AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನ: ಅಪಾರ ಮೌಲ್ಯದ ಚಿನ್ನಾಭರಣ ದೋಚಿದ ದರೋಡೆಕೋರರು

ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ 10 ಗಂಟೆಯಲ್ಲಿ ಸಹಕಾರ ಸಂಘಕ್ಕೆ ನುಗ್ಗಿ ದರೋಡೆ ಮಾಡಿದ್ದು, 6 ಜನರಿದ್ದ ಮುಸುಕುಧಾರಿಗಳಿಂದ ಚಿನ್ನಾಭರಣ ಕಳುವು ಮಾಡಲಾಗಿದೆ.

ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನ: ಅಪಾರ ಮೌಲ್ಯದ ಚಿನ್ನಾಭರಣ ದೋಚಿದ ದರೋಡೆಕೋರರು
ವ್ಯವಸಾಯ ಸೇವಾ ಸಹಕಾರಿ ಸಂಘ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 01, 2022 | 11:42 AM

Share

ಕಾರವಾರ: ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಪಾರ ಮೌಲ್ಯದ ಚಿನ್ನಾಭರಣವನ್ನು ದರೋಡೆಕೋರರು ದೋಚಿಕೊಂಡು ಹೋಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ 10 ಗಂಟೆಯಲ್ಲಿ ಸಹಕಾರ ಸಂಘಕ್ಕೆ ನುಗ್ಗಿ ದರೋಡೆ ಮಾಡಿದ್ದು, 6 ಜನರಿದ್ದ ಮುಸುಕುಧಾರಿಗಳಿಂದ ಚಿನ್ನಾಭರಣ ಕಳುವು ಮಾಡಲಾಗಿದೆ. ಕಾವಲುಗಾರ ಮಾದೇವಪ್ಪ ತಳವಾರ ಕೈ ಕಾಲು ಕಟ್ಟಿ ದರೋಡೆಕೋರರು ಚಿನ್ನಾಭರಣ ದೋಚಿದ್ದಾರೆ. ಸಹಕಾರ ಸಂಘದಲ್ಲಿದ್ದ ಕಬ್ಬಿಣದ ಕಪಾಟುಗಳನ್ನು ಮುರಿದು, ಗ್ಯಾಸ್​​​ ಕಟರ್​ ಬಳಸಿ ಕಬ್ಬಿಣದ ಬಾಗಿಲು ಮುರಿದು ಚಿನ್ನಾಭರಣ ಲೂಟಿ ಮಾಡಲಾಗಿದೆ.

ಇಂದು ಮುಂಜಾನೆ 4 ಗಂಟೆಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮುಂಡಗೋಡು ಪೊಲೀಸರು ಭೇಟಿ, ಪರಿಶೀಲನೆ ಮಾಡಿದರು. ಸಹಕಾರ ಸಂಘದಲ್ಲಿ ಸಾರ್ವಜನಿಕರು ಚಿನ್ನಾಭರಣ ಅಡವಿಟ್ಟಿದ್ದು, ಸಹಕಾರ ಸಂಘದ ಬಳಿ  ರೈತರು, ಸಾರ್ವಜನಿಕರು ಜಮಾಯಿಸಿದ್ದಾರೆ. ಈ ಹಿಂದೆಯೂ ಸಹಕಾರ ಸಂಘದಲ್ಲಿ ಕಳ್ಳತನದ ಯತ್ನ ನಡೆದಿತ್ತು ಎನ್ನಲಾಗುತ್ತಿದೆ.

ಯುವಕರಿಬ್ಬರಿಂದ ಸುಲಿಗೆ ಮಾಡಿದ್ದ ಇಬ್ಬರು ಮಂಗಳಮುಖಿಯರ ಬಂಧನ:

