್ಲದೇ ಅನ್ಯಕೋಮಿನ ಯುವಕರು ಸುಲ್ತಾನ್ ರಸ್ತೆ ಮದ್ಯದಲ್ಲಿ ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾದ್ದಾಗಿದ್ದು, ಟಿಪ್ಪು ಗೇಟ್ ನಿರ್ಮಾಣಕ್ಕೆ ರಾತ್ರೋ ರಾತ್ರಿ ಅಡಿಗಲ್ಲು ಹಾಕಿದ್ದರು.
ಕೂಡಲೆ ಎಚ್ಚೆತ್ತ ಪೊಲೀಸ್ ಇಲಾಖೆ ಟಿಪ್ಪು ಗೇಟ್ ನಿರ್ಮಾಣದ ಬೋಡ್೯ ತೆರವುಗೊಳಿಸಿದ್ದಾರೆ. ಟಿಪ್ಪು ಗೇಟ್ ನಿರ್ಮಾಣ ಮಾಡುತ್ತಿದ್ದ ಸ್ಥಳದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದ್ದು, ಭಟ್ಕಳ ನಗರದ ತುಂಬಾ ಪೊಲೀಸ್ ಬೀಗಿ ಬಂದೋಬಸ್ತ ಮಾಡಲಾಗಿದೆ.
ವಿವಾದದ ಹಿನ್ನೆಲೆ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಸುರೇಶ್.ಎಂ ಅವರು ಭಟ್ಕಳ ನಗರ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ , ಶಾಂತಿ ಭಂಗದಡಿ ದೂರು ದಾಖಲಿಸಿದ್ದಾರೆ. ನಿಚ್ಚಲಮಕ್ಕಿ ಶ್ರೀ ವೆಂಕಣರಮಣ ದೇವಸ್ಥಾನದ ಆಡಳಿತ ಕಮಿಟಿ ಸದಸ್ಯರು, ಗುತ್ತಿಗೆದಾರ ಲೋಕೇಶ್ ನಾಯ್ಕ ಹಾಗೂ ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾದ ಅಜಿಮುರ ರೆಹಮಾನ್ ,ಮೆಡಿಕಲ್ ಸಮಿ, ತಹಿಮುರ ವಿರುದ್ಧ ದೂರು ದಾಖಲಿಸಲಾಗಿದೆ.
ಟಿಪ್ಪು ಕಮಾನು ಯಾವುದೇ ಕಾರಣಕ್ಕೂ ಮಾಡಲು ಬಿಡೋಲ್ಲ: ಶಾಸಕ ಸುನಿಲ್ ನಾಯ್ಕ್
ಈ ಸಂಬಂಧ ಶಾಸಕ ಸುನಿಲ್ ನಾಯ್ಕ್ ಮಾತನಾಡಿ ನಿಚ್ಚಲಮಕ್ಕಿ ವೆಂಕಟರಮಣ ದೇವಾಲಯ ನಾನೂರು ವರ್ಷ ಇತಿಹಾಸ ಹೊಂದಿರುವ ಒಂದು ಸಮುದಾಯದ ಶಕ್ತಿ ಪೀಠವಾಗಿದೆ. ಸಮುದಾಯದ ಹಿರಿಯರ ಕೋರಿಕೆ ಮೇರೆಗೆ ನಾನು ದೇವಸ್ಥಾನದ ದ್ವಾರ ಮಂಟಪ ಮಾಡಿಸುತ್ತಾ ಇದ್ದೀನಿ. ಈಗಾಗಲೇ ಕಾಮಗಾರಿ ಆರಂಭವಾಗಿದೆ. ಭಟ್ಕಳದ ಅನ್ಯ ಕೋಮಿನವರಯ ಇದಕ್ಕೆ ವಿರೋಧ ವ್ಯಕ್ತಪಡಿತ್ತಿದ್ದಾರೆ ಎಂದು ಹೇಳಿದರು.
