ರಾಮಲಲ್ಲಾ ಪ್ರತಿಷ್ಟಾಪನೆ ದಿನ ಮಸಿದಿ ಕೆಡವುವ ಸಂಕಲ್ಪ: ಸಂಸದ ಅನಂತ ಕುಮಾರ ಹೆಗಡೆ ಹೇಳಿಕೆ ವೈರಲ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jan 25, 2024 | 10:50 PM

ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪವನ್ನು ಸಂಸದ ಅನಂತ ಕುಮಾರ್ ಹೆಗಡೆ ತೊಟ್ಟಿದ್ದರು. ಜನವರಿ 22 ರಂದು ನೀಡಿದ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ದೇಶದ ಹಲವೆಡೆ ಇಂತಹ ಸಾವಿರಾರು ದೇವಸ್ಥಾನಗಳಿಗೆ ಅಪಮಾನವಾಗಿದೆ. ಅಪಮಾನ ಸಹಿಸಿಕೊಂಡು ಕುಳಿತುಕೊಳ್ಳಲು ನಮ್ಮಿಂದ ಆಗುವುದಿಲ್ಲ. ಇಂದಲ್ಲ ನಾಳೆ ಬಡ್ಡಿ ಸಮೇತ ವಸೂಲಿ ಮಾಡುವ ಕೆಲಸವಾಗಬೇಕಿದೆ.

ರಾಮಲಲ್ಲಾ ಪ್ರತಿಷ್ಟಾಪನೆ ದಿನ ಮಸಿದಿ ಕೆಡವುವ ಸಂಕಲ್ಪ: ಸಂಸದ ಅನಂತ ಕುಮಾರ ಹೆಗಡೆ ಹೇಳಿಕೆ ವೈರಲ್​
ಸಂಸದ ಅನಂತ ಕುಮಾರ ಹೆಗಡೆ
Follow us on

ಕಾರವಾರ, ಜನವರಿ 25: ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪವನ್ನು ಸಂಸದ ಅನಂತ ಕುಮಾರ್ ಹೆಗಡೆ (Anantha Kumar Hegde) ತೊಟ್ಟಿದ್ದರು. ಜನವರಿ 22 ರಂದು ನೀಡಿದ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ನಿಮ್ಮೆಲ್ಲರ ಪ್ರಯತ್ನದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ನೀವೆಲ್ಲರೂ ಇಟ್ಟಿಗೆ ಕಳುಹಿಸಿದ್ರಿ, ಕೈಲಾದಷ್ಟು ಧನ ಸಹಾಯ ಮಾಡಿದ್ರಿ. ಕಾಶಿ, ಮಥುರಾ ನಮ್ಮ ಕೈಸೇರಬೇಕಿದೆ. ಶಿರಸಿಯ ದೊಡ್ಡ ಮಸೀದಿ ಜಾಗದಲ್ಲಿ ವೀರ ವಿಠ್ಠಲನ ದೇವಸ್ಥಾನವಿತ್ತು. ಇಂದಿಗೂ ನಮ್ಮ ವಕೀಲರು ಕೇಸ್ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ದೇಶದ ಹಲವೆಡೆ ಇಂತಹ ಸಾವಿರಾರು ದೇವಸ್ಥಾನಗಳಿಗೆ ಅಪಮಾನವಾಗಿದೆ. ಅಪಮಾನ ಸಹಿಸಿಕೊಂಡು ಕುಳಿತುಕೊಳ್ಳಲು ನಮ್ಮಿಂದ ಆಗುವುದಿಲ್ಲ. ಇಂದಲ್ಲ ನಾಳೆ ಬಡ್ಡಿ ಸಮೇತ ವಸೂಲಿ ಮಾಡುವ ಕೆಲಸವಾಗಬೇಕಿದೆ. ನಮ್ಮ ಧರ್ಮ ಸಂಸ್ಕೃತಿಗೆ ಅಪಮಾನವಾಗಿರುವಲ್ಲಿ ಮೆಟ್ಟಿ ನಿಲ್ಲಬೇಕಿದೆ. ಈ ವೀರ ಸಂಕಲ್ಪವನ್ನು ನೀವೆಲ್ಲರೂ ಮಾಡಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್ತಿಗೆ ಯೋಗ್ಯರನ್ನು ಆರಿಸಿ; ಸಿಎಂ ಸಿದ್ದರಾಮಯ್ಯಗೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರ

ಇಷ್ಟು ದಿನ ಸೈಲೆಂಟ್ ಆಗಿದ್ದ ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಇತ್ತೀಚೆಗೆ ಮತ್ತೆ ಸಿಡಿದೆದ್ದಿದ್ದರು. ಲೋಕಸಭೆ ಚುನಾವಣೆ ಸಮೀಪಿಸ್ತಿದ್ದಂತೆ ಮತ್ತೆ ತಮ್ಮ ನಾಲಗೆಗೆ ಕೆಲಸ ಕೊಟ್ಟಿದ್ದರು. ಮಾತೆತ್ತಿದರೆ ಹಿಂದುತ್ವದ ಜಪ ಮಾಡುವ ಅನಂತ್ ಕುಮಾರ್ ಹೆಗಡೆ ಕುಮಟಾದಲ್ಲಿ ತಮ್ಮ ಹಳೆಯ ಶೈಲಿಯಲ್ಲೇ ಮಾತಿನ ಮಾಲೆಯನ್ನೇ ಪೋಣಿಸಿದ್ದರು.

ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದಲ್ಲೂ ಚಿನ್ನದ ಪಳ್ಳಿ ಮಸೀದಿ ನಿರ್ನಾಮ ಮಾಡುತ್ತೇವೆ. ಇದು ಅನಂತಕುಮಾರ ಹೆಗಡೆ ತೀರ್ಮಾನ ಅಲ್ಲ. ಇದು ಹಿಂದೂ ಸಮಾಜದ ತೀರ್ಮಾನ ಅಂತಾ ಹೇಳಿದ್ದಾರೆ. ಇದನ್ನು ಬೇಕಾದರೇ ಬೆದರಿಕೆ ಅಂತ ಬೇಕಾದರೂ ತಿಳಿದುಕೊಳ್ಳಿ ಅಂತ ಗುಡುಗಿದ್ದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್​ ಕಾಂಗ್ರೆಸ್​ಗೆ ಶೆಟರ್ ಹಾಕಿ ಬಿಜೆಪಿಗೆ ವಾಪಸ್ ಆಗಿದ್ಯಾಕೆ? ಇಲ್ಲಿವೆ ಕಾರಣಗಳು

ಸಿಎಂ ಸಿದ್ದರಾಮಯ್ಯ ವಿರುದ್ಧವೂ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದರು. ರಾಮಮಂದಿರ ಉದ್ಘಾಟನೆಗೆ ನೀನು ಬರು ಬಿಡು ಆದರೆ ಉದ್ಘಾಟನೆ ನಿಲ್ಲಲ್ಲ ಮಗನೇ ಅಂತ ಏಕವಚನದಲ್ಲೇ ಕೆಂಡಕಾರಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ ಅದು ಅವರ ಸಂಸ್ಕೃತಿ ಅಂತ ತಿರುಗೇಟು ಕೊಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:44 pm, Thu, 25 January 24