ಬೆಂಗಳೂರು: ಯುವಕರಿಬ್ಬರಿಂದ ಸುಲಿಗೆ ಮಾಡಿದ್ದ ಇಬ್ಬರು ಮಂಗಳಮುಖಿಯರನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿರುವಂತಹ ಘಟನೆ ವೈಟ್ ಫೀಲ್ಡ್​​ನ ಪ್ರಶಾಂತ್ ನಗರದಲ್ಲಿ ಆಗಸ್ಟ್ 30ರ ಮಧ್ಯಾಹ್ನ 2.30 ರಂದು ನಡೆದಿದೆ. ಇಬ್ಬರು ಮಂಗಳ ಮುಖಿಯರು ಯುವಕರ ಬಳಿ ಹಣ ಕೇಳಿದ್ದಾರೆ. ಯುವಕರು 10 ರೂಪಾಯಿ ನೀಡಿದ್ದು, ಈ ವೇಳೆ ಒಂದು ರೂಪಾಯಿ ಚಿಲ್ಲರೆ ಹಣ ನೀಡ್ತಿನಿ, ಪರ್ಸ್​ನಲ್ಲೆ ಒಂದು ರೂಪಾಯಿ ಇಡುತ್ತೇನೆ ಪರ್ಸ್ ಹೊರತೆಗೆಯುವಂತೆ ಮಂಗಳಮುಖಿಯರು ಹೇಳಿದ್ದು, ಈ ವೇಳೆ ಯುವಕ ಪರ್ಸ್ ಹೊರ ತೆಗೆದಿದ್ದು, ಪರ್ಸ್​ನಲ್ಲಿದ್ದ 3 ಸಾವಿರ ಹಣ ಕಸಿದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ವೈಟ್ ಫೀಲ್ಡ್ ಠಾಣೆಯಲ್ಲಿ ಯವಕರು ದೂರು ದಾಖಲಿಸಿದ್ದು, ಖಾಕಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ತನ್ನ ಜತೆ ಮಾತನಾಡುತ್ತಿಲ್ಲ ಎಂದು ಬಾಲಕಿಯ ಮೇಲೆ ಗುಂಡು ಹಾರಿಸಿದ ಇಬ್ಬರು ಆರೋಪಿಗಳ ಬಂಧನ

ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಕದ್ದು ಕಳ್ಳರು ಪರಾರಿ

ಹಾಸನ: ಆಟೋಮೊಬೈಲ್ಸ್ ಅಂಗಡಿಯಲ್ಲಿ 13 ಸಾವಿರ ನಗದು ಹಾಗೂ ಮೂರು ಲಕ್ಷ ಬೆಲೆ ಬಾಳುವ ಯೂಪಿಎಸ್, ಬ್ಯಾಟರಿ ಇತರೆ ವಸ್ತುಗಳನ್ನು ದೋಚಿ ಕಳ್ಳರು ಪರಾರಿಯಾಗಿರುವಂತಹ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ, ಹುಳಿಯಾರು ರಸ್ತೆಯ, ಶಿವಾಲಯ ಬಳಿ ನಡೆದಿದೆ. ಆಟೋ ಮೊಬೈಲ್ಸ್ ಅಂಗಡಿ ಹಾಗೂ ಗ್ಯಾರೇಜ್ ಮುಂದೆ ನಿಂತಿದ್ದ ವಾಹನಗಳಿಂದ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಹೈಟೆಕ್ ಆಟೋಮೊಬೈಲ್ಸ್ ಸಯ್ಯದ್ ಶರೀಫ್ ಎಂಬುವವರಿಗೆ ಸೇರಿದ್ದು, ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಮೂರು ವಾಹಗಳಲ್ಲಿಯೂ ಕಳ್ಳತನ ಮಾಡಲಾಗಿದೆ. ವಾಹನಗಳ ಗ್ಲಾಸ್ ಹೊಡೆದು ಬೆಲೆ ಬಾಳುವ ವಸ್ತುಗಳನ್ನು ಕದ್ದು ಚೋರರು ಎಸ್ಕೇಪ್ ಆಗಿದ್ದು, ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರೈಲಿಗೆ ಸಿಲುಕಿ ಅಪರಿಚಿತ ಯುವಕ ಸಾವು:

ಕೋಲಾರ: ರೈಲಿಗೆ ಸಿಲುಕಿ ಅಪರಿಚಿತ ಯುವಕ ಸಾವನ್ನಪ್ಪಿರುವಂತಹ ಘಟನೆ ನಗರದ ಕೀಲುಕೋಟೆ ಬಡಾವಣೆ ಬಳಿ ನಡೆದಿದೆ. ಯುವಕನ ಕುರಿತು ಮಾಹಿತಿ ಸಿಕ್ಕಿಲ್ಲ, ಸ್ಥಳಕ್ಕೆ ಬಂಗಾರಪೇಟೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.