ನಾವು ಯಾರನ್ನು ನಿಲ್ಲಿಸಿ ಅಂತಾ ಹೇಳುತ್ತಿಲ್ಲ. ನಮ್ಮ ಧರ್ಮದ ದೇವಸ್ಥಾನದ ಮಹಾದ್ವಾರವನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ. ಒಂದು ಕಡೆ ಅವರು ಸೌಹಾರ್ದ ಮಾತುಗಳನ್ನ ಆಡುತ್ತಾರೆ ಇನ್ನೊಂದೆಡೆ ವಿರೋಧ ವ್ಯಕ್ತಪಡಿಸುತ್ತಾರೆ. ಇಸ್ಲಾಂನವರಿಗೆ ನಾನು ವಿನಂತಿ ಮಾಡುತ್ತೇನೆ ನೀವು ಇರೋದು ಪಾಕಿಸ್ಥಾನದಲ್ಲಿ ಅಲ್ಲ ಹಿಂದೂಸ್ಥಾನದಲ್ಲಿ. ನಾವೆಲ್ಲ ಒಗ್ಗಟ್ಟಾಗಿ ಸೇರಿ ದ್ವಾರ ಮಂಟಪ ಮಾಡಬೇಕು. ದುರುದ್ದೇಶದಿಂದ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನೀವು ಅನೇಕ ಕಟ್ಟಡ ಕಟ್ಟಿದ್ದೀರಿ ಅದಕ್ಕೆ ನಾವು ತೊಂದರೆ ಕೊಟ್ಟಿಲ್ಲ. ವೆಂಕಟರಮಣ ದೇವಸ್ಥಾನದ ದ್ವಾರ ಮಂಟಪ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಈ ಕೆಲಸವನ್ನು ನಾವು ಮುಗಿಸಿಯೇ ಮುಗಿಸುತ್ತೇವೆ. ಸುಲ್ತಾನ್ ಕಮಾನ್ ಮಾಡುವ ಪ್ರಶ್ನೆ ಇಲ್ಲ. ಟಿಪ್ಪು ಹೆಸರಲ್ಲಿ ಕಮಾನು ಮಾಡಿದರೆ ನನ್ನ ವಿರೋಧ ಇದೆ. ಟಿಪ್ಪು ಕಮಾನು ಯಾವುದೇ ಕಾರಣಕ್ಕೂ ಮಾಡಲು ಬಿಡೋಲ್ಲ. ಅದಕ್ಕೆ ಸಂಪೂರ್ಣ ವಿರೋಧ ಇದೆ. ಬೇಕಾದರೆ ನಿಮ್ಮ ಖಾಸಗಿ ಜಾಗದಲ್ಲಿ ಮಾಡಿಕೊಳ್ಳಿ. ಸಾರ್ವಜನಿಕ ಜಾಗದಲ್ಲಿ ಅವಕಾಶ ಕೊಡೋದಿಲ್ಲ. ನಾವು ದೇವಾಲಯದ ಮುಂಭಾಗದಲ್ಲಿ ನಾವು ದ್ವಾರ ಮಾಡುತ್ತಾ ಇದ್ದೀವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಎಲ್ಲೋ ಒಂದು ಕಡೆ ಕಮಾನ್ ಮಾಡಲು ಹೋಗಿದ್ದಾರೆ. ನಾನು ಅವರಿಗೆ ಎಚ್ಚರಿಕೆ ಕೊಡುತ್ತೇನೆ. ದ್ವಾರ ಮಂಟಪಕ್ಕೆ ವಿರೋಧ ವ್ಯಕ್ತಪಡಿಸಿದರೆ ಪರಿಣಾಮ ಎದುರಿಸಬೇಕಾಗುತ್ತೆ. ಯಾವ ರೀತಿ ಪರಿಣಾಮ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಕಾದು ನೋಡಿ. ನೇರವಾಗಿ ನಾನು ಎಚ್ಚರಿಕೆ ಕೊಡುತ್ತೇನೆ. ಅನೇಕ ಕಟ್ಟಡಗಳನ್ನ ಪರವಾನಗಿ ಇಲ್ಲದೇ ನಿರ್ಮಾಣ ಮಾಡಿದ್ದಾರೆ, ಮುಂದೆ ಕಾದು ನೋಡಿ ಎಂದು ಎಚ್ಚರಿಗೆ ನೀಡಿದರು.
ಈ ವಿವಾದದ ಹಿಂದೆ ಭಟ್ಕಳ್ ತಂಜಿಮ್ ಸಂಸ್ಥೆ ಹಾಗೂ ಎಸ್ಡಿಪಿಐ ಇದೆ. ದೇವಾಲಯಗಳ ನಿರ್ಮಾಣಕ್ಕೆ ಅವರ ವಿರೋಧಿಸುತ್ತಿದ್ದಾರೆ. ಭಟ್ಕಳದಲ್ಲಿ ಹಿಂದುತ್ವ ತಖವೂರುವಂತೆ ಮಾಡೇ ಮಾಡುತ್ತೇವೆ. ಅವರು ಮಸಿದಿ ಕಟ್ಟುವಾಗ ನಾವು ಎಂದೂ ವಿರೋಧ ಮಾಡಿಲ್ಲ. ನಮ್ಮ ದೇವಸ್ಥಾನ ನಮ್ಮ ಹಕ್ಕು. ಕಾನೂನು ಸುವ್ಯವಸ್ಥೆಗೆ ನಿರ್ವಹಣೆಗೆ ನಮ್ಮ ಸಹಕಾರ ಇದೆ. ಟಿಪ್ಪು ಹೆಸರನಿಲ್ಲ ಕಮಾನು ಮಾಡಿದರೆ ಖಂಡಿತ ತಡೆಯುತ್ತೇನೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Fri, 16 September 22