AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanikatta Salt: ಹವಾಮಾನ ವೈಪರೀತ್ಯದಿಂದ ಶೂನ್ಯವಾದ ಉಪ್ಪು ಸಂಗ್ರಹ! ಉಪ್ಪು ಉತ್ಪಾದನೆಯಾಗದೇ ಸಾಣಿಕಟ್ಟಾ ಘಟಕ ಸ್ಥಗಿತ

ನೈಸರ್ಗಿಕವಾಗಿ ಉತ್ಪಾದನೆಯಾಗುವ ಈ ಉಪ್ಪು ಹೆಚ್ಚು ರುಚಿಯ ಜೊತೆಗೆ ಔಷಧೀಯ ಸತ್ವ ಸಹ ಹೊಂದಿದೆ. ಹೀಗಾಗಿ ಈ ಉಪ್ಪನ್ನು ಔಷಧ, ಮಾವಿನ ಉಪ್ಪಿನಕಾಯಿ ತಯಾರಿಕೆ, ಒಣಮೀನು ತಯಾರಿಕೆ ಹಾಗೂ ಅಡುಗೆಗೆ ಹೆಚ್ಚಿನದಾಗಿ ಬಳಸಲಾಗುತ್ತದೆ.

Sanikatta Salt: ಹವಾಮಾನ ವೈಪರೀತ್ಯದಿಂದ ಶೂನ್ಯವಾದ ಉಪ್ಪು ಸಂಗ್ರಹ! ಉಪ್ಪು ಉತ್ಪಾದನೆಯಾಗದೇ ಸಾಣಿಕಟ್ಟಾ ಘಟಕ ಸ್ಥಗಿತ
ಉಪ್ಪು ಉತ್ಪಾದನೆಯಾಗದೇ ಸಾಣಿಕಟ್ಟಾ ಘಟಕ ಸ್ಥಗಿತ
TV9 Web
| Edited By: |

Updated on:Nov 10, 2022 | 1:12 PM

Share

ಅಡುಗೆಗೆ ಉಪ್ಪು ಇಲ್ಲವೆಂದರೆ ಬಾಯಿ ರುಚಿಸುವುದೆ ಇಲ್ಲ. ಅಂದರೆ ಮಾರುಕಟ್ಟೆಯಲ್ಲಿ ಉಪ್ಪೇ ಸಿಗದಿದ್ದರೇ ಹೇಗಾಗಬೇಡ. ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ ಉಪ್ಪಿಗೆ ಬರ ಬಂದಿದೆ. ಸಾಂಪ್ರದಾಯಿಕ ಕೆಂಪು ಉಪ್ಪು ಉತ್ಪಾದನಾ ಘಟಕ ಇದೀಗ ಬಂದ್ ಆಗಿದ್ದು ಉಪ್ಪಿನ ದರ ಗಗನಕ್ಕೇರಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹವಾಮಾನ ವೈಪರಿತ್ಯದಿಂದ ಶೂನ್ಯವಾದ ಉಪ್ಪು ಸಂಗ್ರಹ:

ಉಪ್ಪಿನ ರುಚಿಗೆ ಬೆಲೆ ಕಟ್ಟಲಾಗದು. ಯಾವುದೇ ಆಹಾರಕ್ಕಾದರೂ ಉಪ್ಪಿಲ್ಲದೇ ರುಚಿಸಲಾರದು. ಹೀಗಿರುವಾಗ ಮಾರುಕಟ್ಟೆಯಲ್ಲಿ ಉಪ್ಪು (Salt) ದುಬಾರಿಯಾದರೇ ಅಥವಾ ಉಪ್ಪು ಸಿಗದೇ ಹೋದರೆ ಹೇಗಾಗಬಹುದು? ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಉಪ್ಪಿನ ಬೆಲೆ ಹೆಚ್ಚಳವಾಗಿದೆ. ಒಂದು ಪ್ಯಾಕೇಟ್‌ ಸಾಣಿಕಟ್ಟಾ ಉಪ್ಪಿನ ದರ ₹ 20 ಇದೆ. ಆದರೇ ಮಾರುಕಟ್ಟೆಯಲ್ಲಿ ಈ ಉಪ್ಪಿಗೆ ₹ 40 ನೀಡಬೇಕು. ಅರೇ ಇದೇಕೆ? ಎಂಬ ಪ್ರಶ್ನೆ ಏಳುವುದು ಸಹಜ. ಹೌದು ಕರಾವಳಿ ಭಾಗದ ಕುಮಟಾ ತಾಲೂಕಿನ ಸಾಣಿಕಟ್ಟಾದಲ್ಲಿ ಸಂಪ್ರದಾಯಿಕವಾಗಿ ಉಪ್ಪನ್ನು ತಯಾರಿಸಲಾಗುತ್ತದೆ. ಇಲ್ಲಿ ವಿಶಾಲವಾದ 420 ಎಕರೆ ಪ್ರದೇಶದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಉಪ್ಪು ತಯಾರಿಸಲಾಗುತ್ತಿದೆ (Sanikatta Salt).

ನಾಗರಬೈಲ್ ಉಪ್ಪು ತಯಾರಕರ ಸಹಕಾರಿ ಸಂಘ (Nagarbail salt owners coop society, Sanikatta, Uttara Kannada) ಉಪ್ಪು ಉತ್ಪಾದನೆ ಮಾಡುತ್ತಿದ್ದು, ಪ್ರತಿ ವರ್ಷ 10 ಸಾವಿರ ಟನ್ ಗೂ ಹೆಚ್ಚು ಉಪ್ಪನ್ನು ಉತ್ಪಾದನೆ ಮಾಡುತ್ತಿದೆ. ಹೀಗೆ ಉತ್ಪಾದನೆಯಾದ ಉಪ್ಪು ಸಾಣಿಕಟ್ಟಾ ಉಪ್ಪು ಎಂಬ ಹೆಸರಿನಲ್ಲಿ ಉತ್ತರ ಕನ್ನಡ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಶಿವಮೊಗ್ಗ, ಮೈಸೂರು ಹಾಗೂ ನೆರೆಯ ಗೋವಾಕ್ಕೆ ಸಹ ರಫ್ತು ಮಾಡಲಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಉಪ್ಪಿಗೆ ಬರ:

ನೈಸರ್ಗಿಕವಾಗಿ ಉತ್ಪಾದನೆಯಾಗುವ ಈ ಉಪ್ಪು ಹೆಚ್ಚು ರುಚಿಯ ಜೊತೆಗೆ ಔಷಧೀಯ ಸತ್ವ ಸಹ ಹೊಂದಿದೆ. ಹೀಗಾಗಿ ಈ ಉಪ್ಪನ್ನು ಔಷಧ, ಮಾವಿನ ಉಪ್ಪಿನಕಾಯಿ ತಯಾರಿಕೆ, ಒಣಮೀನು ತಯಾರಿಕೆ ಹಾಗೂ ಅಡುಗೆಗೆ ಹೆಚ್ಚಿನದಾಗಿ ಬಳಸಲಾಗುತ್ತದೆ. ಇಲ್ಲಿನ ಉಪ್ಪು ಬಣ್ಣದಲ್ಲಿ ಕೆಂಪಾಗಿದ್ದು ವಿಶೇಷ ಬೇಡಿಕೆ ಸಹ ಹೊಂದಿದೆ. ಆದರೆ ಕಳೆದ ಮೂರು ವರ್ಷದಿಂದ ವಿಪರೀತ ಮಳೆ, ಹವಾಮಾನ ವೈಪರೀತ್ಯದಿಂದ ಉಪ್ಪು ಉತ್ಪಾದನೆಯಲ್ಲಿ ಇಳಿಕೆ ಕಂಡಿದ್ದು, ಕಳೆದ ವರ್ಷ 10 ಸಾವಿರ ಟನ್ ಉತ್ಪಾದನೆಯಾಗುವ ಜಾಗದಲ್ಲಿ ಕೇವಲ ಮೂರು ಸಾವಿರ ಟನ್ ಮಾತ್ರ ಉತ್ಪಾದನೆಯಾಗಿದೆ. ಇನ್ನು ಈ ವರ್ಷ ಅದಕ್ಕಿಂತಲೂ ಪಾತಾಳ ಕಚ್ಚಿದ್ದು, ಉಪ್ಪು ಉತ್ಪತ್ತಿಯಾಗದೇ ಘಟಕವನ್ನು ಮುಂದಿನ ಫೆಬ್ರವರಿಯವರೆಗೆ ಸ್ಥಗಿತ ಮಾಡಲಾಗಿದೆ ಎನ್ನುತ್ತಾರೆ ಅರುಣ್ ನಾಡಕರ್ಣಿ, ನಾಗರಬೈಲ್ ಸಾಣಿಕಟ್ಟಾ ಉಪ್ಪು ತಯಾರಿಕಾ ಸಂಘದ ಅಧ್ಯಕ್ಷ.

Also Read: 3 ವರ್ಷ ಕಳೆಯುತ್ತ ಬಂದರೂ ಪೂರ್ಣಗೊಳ್ಳದ ರಾಮನಗರ ಹೈಟಕ್ ಜಿಲ್ಲಾಸ್ಪತ್ರೆ ಕಾಮಗಾರಿ; ರೋಗಿಗಳ ಪರದಾಟ

ಸಾಣಿಕಟ್ಟಾದಲ್ಲಿ ಉಪ್ಪು ಉತ್ಪಾದನೆ ಇಳಿಕೆಯಾಗುತಿದ್ದಂತೆ ನಾಗರಬೈಲ್ ಉಪ್ಪು ತಯಾರಿಕ ಸಹಕಾರಿ ಸಂಘ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಉಪ್ಪನ್ನು ಸರಬರಾಜು ಮಾಡುವಲ್ಲಿ ಸಾಧ್ಯವಾಗಿಲ್ಲ. ಅದಲ್ಲದೇ ಈ ವರ್ಷ ಉಪ್ಪು ಉತ್ಪಾದನೆಯಾಗದೇ ಸಂಪೂರ್ಣ ಸ್ಥಗಿತ ಮಾಡಿರುವುದರಿಂದ ಹೆಚ್ಚು ಬೇಡಿಕೆಯಿರುವ ಈ ಉಪ್ಪು ಇದೀಗ ಜಿಲ್ಲೆಯಲ್ಲಿ ಒಂದು ಪ್ಯಾಕೇಟ್ ಗೆ ₹ 40 ಏರಿಕೆ ಕಂಡಿದೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದಲ್ಲದೇ ಸದ್ಯ ಮಾರುಕಟ್ಟೆಯಲ್ಲಿ ಕೆಂಪು ಉಪ್ಪು ಸಿಗದೇ ತೊಂದರೆಯಾಗಿದ್ದು ಗುಜರಾತ್ ನಿಂದ ಬರುವ ಬಿಳಿ ಉಪ್ಪನ್ನು ಬಳಸುವಂತಾಗಿದೆ. ಇನ್ನು ಈ ಕುರಿತು ಬಳಕೆದಾರರು ಸಾಣಿಕಟ್ಟ ಉಪ್ಪುನ್ನ ಬಳಕೆ ಮಾಡುವ ನಮಗೆ ಮಾರುಕಟ್ಟೆಗೆ ಬರುವ ಬೇರೆ ಬೇರೆ ಉಪ್ಪನ್ನ ಬಳಕೆ ಮಾಡಲು ಆಗುವುದಿಲ್ಲ. ನೈಸರ್ಗಿಕ ಸಾಣಿಕಟ್ಟಾ ಉಪ್ಪನ್ನು ನಾವು ಬಳಕೆ ಮಾಡುತ್ತೇವೆ. ಹೇರಳವಾಗಿ ಉಪ್ಪು ಸಿಕ್ಕರೆ ಅನುಕೂಲವಾದೀತು. ಮಾರುಕಟ್ಟೆಯಲ್ಲಿ ದರ ಕೂಡ ಹೆಚ್ಚಾಗುವುದಿಲ್ಲ ಎನ್ನುತ್ತಾರೆ ಸ್ಥಳೀಯ ಸಂತೋಷ ಗುರುಮಠ. (ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ)

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Thu, 10 November 22

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